ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಚಾರ್ಮಾಡಿ ಹಸನಬ್ಬ ಅವರಿಗೆ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ; ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ; ಈ ಯೋಜನೆಯ ಹಣ ಬಂದಿಲ್ವಾ!; ಕೂಡಲೇ ಈ ದಾಖಲಾತಿಗಳನ್ನು ಇವರಿಗೆ ಸಲ್ಲಿಸಿ

2023-24ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ 68 ಸಾಧಕರು ಆಯ್ಕೆ ಆಗಿದ್ದರೆ ಅದರಲ್ಲಿ ಚಾರ್ಮಾಡಿ ಹಸನಬ್ಬ ಕೂಡ ಒಬ್ಬರು. ಚಾರ್ಮಾಡಿ ಘಾಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಎಲ್ಲಿಯೇ ಆಕಸ್ಮಿಕ ಅನಾಹುತಗಳು, ಅಪಘಾತಗಳು ಆದಾಗ ಆಪತ್ಬಾಂಧವರಂತೆ ಧಾವಿಸಿ ಬರುವ ಹಸನಬ್ಬ ಅದೆಷ್ಟೋ ಜನರ ಪ್ರಾಣರಕ್ಷಣೆ ಮಾಡಿದ್ದಾರೆ. ಈಗಲೂ ತಮ್ಮ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದರೆ.
ಇದನ್ನೂ ಓದಿ; ಆರೋಗ್ಯ ಸಹಾಯವಾಣಿ 104′ ಕರೆ ಮಾಡಿದ 4 ಗಂಟೆಯಲ್ಲಿ ರಕ್ತ ಕೊಡುತ್ತಾರೆ ಎಂಬ ಯೋಜನೆ ಜಾರಿ; ಇದರ ಸತ್ಯಾಸತ್ಯತೆ ಏನು
ಚಾರ್ಮಾಡಿ ಘಾಟ್ ಎಂದರೆ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ಸುಮಾರು 25 ಕಿಲೋ ಮೀಟರ್ ಅಂತರದಲ್ಲಿ ಯಾವುದೇ ಊರು ಸಿಗುವುದಿಲ್ಲ. ಜನವಸತಿ ಪ್ರದೇಶ ತಲುಪಬೇಕೆಂದರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯೇ ಸಿಗಬೇಕು. ಇಂತಹ ದುರ್ಗಮ ಹಾದಿಯಲ್ಲಿ ಅಚಾನಕ್ ಆಗಿ ಎದುರಾಗುವ ಅವಘಡಗಳು ದಿನಕ್ಕೊಂದಾದರೂ ಇದ್ದೇ ಇರುತ್ತವೆ. ಇಂತಹ ಸನ್ನಿವೇಶದಲ್ಲಿ ತೊಂದರೆಗೀಡಾದ ಜನರ ರಕ್ಷಣೆಗೆ ಹಸನಬ್ಬ ಅವರು ಚಾರ್ಮಾಡಿ ಕಡೆಯಿಂದ ತಮ್ಮ ಸಹವರ್ತಿಗಳನ್ನು ಕರೆದುಕೊಂಡು ರಸ್ತೆ ಸಂಚಾರಕ್ಕೆ ಮುಕ್ತಗೊಳಿಸುವುದು, ಜನರ ಜೀವ ರಕ್ಷಣೆಗಾಗಿ ಹರಸಾಹಸ ಪಡುತ್ತಾರೆ.

ಇಂತಹ ವ್ಯಕ್ತಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಶ್ಲಾಘನೀಯವಾಗಿದೆ.
ಶೋಬಾನೆ ಚೌಡಮ್ಮನವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ:
ರಾಜ್ಯೋತ್ಸವ ಪ್ರಶಸ್ತಿಗೆ ಚಿಕ್ಕಮಗಳೂರು ಜಿಲ್ಲೆಯ ಜಾನಪದ ಕಲಾವಿದರಾದ ಸೋಬಾನೆ ಚೌಡಮ್ಮನವರು ಒಬ್ಬರಾಗಿದ್ದಾರೆ. ಮೂಲತಃ ಚೌಡಮ್ಮನವರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಚಿಕ್ಕಬಾಸೂರು ಗ್ರಾಮದವರು. 70 ವರ್ಷ ವಯಸ್ಸಿನ ಚೌಡಮ್ಮನವರು ರೈತಾಪಿ ಕುಟುಂಬದಲ್ಲಿ ಹುಟ್ಟಿ ಬಾಲ್ಯದಿಂದಲೂ ತಮ್ಮ ತಾಯಿಯಿಂದ ಬಳುವಳಿಯಾಗಿ ಬಂದ ಸೋಬಾನೆ ಪದಗಳನ್ನು ಹಾಡುತ್ತಾ ಬದುಕು ಕಟ್ಟಿಕೊಂಡವರು. ಶೋಬಾನೆ ಚೌಡಮ್ಮ ಎಂದೇ ಈ ಭಾಗದಲ್ಲಿ ಪ್ರಸಿದ್ಧರಾಗಿರುವ ಚೌಡಮ್ಮನವರು ತಮ್ಮ ಕೃಷಿ ಚಟುವಟಿಕೆಯ ನಡುವೆಯೂ ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ತಮ್ಮ ಶೋಬಾನೆ ಪದಗಳ ಮೂಲಕ ಗ್ರಾಮೀಣ ಸಂಪ್ರದಾಯಗಳಿಗೆ ಹೊಳಪನ್ನು ನೀಡುತ್ತಾ ಬರುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಗೆ ಚೌಡಮ್ಮನವರನ್ನು ಆಯ್ಕೆ ಮಾಡುವ ಮೂಲಕ ಅವರ ಜಾನಪದ ಸೇವೆಗೆ ಉನ್ನತ ಮನ್ನಣೆ ನೀಡಿದೆ.

ಎನ್.ಆರ್ ಪುರ: ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ
ಎನ್.ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನಲ್ಲಿ ನಡೆದಿದೆ. ಎನ್.ಆರ್ ಪುರ ತಾಲೂಕಿನ ಹಿಳುವಳ್ಳಿ ಗ್ರಾಮದ ಮಧು ಭಂಡಾರಿ (38) ಬಂಧಿತ ಆರೋಪಿ.
ಬಂಧಿತ ಆರೋಪಿಗಳಿಂದ 3000/- ರೂ ನಗದು, ಕಳ್ಳತನದ ಹಣದಿಂದ ತೆಗೆದುಕೊಂಡಿದ್ದ 8500 ರೂ ಬೆಲೆಯ ವಿವೋ ಕಂಪನಿಯ ಒಂದು ಮೊಬೈಲ್, 11000/- ರೂ ಮೌಲ್ಯದ 2 ಗ್ರಾಂ 200 ಮೀಲಿಯ ಚಿನ್ನದ ತಾಳಿ ಸರದ ಕೊಂಡಿಯನ್ನು ವಶಪಡಿಸಿಕೋಂಡಿದ್ದಾರೆ.












