ಶೃಂಗೇರಿ: ನೂರು ಬೆಡ್ ಆಸ್ಪತ್ರೆ ಜಾಗ ಮಂಜೂರಾತಿಗೆ ಅರಣ್ಯ ಕಾಯ್ದೆ ತೊಡಕು

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಶೃಂಗೇರಿಗೆ ಭೇಟಿ ನೀಡಿದ್ದು ಈ ಸಂದರ್ಭದಲ್ಲಿ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿಯಿಂದ ನೂರು ಬೆಡ್ ಆಸ್ಪತ್ರೆಗೆ ಖಾಸಗಿ ಜಾಗ ಖರೀದಿಗೆ ಒತ್ತಾಯಿಸಲಾಯಿತು.

 

ಇದನ್ನೂ ಓದಿ; ಕರ್ನಾಟಕದಲ್ಲಿ ಬರ ಪಟ್ಟಿ ಘೋಷಣೆ; ಯಾವೆಲ್ಲಾ ಜಿಲ್ಲೆಗಳು, ತಾಲ್ಲೂಕುಗಳು ಈ ಪಟ್ಟಿಯಲ್ಲಿವೆ?

ಶೃಂಗೇರಿ 40 ಸಾವಿರ ಜನಸಂಖ್ಯೆ ಇರುವ, ವರ್ಷಕ್ಕೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ಊರಾಗಿದೆ. ಇಲ್ಲಿ ತೀವ್ರ ಸ್ವರೂಪದ ಅನಾರೋಗ್ಯ, ಅಪಘಾತ ಸಂದರ್ಭದಲ್ಲಿ 100 ಕಿಲೋಮೀಟರ್ ದೂರದ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿರುತ್ತದೆ.

 

ಇದನ್ನೂ ಓದಿ; 2,000 ರೂ. ನೋಟ್ ಹಿಂಪಡೆದ rbi; ಆದಷ್ಟು ಬೇಗ ಬದಲಾಯಿಸಿ 2000 ನೋಟು; ಇನ್ನುಳಿದಿದೆ ಕೆಲವೇ ದಿನಗಳು

2007ರಲ್ಲಿ ಶೃಂಗೇರಿಗೆ ನೂರು ಬೆಡ್ ಆಸ್ಪತ್ರೆ ಮಂಜೂರಾಗಿದ್ದು ಜಾಗದ ಕೊರತೆಯಿಂದಾಗಿ ಹಾಗೂ ಮೆಡಿಕಲ್ ಮಾಫಿಯಾದಿಂದಾಗಿ ಆಸ್ಪತ್ರೆಗೆ ಚಾಲನೆ ದೊರಕಿರಲಿಲ್ಲ, 2020ರಿಂದ ಸಮಿತಿ ಯಿಂದ ಶೃಂಗೇರಿ ಸಾರ್ವಜನಿಕರ ಸಹಾಯದೊಂದಿಗೆ ನಡೆಸಿದ ನಿರಂತರ ಹೋರಾಟದಿಂದ ಹಲವು ಜಾಗಗಳನ್ನು ಗುರುತಿಸಿ ಕಡತ ಪ್ರಕ್ರಿಯೆಗೆ ಚಾಲನೆ ನೀಡಲಾಯಿತಾದರೂ, ಕಂದಾಯ ಭೂಮಿ ಕೊರತೆ ಕಾರಣದಿಂದಾಗಿ ಅರಣ್ಯ ಕಾಯ್ದೆಗಳ ತೊಡಕಿನಿಂದಾಗಿ ಜಾಗ ಮಂಜೂರಾತಿ ಸಾಧ್ಯವಾಗಲಿಲ್ಲ.

 

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ, ಪ್ರತಿಭಟನೆ ನಡೆಸಿದ ನಂತರ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಎರಡು ತಿಂಗಳ ಒಳಗೆ ಜಾಗ ಮಂಜೂರಾತಿ ಮಾಡಿ ಆಸ್ಪತ್ರೆ ಉದ್ಘಾಟನೆ ಮಾಡುವುದಾಗಿ ತಿಳಿಸಿದ್ದರು ಆದರೆ ಕಾನೂನು ತೊಡಕುಗಳಿಂದ ಅದೂ ಸಹ ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅನುಮತಿಗೆ ಕಡತ ಕಳಿಸಿದ್ದು ಈ ವರ್ಷದ ಮೇ ತಿಂಗಳಿನಲ್ಲಿ ತಿರಸ್ಕೃತಗೊಂಡಿದೆ, ಆ ನಂತರ ಅದರ ಯಾವುದೇ ಪ್ರಕ್ರಿಯೆ ಮುಂದುವರೆದಿಲ್ಲ.

ಕಳೆದ 16 ವರ್ಷಗಳಿಂದ ಹುಡುಕಿದರೂ ಸಿಗದ ಸರ್ಕಾರಿ ಭೂಮಿ ಮುಂದೆಯೂ ಸಿಗುವುದಿಲ್ಲ. ಆದ ಕಾರಣ ಸರ್ಕಾರಿ ಭೂಮಿಯ ಅಲಭ್ಯತೆ ಕಾರಣದಿಂದ, ಜನರ ಅನಿವಾರ್ಯತೆ ಮನಗಂಡು ಖಾಸಗಿ ಭೂಮಿಯನ್ನು ಖರೀದಿಸಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಮನವಿ ಸಲ್ಲಿಸಲಾಯಿತು. ಮನವಿಗೆ ಪ್ರತಿಕ್ರಿಯಿಸಿದ ಸಚಿವರು ಸಮಸ್ಯೆ ಗಮನದಲ್ಲಿದ್ದು ಚಿಕ್ಕಮಗಳೂರಿನಲ್ಲೂ ಈ ಕುರಿತು ಚರ್ಚಿಸಿದ್ದೆವು, ಖಾಸಗಿ ಜಾಗ ಖರೀದಿಗೆ ಚರ್ಚಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ರಂಜಿತ್ ಶೃಂಗೇರಿ, ನಿರಂಜನ್, ಅಂಜನ್ ಗೌಡ, ಕಾಳಿಕಾಂಬ ಪ್ರವೀಣ್, ಅಶ್ವಿನ್ ಗೌಡ, ಶ್ರೀಜಿತ್, ಸಂತೋಷ್ , ಆದರ್ಶ ಮುಂತಾದವರು ಇದ್ದರು.

 

ಚಿಕ್ಕಮಗಳೂರು: ರಸ್ತೆಗಳಲ್ಲಿ ವ್ಹೀಲಿಂಗ್ ಹಾವಳಿ | ಪುಂಡರಿಗೆ ಬಿತ್ತು ದಂಡ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮೋಟಾರ್ ಸೈಕಲ್ ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರಿಗೆ ದಂಡ ವಿಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಗೇರ್ ಮರಡಿ ರಸ್ತೆಯಲ್ಲಿ ನಡೆದಿದೆ.

ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರನನ್ನು ಕೂರಿಸಿಕೊಂಡು ವ್ಹೀಲಿಂಗ್ ಮಾಡುತ್ತಿದ್ದ ಸುಮಾರು 22 ವರ್ಷ ವಯಸ್ಸಿನ ಯುವಕನ ವಿರುದ್ಧ ಕಲಂ 189 ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘನ ನ್ಯಾಯಾಲಯವು 5,000 ರೂಗಳನ್ನು ದಂಡ ವಿಧಿಸಿದ್ದಾರೆ.

 

ಹಲವು ಕಡೆ ವೈಕ್ ವ್ಹೀಲಿಂಗ್ ಹುಚ್ಚಾಟ ನಡೆಯುತಿದ್ದು, ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆಲ್ಲಾ ಬ್ರೇಕ್ ಹಾಕಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಯುವಕರ ಮೊಜು ಮೊಸ್ತಿ ಆಟವಾಗಿರಬೇಕು. ಆದರೆ ಅದು ಹುಚ್ಚಾಟವಾದರೆ ಜೀವಗಳಿಗೆ ಕುತ್ತು ತರುತ್ತದೆ ಅನ್ನೊದಕ್ಕೆ ಈ ಹಿಂದೆ ವಿವಿದ ಕಡೆ ವ್ಹೀಲಿಂಗ್ ವೇಳೆ ನಡೆದ ಕೃತ್ಯಗಳೇ ನೈಜ ಉದಾಹರಣೆ. ಅಷ್ಟೆ ಅಲ್ಲದೇ ಸೋಶಿಯಲ್ ಮೀಡಿಯದಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮಂದಿ ಮೇಲೆ ಸಹ ನಿಗಾ ವಹಿಸಲಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ಸಹ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.