ಶೃಂಗೇರಿ: ಮಲೆನಾಡಿನ ಹೆಮ್ಮೆಯ ಮೃದಂಗ ವಿದ್ವಾನ್ ಪನ್ನಗ ಶರ್ಮನ್‌ಗೆ ‘ಸಂಗೀತ ಸಾಧನಾ’ ಪ್ರಶಸ್ತಿ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಹೆಸರಾಂತ ಸಂಗೀತ ದಂಪತಿಗಳಾದ ವಿದ್ವಾನ್ ನೈಬಿ ಪ್ರಭಾಕರ್ ಹಾಗೂ ಸಾವಿತ್ರಿ ಪ್ರಭಾಕರ್ ಅವರ ಪುತ್ರ, ಮೃದಂಗ ವಿದ್ವಾನ್ ಪನ್ನಗ ಶರ್ಮನ್ ಅವರಿಗೆ ಮಂಗಳೂರಿನ ಪ್ರತಿಷ್ಠಿತ ಸಂಗೀತ ಪರಿಷತ್ ವತಿಯಿಂದ ನೀಡಲಾಗುವ ‘ಸಂಗೀತ ಸಾಧನಾ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದೇ ತಿಂಗಳ 29ರಂದು ನಡೆಯಲಿರುವ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪನ್ನಗ ಶರ್ಮನ್ ಅವರು ಆರಂಭಿಕ ಸಂಗೀತ ಶಿಕ್ಷಣವನ್ನು ತಂದೆಯವರಿಂದ ಹಾಗೂ ಶೃಂಗೇರಿಯ ರಾಮಚಂದ್ರ ರಾವ್ ಅವರಲ್ಲಿ ಪಡೆದು, ಬಳಿಕ ಚೆನ್ನೈನ ವಿದ್ವಾಂಸರಾದ ಗಣಪತಿರಾಮನ್ ಮತ್ತು ಶಿವರಾಮನ್ ಅವರಲ್ಲಿ ಗುರುಕುಲ ಪದ್ಧತಿಯಲ್ಲಿ ಅಭ್ಯಾಸ ಮಾಡಿದ್ದಾರೆ. ಪ್ರಸ್ತುತ ವಿದ್ವಾನ್ ಶ್ರೀಮುಷ್ಣಂ ವಿ. ರಾಜಾರಾವ್ ಅವರಲ್ಲಿ ಮೃದಂಗ ಅಭ್ಯಾಸ ಮುಂದುವರಿಸಿದ್ದಾರೆ.

ಈವರೆಗೆ ಸುಮಾರು 3,000 ಸಂಗೀತ ಕಾರ್ಯಕ್ರಮಗಳಲ್ಲಿ ಮೃದಂಗ ವಾದನ ನೀಡಿರುವ ಅವರು ತಮ್ಮ ವಿಶಿಷ್ಟ ವಾದನ ಶೈಲಿಯಿಂದ ಗುರುತಿಸಿಕೊಂಡಿದ್ದಾರೆ.

ಭಾರತೀ ಸಂಗೀತ ಶಾಲೆ ಹಾಗೂ ಶಾರದಾ ಶಾಸ್ತ್ರೀಯ ಸಂಗೀತ ಸಭೆಗಳ ಮೂಲಕ ಶಾಸ್ತ್ರೀಯ ಸಂಗೀತದ ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಪ್ರಭಾಕರ್ ಕುಟುಂಬದ ಎಲ್ಲ ಸದಸ್ಯರೂ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿರುವುದು ವಿಶೇಷ. ಪನ್ನಗ ಶರ್ಮನ್ ಅವರಿಗೆ ಪ್ರಶಸ್ತಿ ಲಭಿಸಿರುವುದು ಮಲೆನಾಡಿನ ಸಂಗೀತಾಸಕ್ತರು ಹಾಗೂ ಕಲಾವಿದರಲ್ಲಿ ಸಂತಸ ಮೂಡಿಸಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.