ಗೋದಾಮಿನಿಂದ ಅಡಿಕೆ ಕಳ್ಳತನ; ಮೂವರು ಆರೋಪಿಗಳ ಬಂಧನ

ಶಿವಮೊಗ್ಗ:  (ನ್ಯೂಸ್ ಮಲ್ನಾಡ್ ವರದಿ) ಗೋದಾಮಿನಿಂದ ಅಡಿಕೆ ಕಳ್ಳತನ ಮಾಡಿದ್ದ ಮೂವರು ಕಳ್ಳರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಜಿಲ್ಲೆಯ ಹೊಸನಗರದಲ್ಲಿ ನಡೆದಿದೆ.

 

ಇದನ್ನೂ ಓದಿ; ಗ್ರಾಮೀಣ ಕುಡಿಯುವ ನೀರು ಇಲಾಖೆಯಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಸುವುದು ಹೇಗೆ?,ಕೊನೆಯ ದಿನಾಂಕ ಯಾವಾಗ?

ಪಟ್ಟಣದ ಸಮೇದಾ ಅಡಿಕೆ ಮಂಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಕಳವು ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪಟ್ಟಣದ ಮಾವಿನಕೊಪ್ಪ ನಿವಾಸಿಗಳಾದ ಎನ್. ರವಿರಾಜ್, ಪಿ. ನಾಗರಾಜ್, ರಾಜೇಶ್ ಬಂಧಿತರು. ಪಟ್ಟಣದ ಸಮೇದಾ ಅಡಿಕೆ ಮಂಡಿಯಲ್ಲಿ ಸಂಗ್ರಹಿಸಿದ್ದ 1.33 ಲಕ್ಷ ಮೌಲ್ಯದ 2 ಕ್ವಿಂಟಲ್ 72 ಕೆ.ಜಿ ಅಡಿಕೆ ಮೂಟೆಗಳನ್ನು ಕಳೆದ ಸೆ.21ರ ರಾತ್ರಿ ಕಳವು ಮಾಡಿದ್ದರು. ಘಟನೆ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಕಳ್ಳರನ್ನು ಬಂಧಿಸಿದ ಪೊಲೀಸರು, ಕೃತ್ಯಕ್ಕೆ ಬಳಸಿದ್ದ 1 ಬೈಕ್ ಮತ್ತು 2 ಕ್ವಿಂಟಲ್ 72 ಕೆಜಿ ಅಡಿಕೆ ವಶಕ್ಕೆ ಪಡೆದಿದ್ದಾರೆ.

 

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ- 01.11.2023

ಸಿಪಿಐ ಗುರಣ್ಣ ಹೆಬ್ಬಾಳ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಿವಾನಂದ ಕೋಳಿ ನೇತೃತ್ವದಲ್ಲಿ ಎಎಸ್‌ಐ ಸುರೇಶ್ ರಾಜ್, ಸಿಬ್ಬಂದಿ ಸುನೀಲ್, ರಂಜಿತ್, ಗಂಗಪ್ಪ ಬಟೋಲಿ, ಸಂದೀಪ್, ನಾಗೇಶ್ ಅವರ ತಂಡ ಕಾರ್ಯಾಚರಣೆ ನಡೆಸಿದೆ.

 

ಚಾರ್ಮಾಡಿ ಹಸನಬ್ಬ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಚಾರ್ಮಾಡಿ ಹಸನಬ್ಬ ಅವರಿಗೆ ನೀಡಿ ಗೌರವಿಸಲಾಗಿದೆ.

 

ಇದನ್ನೂ ಓದಿ; ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ; ಈ ಯೋಜನೆಯ ಹಣ ಬಂದಿಲ್ವಾ!; ಕೂಡಲೇ ಈ ದಾಖಲಾತಿಗಳನ್ನು ಇವರಿಗೆ ಸಲ್ಲಿಸಿ

2023-24ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ 68 ಸಾಧಕರು ಆಯ್ಕೆ ಆಗಿದ್ದರೆ ಅದರಲ್ಲಿ ಚಾರ್ಮಾಡಿ ಹಸನಬ್ಬ ಕೂಡ ಒಬ್ಬರು. ಚಾರ್ಮಾಡಿ ಘಾಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಎಲ್ಲಿಯೇ ಆಕಸ್ಮಿಕ ಅನಾಹುತಗಳು, ಅಪಘಾತಗಳು ಆದಾಗ ಆಪತ್ಬಾಂಧವರಂತೆ ಧಾವಿಸಿ ಬರುವ ಹಸನಬ್ಬ ಅದೆಷ್ಟೋ ಜನರ ಪ್ರಾಣರಕ್ಷಣೆ ಮಾಡಿದ್ದಾರೆ. ಈಗಲೂ ತಮ್ಮ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದರೆ.

ಇದನ್ನೂ ಓದಿ; ಆರೋಗ್ಯ ಸಹಾಯವಾಣಿ 104′ ಕರೆ ಮಾಡಿದ 4 ಗಂಟೆಯಲ್ಲಿ ರಕ್ತ ಕೊಡುತ್ತಾರೆ ಎಂಬ ಯೋಜನೆ ಜಾರಿ; ಇದರ ಸತ್ಯಾಸತ್ಯತೆ ಏನು

ಚಾರ್ಮಾಡಿ ಘಾಟ್ ಎಂದರೆ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ಸುಮಾರು 25 ಕಿಲೋ ಮೀಟರ್ ಅಂತರದಲ್ಲಿ ಯಾವುದೇ ಊರು ಸಿಗುವುದಿಲ್ಲ. ಜನವಸತಿ ಪ್ರದೇಶ ತಲುಪಬೇಕೆಂದರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯೇ ಸಿಗಬೇಕು. ಇಂತಹ ದುರ್ಗಮ ಹಾದಿಯಲ್ಲಿ ಅಚಾನಕ್ ಆಗಿ ಎದುರಾಗುವ ಅವಘಡಗಳು ದಿನಕ್ಕೊಂದಾದರೂ ಇದ್ದೇ ಇರುತ್ತವೆ. ಇಂತಹ ಸನ್ನಿವೇಶದಲ್ಲಿ ತೊಂದರೆಗೀಡಾದ ಜನರ ರಕ್ಷಣೆಗೆ ಹಸನಬ್ಬ ಅವರು ಚಾರ್ಮಾಡಿ ಕಡೆಯಿಂದ ತಮ್ಮ ಸಹವರ್ತಿಗಳನ್ನು ಕರೆದುಕೊಂಡು ರಸ್ತೆ ಸಂಚಾರಕ್ಕೆ ಮುಕ್ತಗೊಳಿಸುವುದು, ಜನರ ಜೀವ ರಕ್ಷಣೆಗಾಗಿ ಹರಸಾಹಸ ಪಡುತ್ತಾರೆ.

ಇಂತಹ ವ್ಯಕ್ತಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಶ್ಲಾಘನೀಯವಾಗಿದೆ.

ಶೋಬಾನೆ ಚೌಡಮ್ಮನವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ:
ರಾಜ್ಯೋತ್ಸವ ಪ್ರಶಸ್ತಿಗೆ ಚಿಕ್ಕಮಗಳೂರು ಜಿಲ್ಲೆಯ ಜಾನಪದ ಕಲಾವಿದರಾದ ಸೋಬಾನೆ ಚೌಡಮ್ಮನವರು ಒಬ್ಬರಾಗಿದ್ದಾರೆ. ಮೂಲತಃ ಚೌಡಮ್ಮನವರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಚಿಕ್ಕಬಾಸೂರು ಗ್ರಾಮದವರು. 70 ವರ್ಷ ವಯಸ್ಸಿನ ಚೌಡಮ್ಮನವರು ರೈತಾಪಿ ಕುಟುಂಬದಲ್ಲಿ ಹುಟ್ಟಿ ಬಾಲ್ಯದಿಂದಲೂ ತಮ್ಮ ತಾಯಿಯಿಂದ ಬಳುವಳಿಯಾಗಿ ಬಂದ ಸೋಬಾನೆ ಪದಗಳನ್ನು ಹಾಡುತ್ತಾ ಬದುಕು ಕಟ್ಟಿಕೊಂಡವರು. ಶೋಬಾನೆ ಚೌಡಮ್ಮ ಎಂದೇ ಈ ಭಾಗದಲ್ಲಿ ಪ್ರಸಿದ್ಧರಾಗಿರುವ ಚೌಡಮ್ಮನವರು ತಮ್ಮ ಕೃಷಿ ಚಟುವಟಿಕೆಯ ನಡುವೆಯೂ ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ತಮ್ಮ ಶೋಬಾನೆ ಪದಗಳ ಮೂಲಕ ಗ್ರಾಮೀಣ ಸಂಪ್ರದಾಯಗಳಿಗೆ ಹೊಳಪನ್ನು ನೀಡುತ್ತಾ ಬರುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಗೆ ಚೌಡಮ್ಮನವರನ್ನು ಆಯ್ಕೆ ಮಾಡುವ ಮೂಲಕ ಅವರ ಜಾನಪದ ಸೇವೆಗೆ ಉನ್ನತ ಮನ್ನಣೆ ನೀಡಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.