ಶೃಂಗೇರಿ ನೂರು ಬೆಡ್ ಆಸ್ಪತ್ರೆ ಜಾಗ ಮಂಜೂರಾತಿಗೆ ಒತ್ತಾಯಿಸಿ ಹಾಗೂ ಪ್ರಸೂತಿ ತಜ್ಞರು, ಮಕ್ಕಳ ತಜ್ಞರು ಹಾಗೂ ಮೂಳೆ ತಜ್ಞರ ನೇಮಕಕ್ಕೆ ಒತ್ತಾಯಿಸಿ ಬ್ಯಾನರ್ ಅಭಿಯಾನ ನಡೆಸಿದ್ದು, ಬ್ಯಾನರ್ ಅನ್ನು ರಾತ್ರೋರಾತ್ರಿ ತೆರವುಗೊಳಿಸಿದ್ದಕ್ಕೆ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ರೇಷನ್ ಕಾರ್ಡ್ ಮತ್ತೆ ಪರಿಷ್ಕರಣೆ!; ಅನರ್ಹರಿಗೆ ರದ್ದಾಗುತ್ತಾ?

ಶೃಂಗೇರಿ ತಾಲೂಕು ಆಸ್ಪತ್ರೆಗೆ ಪ್ರಸೂತಿ ತಜ್ಞರು, ಮೂಳೆ ತಜ್ಞರು ಹಾಗೂ ಮಕ್ಕಳ ತಜ್ಞರ ನೇಮಕ ಮಾಡಬೇಕು ಹಾಗೂ ನೂರು ಬೆಡ್ ಆಸ್ಪತ್ರೆ ಜಾಗ ಮಂಜೂರಾತಿಗೆ ತೋರುತ್ತಿರುವ ವಿಳಂಬ ನೀತಿಗೆ ಕಡಿವಾಣ ಹಾಕಿ ತುರ್ತಾಗಿ ಜಾಗ ಮಂಜೂರಾತಿ ಮಾಡಿ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಈ ಹಿಂದೆ ಗಡುವು ನೀಡಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಸ್ಪಂದನೆ ದೊರಕಿರುವುದಿಲ್ಲ.
ಆದ್ದರಿಂದ ಈಗ ಬ್ಯಾನರ್ ಚಳುವಳಿ ಹಮ್ಮಿಕೊಂಡಿದ್ದು ಈ ಕೆಳಗಿನ 3 ಬ್ಯಾನರ್ ಅನ್ನು ಪಟ್ಟಣದ ಸುತ್ತಮುತ್ತ ಅಳವಡಿಕೆ ಮಾಡಿದ್ದೇವೆ.



ಸೂಕ್ತ ಸರ್ಕಾರ ತಕ್ಷಣವೇ ಸ್ಪಂದಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ಕರೆ ನೀಡುತ್ತೇವೆ ಎಂದು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಎಚ್ಚರಿಸಿದೆ.
ಇದನ್ನೂ ಓದಿ: ಅಡುಗೆಮನೆಯಲ್ಲಿ ಈ 2 ಪಾತ್ರೆಗಳನ್ನ ಉಲ್ಟಾ ಇಡಬೇಡಿ!; ಲಕ್ಷ್ಮಿ ಮುನಿಸಿಗೆ ನೀವು ಬಡವರಾಗ್ತೀರಿ!
ರಾತ್ರೋರಾತ್ರಿ ಬ್ಯಾನರ್ ತೆರವು:
ನೆನ್ನೆ ರಾತ್ರಿ 11 ಗಂಟೆ ಸುಮಾರಿಗೆ ಪಟ್ಟಣದ ಸುತ್ತಮುತ್ತ ಕಟ್ಟಿದ್ದ ಬ್ಯಾನರ್ ಅನ್ನು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ, ಮಧ್ಯರಾತ್ರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಂದ ದೂರು ಪಡೆದು ಉದ್ದೇಶಪೂರ್ವಕವಾಗಿ ಬೆಳಗಾಗುವುದರೊಳಗೆ ಬ್ಯಾನರ್ ತೆರವು ಮಾಡಲಾಗಿದೆ. ಈ ಹಿಂದೆ ಮುಖ್ಯಮಂತ್ರಿಗಳು ಬಂದಾಗ ಸಹ ಆಗ ಬ್ಯಾನರ್ ಅಭಿಯಾನ ಮಾಡಿದ್ದೆವು, ಆಗ ಇಲ್ಲದ ಕಾನೂನು ಈಗ ಹೇಗೆ ಬದಲಾಯಿತು ಎಂಬುದು ಅನುಮಾನಕ್ಕೆ ಕಾರಣವಾಗಿದೆ.
ಪಟ್ಟಣದಲ್ಲಿ ನೂರಾರು ಅನುಮತಿ ರಹಿತ ಬ್ಯಾನರ್ ಇದ್ದರೂ ಅದರ ಬಗ್ಗೆ ಯಾವುದೇ ಕ್ರಮ ವಹಿಸದೆ, ಯಾವುದೇ ಆಕ್ಷೇಪಾರ್ಹ ವಿಷಯ ಸಹ ಇಲ್ಲದ ಆಸ್ಪತ್ರೆ ಹೋರಾಟದ ಬ್ಯಾನರ್ ಅನ್ನು ಮಾತ್ರ ಮಧ್ಯರಾತ್ರಿ ತೆರವುಗೊಳಿಸಿರುವ ಹಿಂದೆ ಷಡ್ಯಂತ್ರ ಕಂಡುಬರುತ್ತಿದೆ. ಇಂತಹ ಷಡ್ಯಂತ್ರಗಳಿಗೆ ನಾವು ಬಗ್ಗುವುದಿಲ್ಲ. ಮುಂದಿನ ದಿನಗಳಲ್ಲಿ ಮನೆ ಮನೆಗೆ ಬ್ಯಾನರ್ ಅಭಿಯಾನದ ಜೊತೆಗೆ ಪೋಸ್ಟರ್ ಅಭಿಯಾನ ಮಾಡಲಾಗುವುದು ಎಂದು ಹೋರಾಟ ಸಮಿತಿ ತಿಳಿಸಿದೆ.
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 1003 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 15,000 ಸಂಬಳ
ಈ ಸಂದರ್ಭದಲ್ಲಿ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿಯ ರಂಜಿತ್, ಆದರ್ಶ, ಅಶ್ವಿನ್, ಅಂಜನ್, ಸಂತೋಷ್, ಮನು, ಪ್ರವೀಣ್, ಚಂದ್ರಶೇಖರ್, ನೂತನ್ ಇದ್ದರು












