ಬಣಕಲ್: (ನ್ಯೂಸ್ ಮಲ್ನಾಡ್ ವರದಿ) ಬಣಕಲ್ ಪೊಲೀಸ್ ಠಾಣೆಗೆ ನೂತನ ಸಬ್ ಇನ್ ಸ್ಪೆಕ್ಟರ್ ಆಗಿ ರೇಣುಕಾದೇವಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ; ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿದೆ ಸ್ಪೆಷಲಿಸ್ಟ್ ಆಫೀಸರ್ ಹುದ್ದೆ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಜಂಬುರಾಜ್ ಮಹಾಜನ್ ಅವರು ಇಲ್ಲಿಂದ DSRB ಎಸ್.ಪಿ ಆಫೀಸ್ ಗೆ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ನೂತನ ಮಹಿಳಾ ಸಬ್ ಇನ್ಸ್ಪೆಕ್ಟರ್ ಆಗಿ ರೇಣುಕಾದೇವಿ ಅಧಿಕಾರ ಸ್ವೀಕರಿಸಿದರು. ರೇಣುಕಾದೇವಿ ಈ ಹಿಂದೆ ಬಣಕಲ್ ಗಡಿ ಭಾಗದ ಬಾಳೂರು ಪೊಲೀಸ್ ಠಾಣೆಯಲ್ಲಿ ಕೆಲವು ಸಮಯ ಕಾರ್ಯ ನಿರ್ವಹಿಸಿ ಚಿಕ್ಕಮಗಳೂರು ಬಸವನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನು ಜಂಬೂರಾಜ್ ಮಹಾಜನ್ ಅವರು ರೇಣುಕಾದೇವಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. (ವರದಿ- ತನು ಕೊಟ್ಟಿಗೆಹಾರ)

ಚಿಕ್ಕಮಗಳೂರು ನಗರಸಭೆಯಲ್ಲಿ ಅವಿಶ್ವಾಸ ಮಂಡನೆಯಲ್ಲಿ ಬಿಜೆಪಿಗೆ ಸೋಲು
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸೋಲಾಗಿದೆ. ನಗರಸಭೆ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಅವಿಶ್ವಾಸ ಮಂಡನೆ ವಿಶೇಷ ಸಭೆಯಲ್ಲಿ ಸಂಖ್ಯಾಬಲ ಪ್ರದರ್ಶಿಸಲು ವಿಪಲವಾದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಸದಸ್ಯರು ಶುಕ್ರವಾರ ಕರೆದಿದ್ದ ಅವಿಶ್ವಾಸನೆ ಮಂಡನೆಗೆ ಸೋಲಾಯಿತು. ಈ ಹಿನ್ನೆಲೆಯಲ್ಲಿ ನಗರಸಭೆ ಹಾಲಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ 2024 ಜುಲೈ ವರೆಗೆ ಮುಂದುವರೆಯಲಿದ್ದಾರೆ. ಮಾಜಿ ಸಚಿವ ಸಿ.ಟಿ.ರವಿ ಅಪ್ತನಿಂದಲೇ ಬಿಜೆಪಿಗೆ ಮುಖಭಂಗವಾಗಿದ್ದು, ಸ್ವಪಕ್ಷದದಿಂದಲೇ ಎದುರಾದ ಅವಿಶ್ವಾಸ ನಿರ್ಣಯದಲ್ಲಿ ವರಸಿದ್ಧಿ ಪಾಸ್ ಆಗಿದ್ದಾರೆ.
3 ತಿಂಗಳಿಂದ ನಾನಾ ರೀತಿಯ ಹೈಡ್ರಾಮಕ್ಕೆ ಸಾಕ್ಷಿಯಾಗಿದ್ದ ಚಿಕ್ಕಮಗಳೂರು ನಗರಸಭೆ, 30 ತಿಂಗಳ ಆಡಳಿತದಲ್ಲಿ 18-12 ತಿಂಗಳಿಗೆ ಅಧಿಕಾರ ಹಂಚಿಕೆ ಮಾಡಲಾಗಿತ್ತು. ಮೊದಲ ಅವಧಿಗೆ ವೇಣುಗೋಪಾಲ್ ಅಧ್ಯಕ್ಷರಾಗಿದ್ದರು. ರಾಜೀನಾಮೆ ನೀಡದ ಹಿನ್ನಲೆಯಲ್ಲಿ ವರಸಿದ್ದಿ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ನಿರ್ಣವಾಗಿತ್ತು. ಇಂದು ನಡೆದ ಅವಿಶ್ವಾಸ ಮಂಡನೆಯಲ್ಲಿ 35 ನಗರಸಭಾ ಸದಸ್ಯರಲ್ಲಿ 17 ಬಿಜೆಪಿ, ಜೆಡಿಎಸ್ 3, ಎಸ್.ಡಿ.ಪಿ.ಐ 1, ಕಾಂಗ್ರೆಸ್ 12, ಪಕ್ಷಾಂತರ 1, ಶಾಸಕರು 1, ಬಂಡಾಯ ಅಧ್ಯಕ್ಷರ 1 ಮತ ಬಿದ್ದು, ಅಂತಿಮವಾಗಿ ಅವಿಶ್ವಾಸದ ಪರ ಯಾರೂ ಕೈ ಎತ್ತದ ಹಿನ್ನೆಲೆಯಲ್ಲಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು. ಅವಿಶ್ವಾಸ ನಿರ್ಣಯ ಪಾಸ್ ಆಗಬೇಕಾಗಿದ್ದರೆ ಮೂರನೇ ಎರಡರಷ್ಟು ಸದಸ್ಯ ಬಲದ ಅವಶ್ಯಕತೆ ಇತ್ತು. ಆದರೆ ಇಷ್ಟು ಬಲವನ್ನು ಒಗ್ಗೂಡಿಸಲು ಬಿ.ಜೆ.ಪಿ. ವಿಫಲವಾಗಿತ್ತು. ಹಾಗಾಗಿ ಅವಿಶ್ವಾಸ ನಿರ್ಣಯದ ಪರವಾಗಿ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಸೇರಿ ಒಟ್ಟು 21 ಮತಗಳನ್ನಷ್ಟೇ ಅವಿಶ್ವಾಸ ನಿರ್ಣಯದ ಪರ ಕ್ರೂಡೀಕರಲು ಸಾಧ್ಯವಾಗಿತ್ತು. ಅವಿಶ್ವಾಸ ನಿರ್ಣಯಕ್ಕೆ ಸೋಲಾಗುವುದನ್ನು ಗ್ರಹಿಸಿ ಯಾವ ಸದಸ್ಯರು ಅವಿಶ್ವಾಸ ನಿರ್ಣಯದ ಪರ ಕೈ ಎತ್ತದೇ ಚರ್ಚೆಗೆ ಅವಕಾಶ ಕೋರಿದ್ದರು ಎನ್ನಲಾಗಿದೆ.
ಸಭೆಗೆ ಗೈರಾದ ಸಂಸದೆ:
ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದರೂ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗುವ ಮಾಹಿತಿ ಪಡೆದಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಭೆಗೆ ಆಗಮಿಸಲಿಲ್ಲ. ಶಾಸಕ ಎಚ್ ಡಿ ತಮ್ಮಯ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು.
ಇತ್ತ, ತೀವ್ರ ಮುಖಭಂಗ ಅನುಭವಿಸಿದ ಬಿಜೆಪಿ, ವರಸಿದ್ಧಿ ವೇಣುಗೋಪಾಲ್ ಕಚೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದರು.













