ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಐ.ಡಿ.ಎಫ್.ಸಿ. ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸರಸ್ವತಿಪುರ ಗ್ರಾಮದಲ್ಲಿ ನಡೆದಿದೆ. ವೆಂಕಟೇಶ್ (57) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
ಇದನ್ನೂ ಓದಿ: ಕೇಂದ್ರದಿಂದ ಕಡಿಮೆ ದರಕ್ಕೆ ಅಕ್ಕಿ!; FSI ಗೆ ಸೂಚಿಸಿದ ಆಹಾರ ಇಲಾಖೆ

ವೆಂಕಟೇಶ್ ಅವರು ಪಡೆದಿದ್ದ ಪರ್ಸನಲ್ ಲೋನ್ ಅನ್ನು ಬ್ಯುಸಿನೆಸ್ ಲೋನ್ ಆಗಿ ಬ್ಯಾಂಕ್ ಸಿಬ್ಬಂದಿ ಪರಿವರ್ತಿಸಿದ್ದಾರೆ. 5 ಲಕ್ಷ ಸಾಲ ತೀರಿಸಿದ್ದರೂ ಮತ್ತೆ 47 ಸಾವಿರ ಕಟ್ಟುವಂತೆ ಕಿರುಕುಳ ನೀಡಿದ್ದಾರೆ. ಅಲ್ಲದೆ ಸಾಲ ತೀರಿಸಿದ್ದರೂ ಕೂಡ ಎನ್.ಓ.ಸಿ. ನೀಡದೆ ಮತ್ತಷ್ಟು ಹಣ ಕಟ್ಟುವಂತೆ ಮನೆಗೆ ಬರುವ ಬ್ಯಾಂಕ್ ಸಿಬ್ಬಂದಿ ನಿತ್ಯ ಫೋನ್ ಮಾಡಿ ಹಿಂಸೆ ಕೊಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಪಂಪ್ಸೆಟ್ ಹೊಂದಿರುವವರಿಗೆ ಹೊಸ ಆದೇಶ ಹೊರಡಿಸಿದ ಇಂಧನ ಇಲಾಖೆ; ಏನದು ಹೊಸ ಆದೇಶ, ಇಲ್ಲಿದೆ ನೋಡಿ
ಇನ್ನು ಈ ಕುರಿತು ಕಡೂರು ಪೊಲೀಸ್ ಠಾಣೆಗೆ ವೆಂಕಟೇಶ್ ಕುಟುಂಬ ದೂರು ನೀಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












