ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ)
ಜಯಪುರ, ಬಾಳೆಹೊನ್ನೂರು, ಮೂಡಿಗೆರೆ, ಸೇರಿದಂತೆ PSI ಗಳ ವರ್ಗಾವಣೆಗೊಳಿಸಲಾಗಿತ್ತು. ಪಶ್ಚಿಮ ವಲಯದ ಪಿಎಸ್ಐ ರವರನ್ನು ವರ್ಗಾವಣೆಗೊಳಿಸಿದ ಸ್ಥಳಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಸಾರ್ವಜನಿಕ ಹಿತದೃಷ್ಟಿ ಮತ್ತು ಆಡಳಿತಾತ್ಮಕ ಕಾರಣಗಳಿಗಾಗಿ ಮುಂದಿನ ಆದೇಶವರೆಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಇದೀಗ ಕೊಪ್ಪದ ಪಿಎಸ್ಐ ಅವರು ವರ್ಗಾವಣೆಗೊಂಡಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಠಾಣೆಯ ಬಸವರಾಜ ಜಿ.ಕೆ ಅವರನ್ನು ಡಿಸಿಆರ್ಬಿ ಘಟಕ ದಕ್ಷಿಣ ಕನ್ನಡ ಜಿಲ್ಲೆ ಠಾಣೆಗೆ ದಕ್ಷಿಣ ಕನ್ನಡ ಜಿಲ್ಲೆ ಠಾಣೆಯ ಮಧು ಬಿ.ಇ., ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಜಯಪುರ ಠಾಣೆಯ ಪಿಎಸ್ಐ ಅಂಬರೀಷ ಅವರನ್ನು ಬಾಳೆಹೊನ್ನೂರು ಠಾಣೆಗೆ ಹಾಗೂ ಬಾಳೆಹೊನ್ನೂರು ಠಾಣೆಯ ಪಿಎಸ್ಐ ರವೀಶ ಅವರನ್ನು ಜಯಪುರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಮೂಡಿಗೆರೆ ಠಾಣೆಯ ಪಿಎಸ್ಐ ಶ್ರೀನಾಥ್ ರೆಡ್ಡಿ ಅವರನ್ನು ಗೋಣಿಬೀಡು ಠಾಣೆಗೆ ಮತ್ತು ಗೋಣಿಬೀಡು ಠಾಣೆಯ ಪಿಎಸ್ಐ ಹರ್ಷವರ್ಧನ ಹೆಚ್.ಕೆ ಅವರನ್ನು ಮೂಡಿಗೆರೆ ಠಾಣೆಗೆ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.













