ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮರ್ಕಲ್ ಸಂಜೀವಿನಿ ಗ್ರಾ.ಪಂ ಮಟ್ಟದ ಮಾಸಿಕ ಸಂತೆಯನ್ನು ಕಿಗ್ಗಾ ಶ್ರೀ ಶಾಂತ ಸಮೇತ ಶ್ರೀ ಋಷ್ಯಶೃಂಗ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಡೆಸಲಾಯಿತು.
ಇದನ್ನೂ ಓದಿ; ಗ್ರಾಪಂ ನೌಕರರ ಗಮನಕ್ಕೆ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ!

ಮರ್ಕಲ್ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಸುಮಿತ್ರ ಸೋಮಶೇಖರ್ ಮಾಸಿಕ ಸಂತೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಮ್ಮ ಒಕ್ಕೂಟದ ಸದಸ್ಯರು ತಯಾರಿಸಿದ ಉತ್ಪನ್ನವು ರಾಜ್ಯವನ್ನು ಪ್ರತಿನಿಧಿಸಿದೆ. ಇನ್ನು ಮುಂದೆಯೂ ಸ್ಥಳೀಯವಾಗಿ ಉತ್ಪನ್ನಗಳನ್ನು ತಯಾರಿಸಲು ಉತ್ತೇಜನ ನೀಡಲಾಗುವುದು ಎಂದರು.
ಇದನ್ನೂ ಓದಿ; ರಾಜ್ಯ ಸರ್ಕಾರದಿಂದ ನಿರುದ್ಯೋಗಿಗಳಿಗೆ ಭರ್ಜರಿ ಸುದ್ದಿ; ಡ್ರೈವಿಂಗ್ ಸೇರಿ ವಿವಿಧ ತರಬೇತಿಗೆ ಅರ್ಜಿ ಆಹ್ವಾನ!
ಸ್ವಸಹಾಯ ಸಂಘದ ಮಹಿಳೆಯರು ತಾವು ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ತಮ ವೇದಿಕೆ ಕಲ್ಪಿಸಿದಂತಾಗಿದೆ. ಪ್ರಸುತ್ತ ದಿನಗಳಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಅಭಿವೃದ್ಧಿ ಕಾಣಲು NRLM ಸಹಕಾರಿಯಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹೇಶ್ ಹೇಳಿದರು.
ಇದನ್ನೂ ಓದಿ; ರೇಷನ್ ಕಾರ್ಡ್ ಪಡೆಯಲು ಇರುವ ಮಾನದಂಡಗಳೇನು?; ಇಲ್ಲಿದೆ ನೋಡಿ ಮಾಹಿತಿ
ಮರ್ಕಲ್ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಧನಲಕ್ಷ್ಮೀ, ಪದಾಧಿಕಾರಿಗಳು, ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ರಘುವೀರ್, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಆದರ್ಶ್, ಕೃಷಿಯೇತರ ತಾಲ್ಲೂಕು ವ್ಯವಸ್ಥಾಪಕರಾದ ಚೈತ್ರ, ಉದ್ಯಮ ಪ್ರವರ್ತಕರಾದ ಪವಿತ್ರ, ಎಂ ಬಿ ಕೆ ಮಮತಾ, LCRP, KS, PS ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಸಂತೆಯಲ್ಲಿ 18 ಮಳಿಗೆಗಳು ಭಾಗವಹಿಸಿದ್ದು, 46,980/- ರೂಗಳ ಆದಾಯವನ್ನು ಗಳಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ಇದನ್ನೂ ಓದಿ; ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ರೆ ಜಸ್ಟ್ ಹೀಗೆ ಮಾಡಿ; ಇಲ್ಲಿದೆ ಡಿಟೈಲ್ಸ್












