ಕೊನೆಗೂ ಶೃಂಗೇರಿ 100 ಬೆಡ್ ಆಸ್ಪತ್ರೆಗೆ ಜಾಗ ಮಂಜೂರಾತಿಯಾಗಿದೆ, ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಹಾಗೂ ಶೃಂಗೇರಿ ಜನತೆಯ 18 ವರ್ಷಗಳ ಬೇಡಿಕೆ ಹಾಗೂ ಕಳೆದ 5 ವರ್ಷಗಳ ಐತಿಹಾಸಿಕ ಹೋರಾಟಕ್ಕೆ ಸಿಕ್ಕ ಜಯ ಸಿಕ್ಕಂತಾಗಿದೆ.
ಶೃಂಗೇರಿ ತಾಲ್ಲೂಕಿನ ಬೆಳಂದೂರಿನ ಸರ್ವೇ ನಂ. 295 ಹಾಗೂ 293ರಲ್ಲಿ ಒಟ್ಟು 2.5 ಎಕರೆ ಭೂಮಿ ಮಂಜೂರಾತಿ ಮಾಡಲಾಗಿದೆ.

ಇದನ್ನೂ ಓದಿ: ವಿಕಲಚೇತನ ಆರೈಕೆದಾರರಿಗೆ 1000 ರೂ.ಪ್ರೋತ್ಸಾಹಧನ; ಈ ರೀತಿ ಅರ್ಜಿ ಸಲ್ಲಿಸಿ
ಈ ಹಿಂದೆ ಹಲವು ಜಾಗಗಳನ್ನು ಗುರುತಿಸಲಾಗಿತ್ತಾದರೂ ಅರಣ್ಯ ಕಾಯ್ದೆಗಳ ಕಾರಣದಿಂದ ಮಂಜೂರಾತಿ ಸಾಧ್ಯವಾಗಿರಲಿಲ್ಲ, ಈಗ ಹೊಸ ಜಾಗ ಗುರುತಿಸಿದ್ದು ಮಂಜೂರಾತಿಯೂ ಆಗಿದೆ.
ಇದು ಶೃಂಗೇರಿ ಪಟ್ಟಣದಿಂದ 2 ಕಿಲೋಮೀಟರ್ ದೂರದ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇದ್ದು, 2.5 ಎಕರೆ ಜೊತೆಗೆ ಹೆಚ್ಚುವರಿಯಾಗಿ ಖಾಸಗಿಯವರ ಅರ್ಧ ಎಕರೆ ಜಾಗ ಹೆಚ್ಚುವರಿಯಾಗಿ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ
5 ವರ್ಷಗಳ ಹೋರಾಟ:
ಶೃಂಗೇರಿ ತಾಲೂಕಿನ ಯುವಕರ ತಂಡವೊಂದು ಪಕ್ಷಾತೀತವಾಗಿ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಎಂಬ ತಂಡ ಮಾಡಿಕೊಂಡು 5 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿತ್ತು, ಆಹೋರಾತ್ರಿ ಧರಣಿ ಸತ್ಯಾಗ್ರಹ, ಶೃಂಗೇರಿ ಬಂದ್, ಪೋಸ್ಟ್ ಕಾರ್ಡ್ ಅಭಿಯಾನ, ಬ್ಯಾನರ್ ಅಭಿಯಾನ, ರಸ್ತೆ ಸುರಕ್ಷತಾ ಅಭಿಯಾನ, ಸೇರಿದಂತೆ ಹಲವು ಬಾರಿ ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹೋರಾಟ ನಡೆಸಿತ್ತು. ಹಲವಾರು ಸಂಘ ಸಂಸ್ಥೆಗಳು ಈ ಹೋರಾಟಕ್ಕೆ ಬೆಂಬಲ ನೀಡಿದ್ದವು.
ಶೃಂಗೇರಿ ತಾಲೂಕು ತಹಸೀಲ್ದಾರ್ ಅನೂಪ್, ಜಿಲ್ಲಾಧಿಕಾರಿಗಳಾದ ಮೀನಾ ನಾಗರಾಜ್ ಹಾಗೂ ಬಜೆಟ್ ನಲ್ಲಿ ಅನುದಾನ ಇರಿಸಿದ ಹಾಗೂ ಮಂಜೂರಾತಿಗೆ ಶ್ರಮ ವಹಿಸಿದ ಈಗಿನ ಶಾಸಕರಾದ ಟಿ.ಡಿ ರಾಜೇಗೌಡ ಹಾಗೂ 2007ರಲ್ಲಿ ಆಸ್ಪತ್ರೆ ಮಂಜೂರಾತಿ ಮಾಡಿಸಿದ್ದ ಹಿಂದಿನ ಶಾಸಕ ಡಿ.ಎನ್ ಜೀವರಾಜ್, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಎಲ್ಲರಿಗೂ ಆಸ್ಪತ್ರೆ ಹೋರಾಟ ಸಮಿತಿ ಧನ್ಯವಾದ ತಿಳಿಸಿದೆ.
ಇದನ್ನೂ ಓದಿ: ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಉದ್ಯೋಗ; 12,600 ಸಂಬಳ
ಹಾಗೂ ನಿರಂತರವಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಆಸ್ಪತ್ರೆ ಬೇಡಿಕೆಯ ವರದಿ ಪ್ರಕಟಿಸಿದ ಪತ್ರಿಕಾ ಮಿತ್ರರು, ಹಾಗೂ ಮಾಧ್ಯಮ ಸ್ನೇಹಿತರಿಗೂ ಹಾಗೂ ಕಳೆದ 5 ವರ್ಷಗಳಿಂದ ಯಾವುದೇ ಸ್ವಾರ್ಥವಿಲ್ಲದೆ ಈ ಹೋರಾಟಕ್ಕೆ ಕೈ ಜೋಡಿಸಿದ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಪದಾಧಿಕಾರಿಗಳು, ಶೃಂಗೇರಿಯ ಸಮಸ್ತ ಸಾರ್ವಜನಿಕರು, ವ್ಯಾಪಾರಿಗಳಿಗೂ ಆಸ್ಪತ್ರೆ ಹೋರಾಟ ಸಮಿತಿ ಧನ್ಯವಾದ ತಿಳಿಸಿದೆ.












