ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಕೊಟ್ಟಿಗೆಹಾರದ ನಿರ್ಮಾಪಕ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಖ್ಯಾತ ಗೀತ ರಚನಾಕಾರ, ಸಂಗೀತ ನಿರ್ದೇಶಕ ಹಂಸಲೇಖ ಭಾನುವಾರ ಭೇಟಿ ನೀಡಿದರು.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ

ಪ್ರತಿಷ್ಠಾನದ ವಸ್ತು ಸಂಗ್ರಹಾಲಯ, ಕೀಟ ಸಂಗ್ರಹಾಲಯ, ಕ್ಯಾಲಿಗ್ರಫಿ ಕಲಾಕೃತಿಗಳನ್ನು ವೀಕ್ಷಿಸಿ ಮಾತನಾಡಿದ ಅವರು ಕುವೆಂಪು ಅವರ ಜನ್ಮದಿನದಂದೇ ಅವರ ಪುತ್ರ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಭೇಟಿ ನೀಡಿದ್ದೇನೆ. ವಸ್ತು ಸಂಗ್ರಹಾಲಯದ ಉತ್ಪನ್ನ ಭಂಡಾರ ಗತಕಾಲದ ಅಪೂರ್ವ ಸಂಗ್ರಹವಾಗಿದೆ. ಕೀಟ ಸಂಗ್ರಹಾಲಯ, ವಸ್ತು ಸಂಗ್ರಹಾಲಯವನ್ನು ನಿಂತು ಕೂತು ನಡೆದು ವೀಕ್ಷಿಸಿ ಕರ್ನಾಟಕದ ಕಿರೀಟ ಹೊತ್ತಂತೆ ಸಂಭ್ರಮಿಸಿದ್ದೇನೆ ಎಂದರು.


ಇದನ್ನೂ ಓದಿ: 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್ ಮಾಡ್ದೆ ಓದಿ
ಈ ಸಂದರ್ಭದಲ್ಲಿ ಕವಿ ಗೋರವಿ ಆಲ್ದೂರು, ಎಂ ಎಲ್ ಅಶೋಕ್ ಮುಂತಾದವರು ಇದ್ದರು. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ













