
ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದ ಪ್ರತಿಷ್ಠಿತ ಗಾಯತ್ರಿ ಜ್ಯುವೆಲರ್ಸ್ ಸಂಸ್ಥೆಯು 30ನೇ ವರ್ಷದ ಸಂಭ್ರಮದ ಅಂಗವಾಗಿ ಡಿಸೆಂಬರ್ 10ರಿಂದ 31ರವರೆಗೆ ವಿಶೇಷ ಗೋಲ್ಡ್ ಫೆಸ್ಟಿವಲ್ ಆಯೋಜಿಸಿದೆ. ಈ ಪ್ರಯುಕ್ತ ಗ್ರಾಹಕರಿಗಾಗಿ ಒಟ್ಟು ₹30 ಲಕ್ಷ ಮೌಲ್ಯದ ಆಕರ್ಷಕ ಉಡುಗೊರೆಗಳು ಹಾಗೂ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ.

ಉತ್ಸವದ ಅವಧಿಯಲ್ಲಿ ₹10,000ಕ್ಕಿಂತ ಹೆಚ್ಚಿನ ಖರೀದಿ ಮಾಡುವ ಗ್ರಾಹಕರಿಗೆ ಲಕ್ಕಿ ಡ್ರಾ ಕೂಪನ್ ನೀಡಲಾಗುತ್ತದೆ. ಚಿನ್ನದ ಖರೀದಿಗೆ ಪ್ರತಿ ಗ್ರಾಂಗೆ ₹1,000 ರಿಯಾಯಿತಿ ಸೇರಿದಂತೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ.
ಲಕ್ಕಿ ಡ್ರಾ ಮೂಲಕ ಬೈಕ್, ಸ್ಕೂಟರ್, ನಗದು ಬಹುಮಾನ ಹಾಗೂ ಹಲವು ಆಕರ್ಷಕ ಉಡುಗೊರೆಗಳನ್ನು ಗೆಲ್ಲುವ ಅವಕಾಶವಿದೆ. ಗ್ರಾಹಕರಿಗಾಗಿ ವಿವಿಧ ವಿನ್ಯಾಸಗಳ ಹೊಸ ಚಿನ್ನಾಭರಣಗಳನ್ನೂ ಪ್ರದರ್ಶನಕ್ಕೆ ಇಡಲಾಗಿದೆ.

30 ವರ್ಷಗಳ ಗ್ರಾಹಕ ಸೇವೆಯ ಸಂಭ್ರಮವನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಈ ವಿಶೇಷ ಗೋಲ್ಡ್ ಫೆಸ್ಟಿವಲ್ ಆಯೋಜಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.















