ಕಳಸ: (ನ್ಯೂಸ್ ಮಲ್ನಾಡ್ ವರದಿ) ಪಾರ್ಶ್ವವಾಯು ಪೀಡಿತರಾಗಿದ್ದ ವ್ಯಕ್ತಿಯನ್ನು ಜೋಳಿಗೆಯ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ಪರಿಸ್ಥಿತಿ ಚಿಕ್ಕಮಗಳೂರು ಜಿಲ್ಲೆಯ ಕಳಸ ಗ್ರಾಮ ಪಂಚಾಯಿತಿಯ ಹಿನಾರಿ ಮತ್ತು ಹಂದಿಹಡ್ಡು ಗ್ರಾಮಸ್ಥರಿಗೆ ಎದುರಾಗಿದೆ.
ಇದನ್ನೂ ಓದಿ; ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ; ಈ ಯೋಜನೆಯ ಹಣ ಬಂದಿಲ್ವಾ!; ಕೂಡಲೇ ಈ ದಾಖಲಾತಿಗಳನ್ನು ಇವರಿಗೆ ಸಲ್ಲಿಸಿ

ಹೌದು, ಇಲ್ಲಿಗೆ ಸಂಪರ್ಕವಾಗಿ ರಸ್ತೆ ಇಲ್ಲದೆ ಪಾರ್ಶ್ವವಾಯು ಪೀಡಿತರಾಗಿದ್ದ ನೋಣಯ್ಯ ಎಂಬುವರು ಆಸ್ಪತ್ರೆಗೆ ಕರೆದೊಯ್ಯಲು ಜೋಳಿಗೆ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ. ಸೋಮವಾರ ಮಧ್ಯಾಹ್ನ ಮತ್ತು ತಡರಾತ್ರಿ ಎರಡು ಬಾರಿ ಜೋಳಿಗೆಯ ಮೂಲಕ ನೋಣಯ್ಯ ಅವರನ್ನು ಕಳಸದ ಆಸ್ಪತ್ರೆಗೆ ಹೊತ್ತುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು. ಸಂಪರ್ಕ ರಸ್ತೆ ಇಲ್ಲದ ಬಗ್ಗೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಮನೆಯವರಿಗೆ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಹೊತ್ತುಕೊಂಡು ಆಸ್ಪತ್ರೆಗೆ ಹೋಗಬೇಕಾದ ಕಷ್ಟ ಇದೆ. ಮುಖ್ಯ ರಸ್ತೆಗೆ ಹೋಗಲು ಜೀಪ್ ನವರು 1,500 ಕೇಳುತ್ತಾರೆ. ನಮ್ಮ ಕಷ್ಟವನ್ನು ಯಾವ ಅಧಿಕಾರಿಯೂ ಕೇಳಲ್ಲ. ನಮಗೆ ರಸ್ತೆ ವ್ಯವಸ್ಥೆ ಮಾಡಿಕೊಡಿ ಎಂದು ನೋಣಯ್ಯ ಅವರ ಪತ್ನಿ ಮನವಿ ಮಾಡಿದರು.
ಈ ಪ್ರದೇಶದಲ್ಲಿ ವಾಸಿಸುವ 15 ಪರಿಶಿಷ್ಟ ಕುಟುಂಬದವರು ಸಂಪರ್ಕ ರಸ್ತೆ ವ್ಯವಸ್ಥೆ ಇಲ್ಲ, ಚುನಾವಣೆ ಸಂದರ್ಭದಲ್ಲಿ ಮನೆ ಬಾಗಿಲಿಗೆ ಬಂದು ಭರವಸೆ ನೀಡುತ್ತಾರೆ. ಆ ನಂತರ ನಮ್ಮದು ನಾಯಿಪಾಡು. ನಮಗೆ ಕನಿಷ್ಠ ರಸ್ತೆಯನ್ನೂ ಮಾಡಿಕೊಡಲು ಆಗದಿದ್ದರೆ ಇವರಿಂದ ಇನ್ನೇನು ನಿರೀಕ್ಷಿಸಬಹುದು ಎಂದು ಗ್ರಾಮದ ಮಹಿಳೆಯರಾದ ಅಪ್ಪಿ, ಗಿರಿಜಾ, ಮಮತಾ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶೃಂಗೇರಿ: ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಬೈಕ್ ಗಳಿಗೆ ಡಿಕ್ಕಿ
ಮೆಣಸೆ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಬೈಕ್ ಗಳಿಗೆ ಡಿಕ್ಕಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ನಡೆದಿದೆ.
ಇನ್ನು ಮೆಣಸೆಯ ಸಂಸ್ಕೃತ ಕಾಲೇಜು ಸಮೀಪದಿಂದ ಮೆಣಸೆ ಬಸ್ ಸ್ಟಾಪ್ ವರೆಗೆ ಹಂಪ್ ಹಾಕದಿದ್ದರೆ ವಾಹನದ ವೇಗವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಪಾಯ ಮತ್ತು ಜೀವ ಹಾನಿ ಆಗುವ ಸಂಭವವಿದೆ ಎನ್ನುತ್ತಾರೆ ಸಾರ್ವಜನಿಕರು.












