ಚಿಕ್ಕಮಗಳೂರು: ಅಯೋಧ್ಯೆ ಬಲಿದಾನ ದಿವಸ್ ಅಂಗವಾಗಿ ರಕ್ತದಾನ ಶಿಬಿರ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅಯೋಧ್ಯೆ ರಾಮಮಂದಿರಕ್ಕಾಗಿ ಪ್ರಾಣಾರ್ಪಣೆ ಮಾಡಿದ ಬಜರಂಗದಳದ ರಾಮ್ ಕೊಠಾರಿ, ಶರದ್ ಕೊಠಾರಿ ಇವರ ನೆನಪಿಗಾಗಿ ದೇಶಾದ್ಯಂತ ಪ್ರತಿ ವರ್ಷ ವಿಶ್ವ ಹಿಂದೂ ಪರಿಷದ್ ಬಜರಂಗದಳ ರಕ್ತದಾನ ಮಾಡುತ್ತ ಬರುತ್ತಿದೆ. ಹಾಗೆಯೇ ವಿಶ್ವ ಹಿಂದೂ ಪರಿಷದ್ ಬಜರಂಗದಳ ಇಂದು ಚಿಕ್ಕಮಗಳೂರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿದ್ದರು.

 

ಇದನ್ನೂ ಓದಿ; ಗ್ರಾಮೀಣ ಕುಡಿಯುವ ನೀರು ಇಲಾಖೆಯಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಸುವುದು ಹೇಗೆ?,ಕೊನೆಯ ದಿನಾಂಕ ಯಾವಾಗ?

ಚಿಕ್ಕಮಗಳೂರು ನಗರ ಪ್ರಕಂಡ ಆಯೋಜನೆ ಮಾಡಿದೆ ಕರಸೇವೆಗಾಗಿ ರಾಮ್ ಕೊಠಾರಿ, ಶರದ್ ಕೊಠಾರಿ 1990 ಅಕ್ಟೋಬರ್ 30 ರಂದು 200 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ತೆರಳಿ ಅಯೋಧ್ಯೆಯನ್ನು ತಲುಪುತ್ತಾರೆ. ಕಳಂಕಿತ ಕಟ್ಟಡದ ಮೇಲೆ ಪ್ರಪ್ರಥಮವಾಗಿ ರಾಮ್ ಕೊಠಾರಿ ಭಗವದ್ವಜವನ್ನು ಹಾರಿಸುತ್ತಾರೆ. ನಂತರ ಮುಲಾಯಂ ಸಿಂಗ್ ಯಾದವ್ ಸರ್ಕಾರ ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಏಕಕಾಲಕ್ಕೆ ಒಂದೇ ಮನೆಯ ಇಬ್ಬರು ಸಹೋದರರು ಪ್ರಭುವಿನ ಮಂದಿರಕ್ಕಾಗಿ ಪ್ರಾಣಾರ್ಪಣೆ ಮಾಡುತ್ತಾರೆ. ಅವರ ಸ್ಮರಿಸಿ ಈ ರಕ್ತದಾನ ಶಿಬಿರವನ್ನು ಮಾಡುತ್ತಿದ್ದು, ವರ್ಷವಿಡಿ ತುರ್ತು ರಕ್ತದ ಅವಶ್ಯಕತೆ ಇದ್ದಾಗ ಬಜರಂಗದಳದ ಕಾರ್ಯಕರ್ತರು ರಕ್ತದಾನ ಮಾಡಲು  ಸ್ಪಂದಿಸುತ್ತಾರೆ.

 

ರಕ್ತದಾನ ಒಂದು ಶ್ರೇಷ್ಠವಾದ ಮಹಾದಾನ, ರಕ್ತದ ಅವಶ್ಯಕತೆ ಇದ್ದಾಗ ಬಜರಂಗದಳ ಕಾರ್ಯಕರ್ತರನ್ನು ಸಂಪರ್ಕಿಸಿ ಎಂದು ಬಜರಂಗದಳ ಚಿಕ್ಕಮಗಳೂರು ಜಿಲ್ಲಾ ಸಹ ಸಂಯೋಜಕ ಶ್ಯಾಂ ವಿ ಗೌಡ ತಿಳಿಸಿದರು. ವಿಶ್ವ ಹಿಂದೂ ಪರಿಷತ್ ಬಜರಂಗದಳ ಚಿಕ್ಕಮಂಗಳೂರು ನಗರ ಪ್ರಖಂಡ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಅರಳಗುಪ್ಪೆ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಬಜರಂಗದಳ ಕಾರ್ಯಕರ್ತರು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಅಧ್ಯಕ್ಷರು ಶ್ರೀ ಶ್ರೀಕಾಂತ್ ಪೈ, ಕಾರ್ಯದರ್ಶಿ ರಂಗನಾಥ್, ಪ್ರಮುಖ ಆಟೋ ಶಿವಣ್ಣ, ಜಿಲ್ಲಾ ಸಹ ಕಾರ್ಯದರ್ಶಿ ಅಮಿತ್ ಗೌಡ, ಬಜರಂಗದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ ಗುರು, ನಗರ ಅಧ್ಯಕ್ಷರು ದಿಲೀಪ್ ಶೆಟ್ಟಿ, ನಗರ ಕಾರ್ಯದರ್ಶಿ ಕೃಷ್ಣ ನಗರ ಸಂಯೋಜಕ ಸುನಿಲ್, ಸಹ ಸಂಯೋಜಕ ಮಂಜು, ಕೋಟೆ ಶಾಮ್ ಇದ್ದರು.

 

ಚಾರ್ಮಾಡಿ ಹಸನಬ್ಬ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಚಾರ್ಮಾಡಿ ಹಸನಬ್ಬ ಅವರಿಗೆ ನೀಡಿ ಗೌರವಿಸಲಾಗಿದೆ.

 

2023-24ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ 68 ಸಾಧಕರು ಆಯ್ಕೆ ಆಗಿದ್ದರೆ ಅದರಲ್ಲಿ ಚಾರ್ಮಾಡಿ ಹಸನಬ್ಬ ಕೂಡ ಒಬ್ಬರು. ಚಾರ್ಮಾಡಿ ಘಾಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಎಲ್ಲಿಯೇ ಆಕಸ್ಮಿಕ ಅನಾಹುತಗಳು, ಅಪಘಾತಗಳು ಆದಾಗ ಆಪತ್ಬಾಂಧವರಂತೆ ಧಾವಿಸಿ ಬರುವ ಹಸನಬ್ಬ ಅದೆಷ್ಟೋ ಜನರ ಪ್ರಾಣರಕ್ಷಣೆ ಮಾಡಿದ್ದಾರೆ. ಈಗಲೂ ತಮ್ಮ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದರೆ.

ಇದನ್ನೂ ಓದಿ; ಆರೋಗ್ಯ ಸಹಾಯವಾಣಿ 104′ ಕರೆ ಮಾಡಿದ 4 ಗಂಟೆಯಲ್ಲಿ ರಕ್ತ ಕೊಡುತ್ತಾರೆ ಎಂಬ ಯೋಜನೆ ಜಾರಿ; ಇದರ ಸತ್ಯಾಸತ್ಯತೆ ಏನು

ಚಾರ್ಮಾಡಿ ಘಾಟ್ ಎಂದರೆ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ಸುಮಾರು 25 ಕಿಲೋ ಮೀಟರ್ ಅಂತರದಲ್ಲಿ ಯಾವುದೇ ಊರು ಸಿಗುವುದಿಲ್ಲ. ಜನವಸತಿ ಪ್ರದೇಶ ತಲುಪಬೇಕೆಂದರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯೇ ಸಿಗಬೇಕು. ಇಂತಹ ದುರ್ಗಮ ಹಾದಿಯಲ್ಲಿ ಅಚಾನಕ್ ಆಗಿ ಎದುರಾಗುವ ಅವಘಡಗಳು ದಿನಕ್ಕೊಂದಾದರೂ ಇದ್ದೇ ಇರುತ್ತವೆ. ಇಂತಹ ಸನ್ನಿವೇಶದಲ್ಲಿ ತೊಂದರೆಗೀಡಾದ ಜನರ ರಕ್ಷಣೆಗೆ ಹಸನಬ್ಬ ಅವರು ಚಾರ್ಮಾಡಿ ಕಡೆಯಿಂದ ತಮ್ಮ ಸಹವರ್ತಿಗಳನ್ನು ಕರೆದುಕೊಂಡು ರಸ್ತೆ ಸಂಚಾರಕ್ಕೆ ಮುಕ್ತಗೊಳಿಸುವುದು, ಜನರ ಜೀವ ರಕ್ಷಣೆಗಾಗಿ ಹರಸಾಹಸ ಪಡುತ್ತಾರೆ.

ಇಂತಹ ವ್ಯಕ್ತಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಶ್ಲಾಘನೀಯವಾಗಿದೆ.

ಶೋಬಾನೆ ಚೌಡಮ್ಮನವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ:
ರಾಜ್ಯೋತ್ಸವ ಪ್ರಶಸ್ತಿಗೆ ಚಿಕ್ಕಮಗಳೂರು ಜಿಲ್ಲೆಯ ಜಾನಪದ ಕಲಾವಿದರಾದ ಸೋಬಾನೆ ಚೌಡಮ್ಮನವರು ಒಬ್ಬರಾಗಿದ್ದಾರೆ. ಮೂಲತಃ ಚೌಡಮ್ಮನವರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಚಿಕ್ಕಬಾಸೂರು ಗ್ರಾಮದವರು. 70 ವರ್ಷ ವಯಸ್ಸಿನ ಚೌಡಮ್ಮನವರು ರೈತಾಪಿ ಕುಟುಂಬದಲ್ಲಿ ಹುಟ್ಟಿ ಬಾಲ್ಯದಿಂದಲೂ ತಮ್ಮ ತಾಯಿಯಿಂದ ಬಳುವಳಿಯಾಗಿ ಬಂದ ಸೋಬಾನೆ ಪದಗಳನ್ನು ಹಾಡುತ್ತಾ ಬದುಕು ಕಟ್ಟಿಕೊಂಡವರು. ಶೋಬಾನೆ ಚೌಡಮ್ಮ ಎಂದೇ ಈ ಭಾಗದಲ್ಲಿ ಪ್ರಸಿದ್ಧರಾಗಿರುವ ಚೌಡಮ್ಮನವರು ತಮ್ಮ ಕೃಷಿ ಚಟುವಟಿಕೆಯ ನಡುವೆಯೂ ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ತಮ್ಮ ಶೋಬಾನೆ ಪದಗಳ ಮೂಲಕ ಗ್ರಾಮೀಣ ಸಂಪ್ರದಾಯಗಳಿಗೆ ಹೊಳಪನ್ನು ನೀಡುತ್ತಾ ಬರುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಗೆ ಚೌಡಮ್ಮನವರನ್ನು ಆಯ್ಕೆ ಮಾಡುವ ಮೂಲಕ ಅವರ ಜಾನಪದ ಸೇವೆಗೆ ಉನ್ನತ ಮನ್ನಣೆ ನೀಡಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.