ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ವಾಹನದ ಬಾಡಿಗೆ ಕೇಳುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಕೊಟ್ಟಿಗೆಹಾರದ ಅಜಾದ್ ನಗರದಲ್ಲಿ ನಡೆದಿದೆ.
ಇದನ್ನೂ ಓದಿ: ಆದಿತ್ಯ ಯೋಗದಿಂದ ನಾಳೆಯಿಂದ ಈ 5 ರಾಶಿಗೆ ಎಲ್ಲವೂ ಶುಭ

ಏನಿದು ಘಟನೆ:
ರಾಮನಗರದ ಅಬ್ಬಾಸ್ ಎನ್ನುವ ಆರೋಪಿ ವಾಹನದ ಬಾಡಿಗೆ ಕೇಳಲು ಮಹಿಳೆಯ ಮನೆ ಬಳಿ ಹೋಗಿದ್ದಾನೆ. ಈ ವೇಳೆ ಹಣ ಇಲ್ಲವೆಂದಾಗ ಆರೋಪಿ ಅಬ್ಬಾಸ್ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಮಗಳಿಗೂ ದೈಹಿಕವಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಕುರಿತು ಮಹಿಳೆ ದೂರು ನೀಡಿದ್ದು, ಐಪಿಸಿ ಕಲಂ 329(4), 74, 75, 115(2), 352, 351(2)(3) ಹಾಗೂ ಎಸ್ಸಿ/ಎಸ್ಟಿ ಕಾಯ್ದೆಯ 3(1)(w), 3(2)(va) ಎಫ್ಐಆರ್ ದಾಖಲಿಸಿ ಆರೋಪಿ ಅಬ್ಬಾಸ್ʼನ್ನು ಬಂಧಿಸಿಲಾಗಿದೆ.
ಇದನ್ನೂ ಓದಿ: SC-ST ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ಸ್ಕಾಲರ್ ಶಿಪ್
ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ- ತನು ಕೊಟ್ಟಿಗೆಹಾರ)












