ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲಿ ಹುಲಿ ಉಗುರಿನ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಕಾಡು ಪ್ರಾಣಿಗಳ ಕೊಂಬನ್ನು ವಶಕ್ಕೆ ಪಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಸಮೀಪದ ಬಸವನಗದ್ದೆಯಲ್ಲಿ ನಡೆದಿದೆ.
ಇದನ್ನೂ ಓದಿ; ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ; ಈ ಯೋಜನೆಯ ಹಣ ಬಂದಿಲ್ವಾ!; ಕೂಡಲೇ ಈ ದಾಖಲಾತಿಗಳನ್ನು ಇವರಿಗೆ ಸಲ್ಲಿಸಿ

ಪ್ರಸನ್ನ ಎಂಬುವವರ ಮನೆಯ ಮೇಲೆ 12 ಜನ ಅಧಿಕಾರಿಗಳ ತಂಡವು ದಾಳಿ ಮಾಡಿ, ಮನೆಯಲ್ಲಿದ್ದ ಜಿಂಕೆ ಮತ್ತು ಕಾಡುಕೋಣದ ಕೊಂಬನ್ನು ವಶಕ್ಕೆ ಪಡೆದಿದ್ದಾರೆ. ನೂರಾರು ವರ್ಷಗಳಿಂದ ಈ ಮನೆಯಲ್ಲಿ ವನ್ಯಜೀವಿಯ ಟ್ರೋಫಿಯೊಂದು ಇದ್ದು, ಇದೀಗ ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ; ಆರೋಗ್ಯ ಸಹಾಯವಾಣಿ 104′ ಕರೆ ಮಾಡಿದ 4 ಗಂಟೆಯಲ್ಲಿ ರಕ್ತ ಕೊಡುತ್ತಾರೆ ಎಂಬ ಯೋಜನೆ ಜಾರಿ; ಇದರ ಸತ್ಯಾಸತ್ಯತೆ ಏನು
ಇನ್ನು ಮನೆ ಯಜಮಾನ ವಯಸ್ಸಾಗಿ ಅನಾರೋಗ್ಯದಲ್ಲಿದಲಿದ್ದಾರೆ ಆದರೂ ಅರಣ್ಯ ಅಧಿಕಾರಿಗಳು ಬಂಧಿಸಲು ಮುಂದಾಗಿದ್ದು, ಅರಣ್ಯ ಅಧಿಕಾರಿಗಳ ಧೋರಣೆಗೆ ಶಾಸಕ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳ ಈ ದಿಢೀರ್ ಕ್ರಮವನ್ನು ಖಂಡಿಸಿ ಮಾಜಿ ಸಚಿವ ಆರಗ ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಎನ್.ಆರ್ ಪುರ: ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ
ಎನ್.ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನಲ್ಲಿ ನಡೆದಿದೆ. ಎನ್.ಆರ್ ಪುರ ತಾಲೂಕಿನ ಹಿಳುವಳ್ಳಿ ಗ್ರಾಮದ ಮಧು ಭಂಡಾರಿ (38) ಬಂಧಿತ ಆರೋಪಿ.
ಬಂಧಿತ ಆರೋಪಿಗಳಿಂದ 3000/- ರೂ ನಗದು, ಕಳ್ಳತನದ ಹಣದಿಂದ ತೆಗೆದುಕೊಂಡಿದ್ದ 8500 ರೂ ಬೆಲೆಯ ವಿವೋ ಕಂಪನಿಯ ಒಂದು ಮೊಬೈಲ್, 11000/- ರೂ ಮೌಲ್ಯದ 2 ಗ್ರಾಂ 200 ಮೀಲಿಯ ಚಿನ್ನದ ತಾಳಿ ಸರದ ಕೊಂಡಿಯನ್ನು ವಶಪಡಿಸಿಕೋಂಡಿದ್ದಾರೆ.












