ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮೆಣಸೆಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಶ್ರೀ ಭಾರತೀತೀರ್ಥ ಶಾಸ್ತ್ರ ಸಮುತ್ಕರ್ಷ ಕೇಂದ್ರದ ನೂತನ ನಿರ್ದೇಶಕರಾಗಿ ಪ್ರೊ. ಸುಬ್ರಾಯ ವಿ. ಭಟ್ ಅಧಿಕಾರ ಸ್ವೀಕರಿಸಿದರು. ನಿವೃತ್ತ ನಿರ್ದೇಶಕ ಹಂಸಧರ್ ಝಾ ಅಧಿಕಾರ ಹಸ್ತಾಂತರಿಸಿದರು.
ಇದನ್ನೂ ಓದಿ: ಬಸ್ ಗಳ ಸುರಕ್ಷತೆಗೆ ಮಹತ್ವದ ಕ್ರಮ; ಈ ನಿಯಮಗಳ ಪಾಲನೆ ಕಡ್ಡಾಯ!

ಈ ವೇಳೆ ಮಾತನಾಡಿದ ಹಂಸಧರ್ ಝಾ, ಅಧಿಕಾರ ವಹಿಸಿಕೊಂಡಿರುವ ಪ್ರೊ. ಸುಬ್ರಾಯ ಭಟ್ ಅವರು ಪೂರ್ವ ಮೀಮಾಂಸಾ ಮತ್ತು ಧರ್ಮ ಶಾಸ್ತ್ರದ ವಿರಳ ವಿದ್ವಾಂಸರಲ್ಲಿ ಒಬ್ಬರು. ಶೈಕ್ಷಣಿಕ ರಂಗದಲ್ಲಿ 30 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಇದೀಗ ವಿವಿ ನಿರ್ದೇಶಕರಾಗಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ್ದಾರೆ ಎಂದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಪ್ರೊ. ಸುಬ್ರಾಯ ಭಟ್, ಭಾರತೀ ತೀರ್ಥ ಶಾಸ್ತ್ರ ಸಮುತ್ಕರ್ಷ ಕೇಂದ್ರವು ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಉಭಯ ಜಗದ್ಗುರುಗಳ ಆಶೀರ್ವಾದದೊಂದಿಗೆ ಮತ್ತು ಕುಲಪತಿಗಳ ದೃಢ ಸಂಕಲ್ಪದಂತೆ ಶಾಸ್ತ್ರದ ಆಳವಾದ ಅಧ್ಯಯನಕ್ಕೆ ತೆರೆದುಕೊಳ್ಳಲಿದೆ. ಈ ಪರಿಸರವು ಶಾಸ್ತ್ರಗಳ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದು ಶಾಸ್ತ್ರವನ್ನು ಅಳವಾಗಿ ಓದಿಕೊಂಡ ವಿದ್ವಾಂಸರನ್ನು ಸಿದ್ಧಪಡಿಸಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದ ಪೊಲೀಸ್ ಸಿಬ್ಬಂದಿಗಳ ಸ್ಲೋಚ್ ಕ್ಯಾಪ್ ಗೆ ಗುಡ್ ಬೈ; ಪೊಲೀಸ್ ಪೇದೆಗಳಿಗೆ ಹೊಸ ಟೋಪಿ












