ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಸಂಘಟನ ಚತುರ ಎಂದು ಖ್ಯಾತಿ ಪಡೆದ ದೇವರಾಜ್ (ಪವಿಯಣ್ಣ) ಅವರು ಇಂದು ಮೇಗುಂದ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಜಯಪುರ ಸಮೀಪದ ಮಕ್ಕಿಕೊಪ್ಪ ಸಭಾಭವನದಲ್ಲಿ ಇಂದು ಸಂಜೆ ನಡೆಯುವ ಸಮಾರಂಭದಲ್ಲಿ ಅವರು ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಹಲವಾರು ಸಂಘ–ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗುರುತಿಸಿಕೊಂಡಿರುವ ದೇವರಾಜ್ ಅವರು ಪಕ್ಷದ ಹಿರಿಯ ನಾಯಕರ ಆತ್ಮೀಯ ಕಾರ್ಯಕರ್ತರಾಗಿದ್ದು, ಯುವಜನತೆಯಲ್ಲಿ ವಿಶೇಷ ಹಿಡಿತ ಹೊಂದಿದ್ದಾರೆ.

ಮೇಗುಂದ ಹೋಬಳಿಯಾದ್ಯಂತ ದೇವರಾಜ್ ಅವರ ಅಧ್ಯಕ್ಷ ಸ್ಥಾನ ಸ್ವೀಕಾರವು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಅವರ ನಾಯಕತ್ವದಲ್ಲಿ ಹೋಬಳಿಯಲ್ಲಿ ಸಮಗ್ರ ಅಭಿವೃದ್ಧಿ ನಡೆಯಲಿದೆ ಎಂಬ ಭರವಸೆಯನ್ನು ಪಕ್ಷದ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.













