ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಪ್ರವಾಸಿ ತಾಣಕ್ಕೆ ಭೇಟಿ ಕೊಡುವ ಪ್ರವಾಸಿಗರು ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ತಮ್ಮ ವಾಹನಗಳಿಗೆ ಒಂದು ಸ್ಟಾಪ್ ಕೊಡೋದು ವಾಡಿಕೆ.. ಕೊಟ್ಟಿಗೆಹಾರದ ಸ್ಪೆಷಲ್ ನೀರ್ ದೋಸೆ ತಿಂದು, ಮಲೆನಾಡಿನ ಮಳೆಯ ಜೊತೆ ಚಹಾ ಕುಡಿಯುತ್ತಿದ್ರೆ ಅದರ ಗಮ್ಮತ್ತೇ ಬೇರೆ. ಆದರೆ ಇದೆಲ್ಲಾ ಗಮ್ಮತ್ತಿನ ನಡುವೆ ಕೆಲ ಪ್ರವಾಸಿಗರು ನಿಯಮಗಳನ್ನು ಮೀರಿ ತಮ್ಮ ಮನ ಬಂದಂತೆ ವರ್ತಿಸುತ್ತಿರುವುದು ಇತ್ತೀಚಿನ ದಿನದಲ್ಲಿ ಸ್ಥಳೀಯರನ್ನು ಆಕ್ರೋಶಗೊಳಿಸಿದೆ.

ಇದನ್ನೂ ಓದಿ: ಯುವನಿಧಿ ಫಲಾನುಭವಿಗಳ ಗಮನಕ್ಕೆ; ತಪ್ಪದೇ ಈ ಕೆಲಸ ಮಾಡುವಂತೆ ಸೂಚನೆ

ವೀಕೆಂಡ್ ಹಿನ್ನಲೆ ಇಂದು ಭಾನುವಾರದಂದು ಪ್ರವಾಸಿಗರು ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಕೊಟ್ಟಿಗೆಹಾರದಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರ ದಟ್ಟಣೆ ಉಂಟಾಗಿ ಅಸ್ತವ್ಯಸ್ತವಾಗಿತ್ತು.
ಪ್ರವಾಸಿಗರು ಕೊಟ್ಟಿಗೆಹಾರ ಅಂಗಡಿ ಹೋಟೇಲ್ ಗಳ ಬಳಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಚಹಾ ಕುಡಿಯಲು ಸಾಗಿದ್ದರು. ಇದರಿಂದ ಸಂಚಾರ ದಟ್ಟಣೆ ಸಂಭವಿಸಿತ್ತು. ಇದರ ನಡುವೆ ಶಿವಮೊಗ್ಗ ಪೊಲೀಸ್ ಸಿಬ್ಬಂದಿಯೊಬ್ಬರು ತಮ್ಮ ಕುಟುಂಬದೊಂದಿಗೆ ಖಾಸಗಿ ವಾಹನದಲ್ಲಿ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ತಮ್ಮ ಎರ್ಟಿಗಾ ವಾಹನವನ್ನು ರಸ್ತೆಯ ಮಧ್ಯದಲ್ಲೇ ನಿಲ್ಲಿಸಿ ಬೇಜವಾಬ್ದಾರಿ ತೋರಿದ್ದಾರೆ. ಇದರಿಂದ ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.

ಇದನ್ನೂ ಓದಿ: ಈ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ; ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಟ್ರಾಫಿಕ್ ನಿಯಂತ್ರಿಸಲು ಬಣಕಲ್ ಸಬ್ ಇನ್ ಸ್ಪೆಕ್ಟರ್ ಕೌಶಿಕ್, ಕೊಟ್ಟಿಗೆಹಾರಕ್ಕೆ ಗಸ್ತು ಬಂದ ವೇಳೆ ರಸ್ತೆಯಲ್ಲಿ ನಿಂತ ವಾಹನದವರನ್ನು ಕರೆಸಿ ತೆರವುಗೊಳಿಸಲು ಸೂಚನೆ ನೀಡಿ ದಂಡ ವಿಧಿಸಿದ್ದಾರೆ. ಈ ವೇಳೆ ಶಿವಮೊಗ್ಗದ ಪೊಲೀಸ್ ಸಿಬ್ಬಂದಿಯೊಬ್ಬರು ಸಹ ತಮ್ಮ ಕಾರನ್ನು ಅಡ್ಡಾದಿಡ್ಡಿ ನಿಲ್ಲಿಸಿದ್ದರು. ಯಾವುದೇ ಮುಲಾಜಿಲ್ಲದೆ ಅವರಿಗೂ ಸಹ ಪಿಎಸ್ಐ ಕೌಶಿಕ್ ದಂಡ ಹಾಕಿದ್ದಾರೆ.
ಚಿಕ್ಕಮಗಳೂರು ಪ್ರವಾಸಿಗರನ್ನು ಯಾವಾಗಲೂ ಸ್ಚಾಗತಿಸುತ್ತದೆ. ಇಲ್ಲಿನ ಪಕೃತಿ ಸೌಂದರ್ಯ, ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಇತ್ತೀಚಿನ ದಿನದಲ್ಲಿ ಕೆಲ ಪ್ರವಾಸಿಗರು ನಿಯಮಗಳನ್ನು ಮೀರಿ ಚಿಕ್ಕಮಗಳೂರಿನ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ. ಅದು ಸಂಚಾರಿ ನಿಯಮದಿಂದ ಹಿಡಿದು ಕಸ, ಮದ್ಯದ ಬಾಟೆಲ್ ಎಸೆಯುವವರೆಗೂ ಹೌದು. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಅಡ್ಡಾದಿಡ್ಡಿ ನಿಲ್ಲಿಸಿದ್ದ ಪೊಲೀಸ್ ಸಿಬ್ಬಂದಿಗೂ ದಂಡ ವಿಧಿಸಿದ ಬಣಕಲ್ ಪಿಎಸ್ಐ ಅವರ ಕಾರ್ಯ ಶ್ಲಾಘನೀಯ. ಪ್ರವಾಸಿಗರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. – ವಿಕ್ರಂ ಗೌಡ, ಕೊಟ್ಟಿಗೆಹಾರ
ಸಂಚಾರಿ ನಿಯಮ ಪಾಲಿಸದ ಪೊಲೀಸರಿಗೂ ಸಹ ದಂಡದ ಬಿಸಿ ತಟ್ಟಿದೆ. ಅಲ್ಲದೇ ಪಿಎಸ್ಐ ಕೌಶಿಕ್ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಸಹ ಮೆಚ್ಚುಗೆ ವ್ಯಕ್ತವಾಗಿದೆ. (ವರದಿ – ತನು ಕೊಟ್ಟಿಗೆಹಾರ)

ಪ್ರೇಕ್ಷಣೀಯ ಸ್ಥಳದಲ್ಲಿ ಯುವಕರ ಎಣ್ಣೆ ಪಾರ್ಟಿ: ಪ್ರವಾಸಿಗರಿಂದ ಆಕ್ರೋಶ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಸೂರಮನೆ ಫಾಲ್ಸ್ ಬಳಿ ಪ್ರವಾಸಕ್ಕೆ ಬಂದಿದ್ದ ಎಣ್ಣೆ ಪಾರ್ಟಿ ಗುಂಪೊಂದು ಫಾಲ್ಸ್ ಸಮೀಪದಲ್ಲೇ ಮಧ್ಯ ಸೇವನೆ ಮಾಡಿದ್ದು, ಅವರ ವರ್ತನೆ ಕಂಡು ಫ್ಯಾಮಿಲಿ ಸಮೇತ ಬಂದಿದ್ದ ಪ್ರವಾಸಿಗರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಏರಿಕೆಯ ಹಾದಿಯಲ್ಲಿ ಅಡಿಕೆ ರೇಟ್; ಇಲ್ಲಿದೆ ನೋಡಿ ಇವತ್ತಿನ ರೇಟ್
ಕಳಸ ತಾಲೂಕಿನ ಸೂರಮನೆ ಜಲಪಾತದ ಪಕ್ಕದಲ್ಲೇ ಪ್ರವಾಸಿಗರ ಗುಂಪೊಂದು ಮದ್ಯ ಸೇವನೆ ಮಾಡಿದ್ದು, ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಿದ್ದರೆ, ಅಂಥವರಿಗೆ ಇವರಿಂದ ಕಿರಿ ಕಿರಿಯಾದರೆ ಕೇಳುವವರಿಲ್ಲ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ವಿದ್ಯಾಧನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ 10,000 ದಿಂದ ಸ್ಕಾಲರ್ ಶಿಪ್
ರಜಾ ದಿನಗಳಲ್ಲಿ ಕಳಸ-ಹೊರನಾಡು ಭಾಗಕ್ಕೆ ಬರುವ ಬಹುತೇಕ ಪ್ರವಾಸಿಗರು ಸೂರಮನೆ ಫಾಲ್ಸ್ ಗೆ ಭೇಟಿ ನೀಡುತ್ತಾರೆ, ಪ್ರವಾಸಿಗರ ಹಿತದೃಷ್ಟಿಯಿಂದ ಜಲಪಾತದ ಬಳಿ ಪೊಲೀಸರನ್ನ ನೇಮಕ ಮಾಡುವಂತೆ ಪ್ರವಾಸಿಗರು ಒತ್ತಾಯಿಸಿದ್ದಾರೆ.












