
ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಮಕ್ಕಳ ಎದುರೇ ಗೃಹಿಣಿಯ ಭೀಕರ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಕಿಚ್ಚಬ್ಬಿ ಎಂಬಲ್ಲಿ ನಡೆದಿದೆ. ತೃಪ್ತಿ (25) ಹತ್ಯೆಗೊಳಗಾದ ಗೃಹಿಣಿ.
ಇದನ್ನೂ ಓದಿ; ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರಿಗೆ ಮುಖ್ಯ ಮಾಹಿತಿ; ಇಲ್ಲಿದೆ ನೋಡಿ ಡಿಟೈಲ್ಸ್


ಕಳೆದ ಒಂದು ತಿಂಗಳ ಹಿಂದೆ ತೃಪ್ತಿ ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ಈ ವಿಚಾರವಾಗಿ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಲಾಗಿತ್ತು. ತದನಂತರ ರಾಜಿ ಮಾತುಕತೆ ನಡೆದು ಆತನೊಂದಿಗೆ ಮಾತು ಬಿಟ್ಟಿದ್ದಳು. ಅದೇ ಸಿಟ್ಟಿಗೆ ತೃಪ್ತಿ ಪ್ರಿಯಕರ ಮಕ್ಕಳ ಎದುರೇ ಇಂದು ಮದ್ಯಾಹ್ನ 12.30 ರ ಸುಮಾರಿಗೆ ಚಾಕುವಿನಿಂದ ಇರಿದು ಕೆರೆಗೆ ತಳ್ಳಿ ಹತ್ಯೆ ಮಾಡಲಾಗಿದೆ.



ಇದನ್ನೂ ಓದಿ; ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್; ಅನ್ನಚಕ್ರ ಯೋಜನೆಗೆ ಚಾಲನೆ!, ಏನಿದು ಯೋಜನೆ, ಇಲ್ಲಿದೆ ನೋಡಿ ಡಿಟೈಲ್ಸ್
ಇನ್ನು ತೃಪ್ತಿಗೆ ನಾಲ್ಕು ವರ್ಷ ಹಾಗೂ ಎರಡು ವರ್ಷದ ಇಬ್ಬರು ಮಕ್ಕಳಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ .

ಇದನ್ನೂ ಓದಿ; ಮಹಿಳೆಯರಿಗೆ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ; ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!














