ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಕಿರುಕುಳ ಹಾಗೂ ಧಮ್ಕಿ ಹಾಕಿ ಬಡ ದಲಿತರ ವಾಸದ ಗುಡಿಸಲು ತೆರವು ಮಾಡಲು ಮುಂದಾಗಿರುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಆದಿತ್ಯ ಯೋಗದಿಂದ ನಾಳೆಯಿಂದ ಈ 5 ರಾಶಿಗೆ ಎಲ್ಲವೂ ಶುಭ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ತುಪ್ಪುರು, ಹಿರೇಗದ್ದೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಲಾಢ್ಯರನ್ನ ಬಿಟ್ಟು ಬಡ ದಲಿತರ ಮೇಲೆ ಬಲ ಪ್ರಯೋಗದ ಆರೋಪ ಕೇಳಿಬಂದಿದೆ.
ಸೆಕ್ಷನ್ 4 ಎಂದು ಅರಣ್ಯ ಇಲಾಖೆಯಿಂದ ದೌರ್ಜನ್ಯ:
ತುಪ್ಪುರು, ಹಿರೇಗದ್ದೆ ಗ್ರಾಮದ 4 ದಲಿತ ಕುಟುಂಬಗಳು ಸರ್ವೆ ನಂಬರ್ 19 ರಲ್ಲಿ ಗುಡಿಸಲು ಹಾಕಿಕೊಂಡು ವಾಸವಿದ್ದು, ಈ ಹಿಂದೆ ಕಂದಾಯ ಇಲಾಖೆಯಿಂದ ವಾಸವಿರುವ ಸ್ಥಳದಲ್ಲೇ ಹಕ್ಕುಪತ್ರ ನೀಡುವ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ, ಅರಣ್ಯ ಇಲಾಖೆ 30ಕ್ಕೂ ಅಧಿಕ ಸಿಬ್ಬಂದಿಗಳು ವಾಸವಿರುವ ಸ್ಥಳ ಸೆಕ್ಷನ್ 4 ಎಂದು ಏಕಾಏಕಿ ಗುಡಿಸಲು ತೆರವಿಗೆ ಬಂದಿದ್ದಾರೆ. ಅಲ್ಲದೆ ಸ್ಥಳ ಬಿಟ್ಟು ಹೋಗುವುದಾಗಿ ಬಲವಂತವಾಗಿ ಸ್ವ ಇಚ್ಛೆಯ ಹೇಳಿಕೆಗೆ ಸಹಿ ಮಾಡಿಸಿಕೊಂಡ ಆರೋಪ ಕೂಡ ಕೇಳಿ ಬಂದಿದ್ದು, ಇಂದು ಮಧ್ಯಾಹ್ನ 1ಗಂಟೆಯ ವರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಮಯ ನೀಡಿದ್ದಾರೆ ಎಂದು ಕೊಪ್ಪ ಅರಣ್ಯ ಇಲಾಖೆಯ ವಿರುದ್ಧ ಗಂಭೀರವಾಗಿ ಆರೋಪಿಸಲಾಗಿದೆ.
ಇದನ್ನೂ ಓದಿ: SC-ST ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ಸ್ಕಾಲರ್ ಶಿಪ್
ಸದ್ಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಿರುಕುಳ ನೀಡುತ್ತಿರುವ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.












