ಕನ್ನಡ ಸಾಹಿತ್ಯ ಸಮ್ಮೇಳನ: ವಿಶೇಷ ಸನ್ಮಾನಿತರಾಗಿ ಸಗೀರ್‌ ಅಹಮ್ಮದ್, ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ಆಯ್ಕೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಇದೇ ಡಿಸೆಂಬರ್ 20, 21, 22 ರಂದು ನಡೆಯಲಿದ್ದು, ಈ ಸಮ್ಮೇಳನದಲ್ಲಿ ನಮ್ಮ ಜಿಲ್ಲೆಯ ಮಾಜಿ ಸಚಿವರಾದ ಸಗೀರ್‌ ಅಹಮ್ಮದ್ ಅವರನ್ನು ವಿಶೇಷವಾಗಿ ಅಭಿನಂದಿಸಲು ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ.


ಇದನ್ನೂ ಓದಿ; ರಾಜ್ಯದ 1 ರಿಂದ 10ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!


ಇವರು ಈ ಹಿಂದೆ ಸಚಿವರಾಗಿದ್ದಾಗ ಕೇಂದ್ರ ಕ. ಸಾ. ಪ. ದಲ್ಲಿ ಹರಿಕೃಷ್ಣ ಪುನರೂರು ಮತ್ತು ಜಿಲ್ಲೆಯಲ್ಲಿ ಅಜ್ಜಂಪುರ ಜಿ. ಸೂರಿ ಆಯ್ಕೆಗೊಂಡ ಸಂದರ್ಭದಲ್ಲಿ ಚಿಕ್ಕಮಗಳೂರಿನ ಕ. ಸಾ. ಪ. ಪದಗ್ರಹಣ ಸಮಾರಂಭದಲ್ಲಿ ಅಂದಿನ ಸಚಿವರಾದ ಸಗೀರ್ ಅಹಮ್ಮದ್ ಅವರನ್ನು ಉಚಿತ ಬಸ್ ಪಾಸ್‌ಗಾಗಿ ಮನವಿ ಮಾಡಿಕೊಂಡಾಗ ಅದನ್ನು ಪರಿಗಣಿಸಿ ಕನ್ನಡ ನುಡಿ ಸೇವೆಗಾಗಿ ರಾಜ್ಯದಲ್ಲಿರುವ 30 ಜಿಲ್ಲೆಯ ಅಧ್ಯಕ್ಷರುಗಳಿಗೆ ಉಚಿತ ಬಸ್‌ಪಾಸ್‌ನ್ನು ನೀಡಿದ ಕೀರ್ತಿ ಸಗೀರ್‌ ಅಹಮ್ಮದ್ ಅವರಿಗೆ ಸಲ್ಲುತ್ತದೆ. ಆ ಕಾರಣಕ್ಕೆ ಅವರನ್ನು ಈ ಸಂದರ್ಭದಲ್ಲಿ ವಿಶೇವಾಗಿ ಅಭಿನಂದಿಸಲಾಗುತ್ತಿದೆ.


ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?


ಸಮಾಜ ಸೇವೆಯಲ್ಲಿ ಅಜ್ಜಂಪುರದ ಎ. ಸಿ. ಚಂದ್ರಪ್ಪ ಅವರನ್ನು ಹಾಗೂ ಭಾರತೀಯ ಸೇನೆಯಲ್ಲಿ ಪರಮ ವಿಶಿಷ್ಟ ಸೇವಾ ಮೆಡಲ್, ಉತ್ತಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್ ಮತ್ತು ಯುದ್ಧ ಸೇವಾ ಮೆಡಲ್ ಪುರಸ್ಕೃತರಾದ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ಅವರನ್ನು ನಮ್ಮ ಜಿಲ್ಲೆಯಿಂದ ಸನ್ಮಾನಿತರಾಗಲು ಆಯ್ಕೆಯಾಗಿದ್ದಾರೆ.


ಇದನ್ನೂ ಓದಿ; ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ


ಪಠ್ಯಪುಸ್ತಕದ ಸಂಪಾದಕ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಕೊಪ್ಪದ ಶಿಕ್ಷಕ ಆರ್. ಡಿ. ರವೀಂದ್ರ ಅವರು ಉಪನ್ಯಾಸ ಮಾಲಿಕೆಗೆ ಕೇಂದ್ರ ಸಾಹಿತ್ಯ ಅಕಾಡೆಮೆ ಪ್ರಶಸ್ತಿ ಪುರಸ್ಕೃತರಾದ ಡಾ. ಶೃತಿ ಬಿ. ಆರ್. ಮಹಿಳಾ ವಿಶೇಷ ಕವಿಗೋಷ್ಠಿಗೆ ಮತ್ತು ಕವಿಗೋಷ್ಠಿಗೆ ಸಾಹಿತಿ ಕಳಸಾ ಗೀತಾ ಮಕ್ಕಿಮನೆ ಹಾಗೂ ದೃಷ್ಠಿಚೇತನರ ವಿಶೇಷ ಕವಿಗೋಷ್ಠಿಗೆ ಹರೀಶ್ ಸಿ. ಇವರುಗಳು ನಮ್ಮ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.


ಇದನ್ನೂ ಓದಿ; ಇ-ಖಾತೆ ಪಡೆಯುವವರ ಗಮನಕ್ಕೆ; ನಿಮಗಿಲ್ಲಿದೆ ಮುಖ್ಯ ಮಾಹಿತಿ, ಮಿಸ್‌ ಮಾಡ್ದೆ ಈ ಸುದ್ದಿ ಓದಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.