ಶೃಂಗೇರಿ: ವಿದ್ಯೆಯೊಂದಿಗೆ ಸಂಸ್ಕಾರವನ್ನು ಕಲಿಯಬೇಕು: ವಿಧುಶೇಖರ ಭಾರತೀ ಸ್ವಾಮೀಜಿ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸಂಸ್ಕಾರವನ್ನು ಕಲಿತರೆ ಮಾತ್ರ ಆ ವಿದ್ಯೆಗೆ ಬೆಲೆ ಬರುತ್ತದೆ ಎಂಬುದಾಗಿ ದಕ್ಷಿಣಾಮ್ನಾಯ ಶಾರದಾಪೀಠದ ಶ್ರೀವಿಧುಶೇಖರ ಭಾರತೀ ಸ್ವಾಮಿಗಳು ತಿಳಿಸಿದರು.


ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್!; ಕೃಷಿ ಉಪಕರಣ ಖರೀದಿಗೆ 50% ಸಬ್ಸಿಡಿ


ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಶ್ರೀ ಭಾರತಿತೀರ್ಥ ಶಾಸ್ತ್ರಸಮುತ್ಕರ್ಷ ಕೇಂದ್ರದ ಸಂಸ್ಕೃತೋತ್ಸವವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ್ದು, ಸಂಸ್ಕೃತವು ಎಲ್ಲ ರೀತಿಯ ಜ್ಞಾನದ ಆಗರವಾಗಿದೆ ಆಧುನಿಕ ಯುಗದಲ್ಲಿ ಮನುಷ್ಯನು ತನ್ನ ಅಪಾರ ಮೇಧಾಶಕ್ತಿಯಿಂದ ಯಾವುದನ್ನೆಲ್ಲ ಕಂಡುಹಿಡಿದರೂ ಕೂಡ ಅಧ್ಯಾತ್ಮದ ಜ್ಞಾನಕ್ಕಾಗಿ ಭಾರತೀಯ ಅಧ್ಯಾತ್ಮಶಾಸ್ತ್ರವನ್ನೇ ಆಶ್ರಯಿಸಬೇಕಾಗುತ್ತದೆ. ಪರಂಪರಾಗತವಾದ ಭಾರತೀಯ ಶಾಸ್ತ್ರಗಳಲ್ಲಿ ಮಾತ್ರವೇ ಐಹಿಕ ಮತ್ತು ಪಾರಲೌಕಿಅಕವಾದ ಶ್ರೇಯಸ್ಸನ್ನು ಪ್ರತಿಪಾದಿಸಲಾಗಿದೆ.

ಪ್ರತಿಯೊಬ್ಬ ವ್ಯಕ್ತಿಯ ಪರಮಪುರುಷಾರ್ಥದ ಸಾಧನೆಯು ಸಂಸ್ಕೃತ ಮತ್ತು ಶಾಸ್ತ್ರಗಳ ಅಧ್ಯಯನ ಮಾತ್ರದಿಂದಲೇ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಸ್ಕೃತ ವಿದ್ಯಾರ್ಥಿಗಳು ಶಾಸ್ತ್ರದ ಅಧ್ಯಯನದ ಜೊತೆಗೆ ಸಮಾಜದಲ್ಲಿ ಭಾರತೀಯ ವಿದ್ಯೆಗಳನ್ನು ಪ್ರಚಾರಮಾಡುವ ಕಾರ್ಯವನ್ನು ಕೈಗೊಳ್ಳಬೇಕು
ಜಗದ್ಗುರುಗಳಾದ ಭಾರತೀತೀರ್ಥ ಮಹಾಸ್ವಾಮಿಗಳ ಹೆಸರಿನಲ್ಲಿ ಶಾಸ್ತ್ರದ ಉನ್ನತ ಅಧ್ಯಯನಕ್ಕಾಗಿ ಆರಂಭಗೊಳ್ಳುತ್ತಿರುವ ‘ಭಾರತೀತೀರ್ಥಶಾಸ್ತ್ರ ಸಮುತ್ಕರ್ಷ ಕೇಂದ್ರ’ದ ರೂಪದಲ್ಲಿ ಪರಿಸರವು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಅವರು ಆಶೀರ್ವದಿಸಿದರು.


ಇದನ್ನೂ ಓದಿ: ರೈಲ್ವೆ NTPC ಗ್ರಾಜುವೇಟ್ ನೇಮಕಾತಿ; 30,307 ಹುದ್ದೆಗೆ ಅರ್ಜಿ ಆಹ್ವಾನ


ಸಂಸ್ಕೃತೋತ್ಸವದ ಅಂಗವಾಗಿ ಗುರುಭವನದಲ್ಲಿ ಆಯೋಜಿಸಲ್ಪಟ್ಟಿದ್ದ ಈ ಕಾರ್ಯಕ್ರಮದಲ್ಲಿ “ವಾಕ್ಯಾರ್ಥಭಾರತಿ’ ಎಂಬ ಶೋಧಪತ್ರಿಕೆಯನ್ನು ಜಗದ್ಗುರುಗಳು ಲೋಕಾರ್ಪಣೆಗೊಳಿಸಿದರು.

ಭಾರತೀತೀರ್ಥ ಶಾಸ್ತ್ರಸಮುತ್ಕರ್ಷಕೇಂದ್ರದ ನಿದೇಶಕರಾದ ಪ್ರೊ. ಹಂಸಧರ ಝಾ ಅವರು ಸ್ವಾಗತವನ್ನು ಕೋರಿದ್ದು, ಉಪನಿದೇಶಕರಾದ ಪ್ರೊ. ಚಂದ್ರಕಾಂತ್ ಅವರು ಧನ್ಯವಾದವನ್ನು ಅರ್ಪಿಸಿದರು. ಪ್ರೊ. ಹರಿಪ್ರಸಾದ್ ಅವರು ಕಾರ್ಯಕ್ರಮದ ಸಂಚಾಲನೆಯನ್ನು ಗೈದರು ಸಂಸ್ಕೃತೋತ್ಸವದ ನಿಮಿತ್ತ ಇಡೀ ಒಂದು ವಾರ ಭಾರತೀತೀರ್ಥ ಶಾಸ್ತ್ರಸಮುತ್ಕರ್ಷ ಕೇಂದ್ರದಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಂಸ್ಕೃತೋತ್ಸವದ ಸಮಾರೋಪ ಸಮಾರಂಭವು ಶನಿವಾರ 9ನೇ ತಾರೀಕು ನಡೆಯಲಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.