ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ವಿರುದ್ಧ ಸುಳ್ಳು ಆರೋಪ, ಹೇಳಿಕೆ ಹಾಗೂ ವರದಿ ಸಿಬಿಐಗೆ ವಹಿಸಿ: ಕಲ್ಮರಡಪ್ಪ ಆಗ್ರಹ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ)  ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಮಾಡದೆ ವಕ್ಫ್‌ ವಿಷಯವನ್ನು ಮುಂದಿಟ್ಟುಕೊಂಡು ಚರ್ಚಿಸುತ್ತಿದ್ದೀರಿ. ಬಿ.ವೈ ವಿಜಯೇಂದ್ರ ವಿರುದ್ಧ ವಕ್ಫ್‌ ವಿಚಾರದಲ್ಲಿ ಸುಳ್ಳು ಆರೋಪ ಮಾಡುತ್ತಿದ್ದು, ಹೇಳಿಕೆ ಹಾಗೂ ವರದಿಯನ್ನು ಕೂಡಲೇ ಸಿಬಿಐಗೆ ವಹಿಸಿ ಎಂದು ರಾಜ್ಯ, ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್‌ಸಿ ಕಲ್ಮರಡಪ್ಪ ಆಗ್ರಹಿಸಿದ್ದಾರೆ.


ಇದನ್ನೂ ಓದಿ; ರಾಜ್ಯದ 1 ರಿಂದ 10ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!


ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಿಯಾಂಕ ಖರ್ಗೆ ವಕ್ಫ್‌ ವಿಚಾರದಲ್ಲಿ ಸುಳ್ಳು ಆರೋಪ ಮಾಡುತ್ತಿದ್ದು, ಅನ್ವರ್ ಮಾಣಿಪ್ಪಾಡಿ ಹೇಳಿಕೆ ಹಾಗೂ ವರದಿಯನ್ನು ಕೂಡಲೇ ಸಿಬಿಐಗೆ ವಹಿಸಿ. ನಿಮ್ಮಲ್ಲಿ ಸಾಕ್ಷಾಧಾರಗಳು ಇದ್ದರೆ ದೂದ್ ಕಾ ದೂದ್ ಪಾನಿಕಾ ಪಾನಿ ಆಗಿ ಬಿಡಲಿ. ಎಲ್ಲಾ ಪ್ರಕರಣಗಳನ್ನು ತನಿಖೆಗೆ ವಹಿಸಿ ಅದು ವಾಲ್ಮೀಕಿ ಹಗರಣ, ಮುಡಾ ಹಗರಣ, ಕೋವಿಡ್ ಹಗರಣ ಹಾಗೂ ಅಬಕಾರಿ ಹಗರಣ ಎಲ್ಲವನ್ನು ಸಿಬಿಐಗೆ ವಹಿಸಿ. ಇಲ್ಲದಿದ್ದರೆ ನಿಮ್ಮನ್ನು ಪುಕ್ಕಲು ಮುಖ್ಯಮಂತ್ರಿ ಎಂದು ಕರೆಯ ಬೇಕಾಗುತ್ತದೆ ಎಂದರು.


ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?


ರಾಜ್ಯದಲ್ಲಿ ಕೊಡುಗೆ ಶೂನ್ಯ:
ಅನ್ಸರ್ ಮಾಣಿಪ್ಪಾಡಿಗೆ ಬಿ.ವೈ ವಿಜಯೇಂದ್ರ ಏಕೆ ಆಮಿಷ ಒಡ್ಡುತ್ತಾರೆ, ಪ್ರಕರಣದಲ್ಲಿ ಅವರ ಪಾತ್ರ ಏನಿದೆ? ಕಾಂಗ್ರೆಸಿಗರು ವಕ್ಫ್‌ ಆಸ್ತಿ ಕಬಳಿಸಿದರೆ ವಿಜಯೇಂದ್ರ ಏಕೆ ಆಫರ್ ಮಾಡುತ್ತಾರೆ.

ರಾಜ್ಯದ ಜನತೆಯ ತೆರಿಗೆ ಹಣವನ್ನು ವ್ಯರ್ಥ ಮಾಡಲು ಸದನವನ್ನು ಕರೆದಿದ್ದೀರಿ ಕರ್ನಾಟಕದಕ್ಕೆ ನಿಮ್ಮ ಕೊಡುಗೆ ಶೂನ್ಯ, ಅಭಿವೃದ್ಧಿ ವಿಚಾರವಾಗಿ ಚರ್ಚೆಗೆ ಬಳಸದೆ ಸದನದಲ್ಲಿ ವ್ಯರ್ಥ ಆರೋಪಗಳನ್ನ ಮಾಡುವ ಮೂಲಕ ಕಲಾಪವನ್ನು ಹಾಳು ಮಾಡುತ್ತಿದ್ದೀರಿ ಎಂದು ಕಲ್ಮರಡಪ್ಪ ಆರೋಪಿಸಿದರು.


ಇದನ್ನೂ ಓದಿ; ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.