
ಬೀರೂರು: (ನ್ಯೂಸ್ ಮಲ್ನಾಡ್ ವರದಿ) ದೋಗಿಹಳ್ಳಿ ಕಿರಾಣಿ ಅಂಗಡಿಗೆ ಸಿಗರೇಟ್ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರಲ್ಲಿ ಓರ್ವ ಮಹಿಳೆಯ ಮಾಂಗಲ್ಯ ಸರದ ಅರ್ಧ ಭಾಗ ಅಪಹರಣ ಮಾಡಿದ್ದಾನೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ದೋಗಿಹಳ್ಳಿ ರಸ್ತೆ ಬದಿಯ ಕಿರಾಣಿ ಅಂಗಡಿಗೆ ಬೈಕ್‌ನಲ್ಲಿ ಬಂದ ರಾಜಸ್ತಾನ ಮೂಲದ ಬಾಬುಲಾಲ್ ಮತ್ತು ನಿತೇಶ್ ಸಿಗರೇಟ್ ಕೊಡುವಂತೆ ಅಂಗಡಿ ಮಾಲೀಕಳಾದ ಪದ್ಮಾವತಿ ಅವರನ್ನು ಕೇಳಿದ್ದಾರೆ. ಬೈಕ್‌ನಿಂದ ಇಳಿದುಬಂದ ಬಾಬುಲಾಲ್ ಎಂಬಾತನಿಗೆ ಪದ್ಮಾವತಿ ಸಿಗರೇಟ್ ಕೊಡಲು ತಿರುಗಿದಾಗ ಮಾಂಗಲ್ಯ ಸರಕ್ಕೆ ಕೈಹಾಕಿದ್ದಾನೆ. ತಕ್ಷಣ ಪದ್ಮಾವತಿ ಮುಂಭಾಗದಲ್ಲಿದ್ದ ಅರ್ಧ ಸರವನ್ನು ಹಿಡಿದುಕೊಂಡಿದ್ದಾರೆ. ಅರ್ಧ ಸರವನ್ನು ಬಾಬುಲಾಲ್ ಕಿತ್ತುಕೊಂಡಿದ್ದಾನೆ. ಮಹಿಳೆ ಕೂಗಿಕೊಂಡಾಗ ಬೈಕ್‌ನಲ್ಲಿದ್ದ ನಿತೇಶ್ ಬೈಕ್ ಚಾಲನೆ ಮಾಡಿಕೊಂಡು ಹೊರಟಿದ್ದಾನೆ. ಎದುರಿಗೆ ಬಂದ ಗ್ರಾಮಸ್ಥರು ಬೈಕ್ ಅಡ್ಡಗಟ್ಟಿದಾಗ ಬಾಬುಲಾಲ್ ಪರಾರಿಯಾಗಿದ್ದು, ನಿತೇಶ್ ಸಿಕ್ಕಿಬಿದ್ದಿದ್ದಾನೆ.

ಗ್ರಾಮಸ್ಥರು ಪೊಲೀಸರಿಗೆ ಕರೆ ಮಾಡಿ ನಿತೇಶ್‌ನನ್ನು ಒಪ್ಪಿಸಿದ್ದು, ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
















