ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ನಿನ್ನೆ ಹಸಿರು ಫೌಂಡೇಶನ್ (ರಿ) ವತಿಯಿಂದ ಮೂಡಿಗೆರೆ ತಾಲೂಕು ಬಣಕಲ್ ಹೋಬಳಿಯ ಪೊಲೀಸ್ ಸ್ಟೇಷನ್ ಸರ್ಕಲ್ ನಿಂದ ಚಾರ್ಮಾಡಿ ವರೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 30,000 ಹುದ್ದೆಗಳಿಗೆ ಅರ್ಜಿ ಆಹ್ವಾನ; 18,000 ದಿಂದ 22,000 ಸಂಬಳ, 10th ವಿದ್ಯಾರ್ಹತೆ

ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಮುಖಂಡ ಕುರುವಂಗಿ ವೆಂಕಟೇಶ್, ಹಸಿರು ಫೌಂಡೇಶನ್ (ರಿ) ಸಂಸ್ಥೆ ಬಗ್ಗೆ ಶ್ಲಾಘಿಸಿದರು. ಜೊತೆಗೆ ಸಂಸ್ಥೆ ವತಿಯಿಂದ ಇನ್ನಷ್ಟು ಉತ್ತಮ ಕಾರ್ಯಗಳು ಆಗಲಿ ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದರು.
ಇನ್ನೋರ್ವ ಮುಖಂಡರು ವಿಜಯ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಸಿರು ಫೌಂಡೇಶನ್ (ರಿ) ಜೊತೆ ಕೈಜೋಡಿಸಿ ಒಳ್ಳೆ ಸಂದೇಶ ನೀಡಿದ್ದಾರೆ. ಇದು ಹೀಗೆ ಮುಂದುವರೆಯಲಿ ಎಂದರು.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಬಗ್ಗೆ ಮೊದಲ ಆದೇಶ
ಹಸಿರು ಫೌಂಡೇಶನ್ (ರಿ) ಅಧ್ಯಕ್ಷ ರತನ್ ಊರುಬಗೆ ಮಾತನಾಡಿ, ನಮ್ಮ ಹಸಿರು ಫೌಂಡೇಶನ್ (ರಿ) ಸಮಾಜ ಸೇವೆ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಎಲ್ಲರೂ ಕೈ ಜೋಡಿಸಿದರೆ ಏನು ಬೇಕಾದರೂ ಸಾಧಿಸಬಹುದು. ನಮ್ಮ ಟ್ರಸ್ಟ್ ನಿಂದ ನಿರಂತರವಾಗಿ ಸಾಮಾಜಿಕ ಕೆಲಸಗಳು ನಡೆಯುತ್ತಿರುತ್ತವೆ ಎಂದರು.
ಈ ಸಂದರ್ಭದಲ್ಲಿ ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲ ಗೋಪಾಲ್, ಮುಖಂಡರಾದ ಸಂಜಯ್ ಕೊಟ್ಟಗೆಹಾರ, ಪ್ರಭಾಕರ್ ಬಿನ್ನಡಿ, ಗ್ರಾಮ ಪಂಚಾಯಿತಿ ಸದಸ್ಯ ಮಧುಕುಮ, ಡಿ.ಎಸ್.ಬಿ.ಜಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆ ವಿದ್ಯಾರ್ಥಿಗಳು ಹಾಗೂ ಹಸಿರು ಫೌಂಡೇಶನ್ (ರಿ) ಸ್ವಯಂ ಸೇವಕರು ಹಾಜರಿದ್ದರು.
ಇದನ್ನೂ ಓದಿ: ಶಾಲಾ ಆಡ್ಮೀಶನ್ʼಗೆ ಈ ನಿಯಮ ಕಡ್ಡಾಯ; ಈ ಆದೇಶ ಪಾಲನೆ ಮಾಡುವಂತೆ ಶಿಕ್ಷಣ ಸಚಿವ ಸೂಚನೆ












