ಮಲೆನಾಡಿನ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ರಾಜ್ಯ ರೈತ ಸಂಘ-ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಕೆ

ಶೃಂಗೇರಿ:  (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ (ಶೃಂಗೇರಿ) ವತಿಯಿಂದ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.


ಇದನ್ನೂ ಓದಿ; ರಾಜ್ಯದ 1 ರಿಂದ 10ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!


ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾನೋಳ್ಳಿ ಚಂದ್ರಶೇಖರ್, ತಾಲೂಕಿನಲ್ಲಿ ಮಳೆಗಾಲದಿಂದ ಅತಿವೃಷ್ಠಿಯಿಂದಾಗಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ಕಾಳುಮೆಣಸು, ಕಾಫಿ, ಏಲಕ್ಕಿ, ಭತ್ತದ ಗದ್ದೆಗಳಿಗೆ ಹಾನಿಯಾಗಿರುತ್ತದೆ. ಕೂಡಲೇ ಸಂಬಂಧಪಟ್ಟ ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಕಾಫಿ ಮಂಡಳಿ ಮತ್ತು ಸಾಂಬಾರು ಮಂಡಳಿಯ ಎಲ್ಲಾ ಅಧಿಕಾರಿಗಳು ಜಂಟಿಯಾಗಿ ರೈತರ ಜಮೀನಿಗೆ ಧಾವಿಸಿ ಸ್ಥಳ ಪರಿಶೀಲನೆ ಮಾಡಿ ಸೂಕ್ತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಶೃಂಗೇರಿ ತಾಲ್ಲೂಕಿನಾದ್ಯಂತ ಸರ್ಕಾರಿ ಪ್ರದೇಶವನ್ನು ಪ್ರಾಸ್ಥವಿಕ ಅರಣ್ಯ 4(1) ನಕಾಶೆಯನ್ನು ತಯಾರಿಸಿದ್ದು, ಈ ಪ್ರದೇಶಗಳನ್ನು ಮೀಸಲು ಅರಣ್ಯ (ಸೆಕ್ಷನ್ 17) ಎಂದು ಘೋಷಣೆಯನ್ನು ಮಾಡುವಾಗ ರೈತರು, ಕೃಷಿ ಕಾರ್ಮಿಕರು ಮತ್ತು ಇತರರು ಮನೆ ನಿರ್ಮಾಣ ಮತ್ತು ತಮ್ಮ ಜಮೀನಿನ ಪಕ್ಕದಲ್ಲಿ ಸರ್ಕಾರಿ ಪ್ರದೇಶದಲ್ಲಿ ಕೃಷಿ ಮಾಡಿರುವ ಪ್ರದೇಶಗಳನ್ನು ಮತ್ತು ವಾಸದ ಮನೆಯನ್ನು ಹೊರತುಪಡಿಸಬೇಕು.


ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?


ಈ ಹಿಂದೆ ಸೆಕ್ಷನ್ 4(1) ರಿಂದ ಸೆಕ್ಷನ್ 17 ಮಾಡುವಾಗ ರೈತರು, ಕೃಷಿ ಕಾರ್ಮಿಕರು ಮತ್ತು ಇತರರು ತಮ್ಮ ಮನೆ ಮತ್ತು ಜಮೀನಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನು ನೀಡಿದ್ದು, ಆಕ್ಷೇಪಣೆ ಸಲ್ಲಿಸಿ ಹಿಂಬರಹ ಪಡೆದಿದ್ದರು. ಆದರೆ, ಇಲ್ಲಿಯವರೆಗೆ ವ್ಯವಸ್ಥಾಪನಾಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ ಜಮೀನುಗಳ ಸ್ಥಳ ಪರಿಶೀಲನೆ ಮಾಡಿರುವುದಿಲ್ಲ. ಈ ತಕ್ಷಣ ಸ್ಥಳ ಪರಿಶೀಲಿಸಿ ಅರ್ಜಿ ಸಲ್ಲಿಸಿದ ರೈತರು, ಕೃಷಿ ಕಾರ್ಮಿಕರು ಮತ್ತು ಇತರರ ಜಮೀನುಗಳು ಸೆಕ್ಷನ್ 4(1)ಗೆ ಒಳಪಟ್ಟಲ್ಲಿ ಅಂತಹ ಜಮೀನು ಮತ್ತು ಮನೆಗಳನ್ನು ವ್ಯಾಪ್ತಿಯಿಂದ ಹೊರತುಪಡಿಸಿ ನಂತರ ಸೆಕ್ಷನ್ 17ನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ಸರ್ಕಾರಿ ಕಂದಾಯ ಜಮೀನುಗಳ ಪಹಣಿಯಲ್ಲಿ ಸೊಪ್ಪಿನ ಬೆಟ್ಟವೆಂದು ನಮೂದಾಗಿದ್ದು, ನಮೂನೆ 50, 53, 57 ಮತ್ತು 94ಸಿ, 94ಸಿಸಿ ಅರ್ಜಿ ಸಲ್ಲಿಸಿದವರಿಗೆ ಮಂಜೂರಾತಿ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲಾ ಎನ್ನುತ್ತಾರೆ. ಆದರಿಂದ ರೈತರು ಮತ್ತು ಸಾರ್ವಜನಿಕರು ಜೀವನ ಉಪಯೋಗಕ್ಕೆ ಜಮೀನಿನ ಪಕ್ಕದಲ್ಲಿ ಕಂದಾಯ ಜಾಗದಲ್ಲಿ ಕೃಷಿ ಮಾಡಿರುವ ಸೊಪ್ಪಿನಬೆಟ್ಟ ಪ್ರದೇಶಗಳಲ್ಲಿ ಸರ್ಕಾರ ಮಂಜೂರು ಮಾಡಲು ಕಾನೂನಿನಲ್ಲಿ ತಿದ್ದುಪಡಿ ತಂದು ಹಕ್ಕು ಪತ್ರ ನೀಡಬೇಕು. ಈ ಹಿಂದೆ ಮಂಜೂರಾದ ಜಮೀನುಗಳ ಮತ್ತು ಮನೆದಳದಲ್ಲಿ ಜಾಗದ ಪಹಣಿಗಳು ಪಕ್ಕಾ ಪೋಡಿಯಾಗದೇ ಜನರಿಗೆ ತೊಂದರೆಯಾಗುತ್ತಿದ್ದು, ಅಂತಹ ಜಮೀನು ಮತ್ತು ಮನೆಯ ಜಾಗಗಳನ್ನು ಸರ್ಕಾರದ ವೆಚ್ಚದಲ್ಲಿ ಪಕ್ಕಾಪೋಡಿ ಮಾಡಿಸಿಕೊಡಬೇಕು ಎಂದು ರೈತ ಸಂಘದ ಗೌರವಾಧ್ಯಕ್ಷ ಕೆಲವಳ್ಳಿ ಗುಂಡಪ್ಪ ಆಗ್ರಹಿಸಿದರು.


ಇದನ್ನೂ ಓದಿ; ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ


ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಶ್ರೀಧರ್ ರಾವ್, ಯೋಗಪ್ಪ, ಅನಂತಯ್ಯ ಮೆಣಸೆ, ಚೆನ್ನಕೇಶವ ಮೆಣಸೆ, ಪೂರ್ಣೇಶ್ ಉಳುವಳ್ಳಿ, ಚಂದ್ರಪ್ಪ ತೆಕ್ಕೂರು ಮತ್ತು ರೈತರು ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.