ಎಲ್ಲಾ ಕಿರಿಕಿರಿ ಬಿಟ್ಟು ಒಂದೇ ಲಿಂಕ್ ನಲ್ಲಿ ಎಲ್ಲಾ ಓದಿ

ಚಿಕ್ಕಮಗಳೂರು / CHIKKAMAGALURU

ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತು ಸೇವನೆ: ವಶ!
ಮೂಡಿಗೆರೆ ಪಟ್ಟಣದ ಕೆ. ಎಂ. ರಸ್ತೆಯಲ್ಲಿ ಕೆ. ಎನ್. ಗ್ಯಾರೇಜ್ ಬಳಿ ಮಹಮ್ಮದ್ ಹರ್ಷದ್, ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದನು, ಸದರಿ ಆಸಾಮಿಯನ್ನು ಪೊಲೀಸರು ವಶಕ್ಕೆ ಪಡೆದು, ಆರೋಪಿತನ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆ ಪೊಲೀಸ್ ಠಾಣಾ ಪಿ. ಎಸ್. ಐ. ಶ್ರೀನಾಥ ರೆಡ್ಡಿ ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿದ್ದಾರೆ.

ಇಂದು ಜಿಲ್ಲೆಯ ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ!

ಬೆಂಗಳೂರಿನ ಇಲ್ಲಿ ಇಂದು ವಿದ್ಯುತ್ ವ್ಯತ್ಯಯ! – News18 ಕನ್ನಡ
ತಾಲೂಕಿನ ಭಕ್ತರಹಳ್ಳಿ, ಮಲ್ಲೇನಹಳ್ಳಿ, ಕರ್ಕನಹಳ್ಳಿ, ಹೆಬ್ಬಳ್ಳಿ, ಮಾವಿನಹಳ್ಳಿ, ಅರಿಶಿನಗುಪ್ಪೆ, ದಾಸರಹಳ್ಳಿ, ಗಾಳಿಪೂಜೆ, ದೇವರಹಳ್ಳಿ, ಹೊಸಪೇಟೆ, ಅತ್ತಿಗಿರಿ ಮತ್ತು ಹಲಸುಬಾಳು ಗ್ರಾಮಗಳಲ್ಲಿ ಇಂದು ಬೆಳಿಗ್ಗೆ 10.30 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ವಿದ್ಯುತ್‌ ಸರಬರಾಜು ನಿಲುಗಡೆಯಾಗಲಿದೆ ಎಂದು ಗ್ರಾಮೀಣ ಉಪವಿಭಾಗ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ. ಗ್ರಾಹಕರು ಸಹಕರಿಸಬೇಕಾಗಿ ಕೋರಿದ್ದಾರೆ.

ಕೊಪ್ಪ ಕಾಂಗ್ರೆಸ್ ಮುಖಂಡ ಹರೀಶ್ ಭಂಡಾರಿ ನಿಧನ!


ಕೊಪ್ಪ ಪಟ್ಟಣ ಪಂಚಾಯಿತಿಯ‌ ಮಾಜಿ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಹರೀಶ್ ಭಂಡಾರಿ ಅವರು ಇಂದು ಸಾವನ್ನಪ್ಪಿದ್ದಾರೆ. ಮೃತರ ಆತ್ಮಕ್ಕೆ ಶಾಸಕ ಟಿ. ಡಿ ರಾಜೇಗೌಡ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವಾಗಿದೆ‌. ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ‌ ಮತ್ತು ಸ್ನೇಹಿತರ ಬಳಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.


ಶಿವಮೊಗ್ಗ /  SHIMOGGA

ಮಹಿಳೆಗೆ ವಂಚನೆ: ಬಿಜೆಪಿ ಯುವ ಮೋರ್ಚಾ ನಾಯಕ ಬಂಧನ!

ಸಾಗರ | ಯುವತಿಗೆ ವಂಚನೆ ಆರೋಪ; ಬಿಜೆಪಿ ಯುವ ಮುಖಂಡನ ಸೆರೆ

ಮಹಿಳೆಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಜಿಲ್ಲಾ ಯುವಮೋರ್ಚ ಘಟಕದ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ ಅವರನ್ನು ಮಹಿಳಾ ಪೊಲೀಸರು ಭಾನುವಾರ ಸಾಗರದ ಅವರ ಮನೆಯಿಂದ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಮಹಿಳೆಯು ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮದುವೆಯಾಗುವುದಾಗಿ ನಂಬಿಸಿ ಮಹಿಳೆಯನ್ನು ವಂಚಿಸಿದ ಪ್ರಕರಣ ಇದಾಗಿದೆ. ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲಿಯೇ ಸಾವು!

Road Accident
ಹೋಟೆಲ್ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕನಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಪಾಸ್‌ ರಸ್ತೆಯ ಊರಗಡೂರು ವೃತ್ತದಲ್ಲಿ ನಡೆದಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ರಾಜಹಂಸ ಬಸ್ ಬೈಕ್‌ ನಲ್ಲಿ ಬರುತ್ತಿದ್ದ ಸಂತೋಷ್‌ ಗೆ ಡಿಕ್ಕಿ ಹೊಡೆದಿದೆ. ಸಂತೋಷ್ (23) ಸ್ಥಳದಲ್ಲೇ ಸಾವು ಕಂಡಿದ್ದಾರೆ. ಶ್ರೀರಾಮಪುರದಿಂದ ಊರಗಡೂರಿನ ಬಳಿ ಹೋಟೆಲ್ ಕೆಲಸಕ್ಕೆ ತೆರಳುತ್ತಿದ್ದನು. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಟಾಟಾ ಏಸ್ ಡಿಕ್ಕಿ: ಬೈಕ್ ಸವಾರ ಸಾವು!
ಶಿವಮೊಗ್ಗ ತಾಲೂಕಿನ ಹಾರನಳ್ಳಿಯಲ್ಲಿ ನಡೆದ ಅಪಘತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಟಾಟಾ ಏಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಸತೀಶ್ (25) ಸಾವಿಗೀಡಾಗಿದ್ದಾರೆ. ಇವರು ಮೈಸವಳ್ಳಿ ಗ್ರಾಮದವರು. ಸಂಬಂಧಿಯೊಬ್ಬರ ಮಗುವನ್ನು ಹಾರನಹಳ್ಳಿಗೆ ಕರೆದುಕೊಂಡು ಆಸ್ಪತ್ರೆಯೊಂದಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಟಾಟಾ ಏಸ್ ಬೈಕ್‌ ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಸತೀಶ್ ತಲೆಗೆ ಗಂಭೀರ ಪೆಟ್ಟು ತಗುಲಿತ್ತು. 7 ವರ್ಷದ ಮಗು ಅಪಾಯದಿಂದ ಪಾರಾಗಿದೆ. ಕುಂಸಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ!
ಶಿವಮೊಗ್ಗ ನಗರದ ಎಂ.ಆರ್‌.ಎಸ್‌ ಸರ್ಕಲ್‌ ಸಮೀಪ ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಕಾರ್ತಿಕ್‌ ಅಲಿಯಾಸ್‌ ಕತ್ತೆ ಕಾರ್ತಿಕ್‌ ಎಂಬಾತ ಹಲ್ಲೆಗೊಳಗಾದ ವ್ಯಕ್ತಿ. ಈತನನ್ನು ಮನೆಯಿಂದ ಕರೆಯಿಸಿಕೊಂಡು ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೊಸಮನೆ ನಿವಾಸಿಯಾಗಿರುವ ಕಾರ್ತಿಕ್‌ ನನ್ನು ಕರೆದುಕೊಂಡು ಹೋದ ಕೆಲವರು ವಿದ್ಯಾನಗರದ ಎಂ.ಆರ್‌.ಎಸ್‌ ಬಳಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೋಟೆ ಪೊಲೀಸ್‌ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾರು ಡಿಕ್ಕಿ: ವಿದ್ಯಾರ್ಥಿನಿ ಸಾವು!
ಸಾಗರ ಪಟ್ಟಣದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ನಡೆದಿದೆ. ಲಾಲ್ ಬಹದ್ದೂರು ಕಾಲೇಜಿನಲ್ಲಿ ಬಿಸಿಎ ದ್ವಿತೀಯ ವರ್ಷ ಓದುತ್ತಿದ್ದ ಅನುಷಾ (20) ಮೃತಪಟ್ಟ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಕಾಲೇಜಿನಿಂದ ಮನೆಗೆ ಹೋಗುವಾಗ ಸಾಗರದ ಕುಗ್ವೆ ಬಳಿ ಅಪಘಾತ ಸಂಭವಿಸಿದೆ. ಸಾಗರದ ಕಡೆಯಿಂದ ಜೋಗಕ್ಕೆ ಹೋಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

61 ಪ್ರಕರಣ ದಾಖಲು!
ಮಾದಕ ವಸ್ತು ಗಾಂಜಾ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಜಿಲ್ಲಾ ಪೊಲೀಸರು ಕೇವಕ 21 ದಿನದಲ್ಲಿ 5.56 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡು 79 ಜನರ ವಿರುದ್ಧ 61 ಪ್ರಕರಣ ದಾಖಲಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಇಂದು ಜಿಲ್ಲಾ ಪೊಲೀಸ್ ವರಿಷ್ಠ ಜಿ ಕೆ‌ ಮಿಥುನ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದರು. ಒಟ್ಟು 15 ಕೆ. ಜಿ 363 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದರು.


ಉತ್ತರ ಕನ್ನಡ / UTTARA KANNADA

ನಕಲಿ ಒಡವೆ ನೀಡಿ ವಂಚ‌ನೆ: ದೂರು
ನಕಲಿ ಒಡವೆಗಳನ್ನು ಮಾಡಿಕೊಟ್ಟಿದ್ದಲ್ಲದೇ ಒಡವೆಯ ಹಣಕ್ಕಾಗಿ ಮನೆಯಲ್ಲಿದ್ದ ಅಡಿಕೆಯನ್ನು ಹೆಚ್ಚಿನ ದರಕ್ಕೆ ಮಾರಿಸಿಕೊಡುವುದಾಗಿ ಹೇಳಿ ಹೆಚ್ಚುವರಿ ಹಣ ನೀಡದೇ ಮೋಸ ಮಾಡಿದ್ದು, ಕೇಳಲು ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಕಾರಣಕ್ಕಾಗಿ ತಾಲೂಕಿನ ನಂದೊಳ್ಳಿಯ ಭಾಸ್ಕರ ನಾರಾಯಣ ನಾಯ್ಕ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಟ್ಟಣದ ರವೀಂದ್ರನಗರದ ತುಳಸೀದಾಸ ಮಹಾಬಲೇಶ್ವರ ಕುರ್ಡೇಕರ ಎಂಬಾತ ಮೋಸ ಮಾಡಿದ್ದಾ‌ನೆ ಎಂದು ಭಾಸ್ಕರ ನಾಯ್ಕ ದೂರು ದಾಖಲಾಗಿದೆ.

ಕುಡುಕರ ತಾಣವಾದ ಅರಣ್ಯ ಇಲಾಖೆ ಚೆಕ್ ಪೋಸ್ಟ್


ಅರಣ್ಯ ಸಂಪತ್ತಿನ ಅಕ್ರಮ ಸಾಗಣೆ ತಡೆಯಲು ತಾಲೂಕಿನ ರಾಮನಗರ ವೈಜಗಾಂವ ರಸ್ತೆಯಲ್ಲಿ ಸ್ಥಾಪಿಸಿರುವ ಚೆಕ್‌ ಪೋಸ್ಟ್ ಅರಣ್ಯ ಇಲಾಖೆಯ ನಿರ್ಲಕ್ಷ್ಯತನದಿಂದ ಇದೀಗ ಕುಡುಕರ ಸ್ವರ್ಗವಾಗಿ ಮಾರ್ಪಟ್ಟಿದೆ. ರಾಮನಗರ, ನಾನೇಗಾಳಿ, ರಾಯಿಶೇತ, ಮಿರಾಸ್ ಕುಂಬೇಲಿ, ತೆರೇಗಾಳಿ, ತಿಂಬೋಲಿ. ಭೋಸಲೆವಾಡಾ, ಆಮಶೇತ, ವೈಜಗಾಂವ ಪ್ರದೇಶದಲ್ಲಿನ ಮರ, ಕಟ್ಟಿಗೆ, ಮರಳು, ಕಲ್ಲು ಮತ್ತು ಇತರ ಅರಣ್ಯ ಸಂಪತ್ತುಗಳ ಅಕ್ರಮ ಸಾಗಣೆ ತಡೆಯಲು ಅರಣ್ಯ ಇಲಾಖೆಯಿಂದ ಎರಡು ವರ್ಷಗಳ ಹಿಂದೆ ಚೆಕ್‌ ಪೋಸ್ಟ್ ನಿರ್ಮಿಸಲಾಗಿತ್ತು.

ಡಬಲ್ ಮರ್ಡರ್ ಆಗಿದೆ ಎಂದು ಪೊಲೀಸರನ್ನು ಕರೆಸಿದ ಮಾನಸಿಕ ಅಸ್ವಸ್ಥ


ಹೆಂಡತಿ ಹಾಗೂ ಮಗಳನ್ನು ಕೊಲೆ ಮಾಡಿದ್ದು, ಕೂಡಲೇ ಬರುವಂತೆ ಒತ್ತಾಯಿಸಿದ ವ್ಯಕ್ತಿಯೋರ್ವನು, ಮೊಬೈಲ್ ಕರೆಯನ್ನು ಆಧರಿಸಿ ಸ್ಥಳಕ್ಕೆ ದೌಡಾಯಿಸಿದ ಪೋಲಿಸರಿಗೆ ಮಾನಸಿಕ ಅಸ್ವಸ್ಥ ಎಂದು ತಿಳಿದು ವಾಪಸ್ಸಾದ ಘಟನೆ ನಡೆದಿದೆ. ಅಂಕೋಲಾದಿಂದ 25 ಕಿ. ಮೀ ದೂರದ ಹಿಲ್ಲೂರಿನ ಮಂಜುನಾಥ ನಾಯಕ ಎನ್ನುವವನು ಪೊಲೀಸರಿಗೆ ಫೋನ್ ಮಾಡಿ ಮಗಳು ಹಾಗೂ ಹೆಂಡತಿ ಕೊಲೆ ಮಾಡಿದ್ದಾಗಿ ತಿಳಿಸಿದ್ದ. ಪೊಲೀಸರು ಮನೆಗೆ ಬಂದಾಗ ಇನ್ನೊಂದು ಸ್ವಲ್ಪ ಹೊತ್ತಲ್ಲಿ ಕೊಲೆ ಮಾಡುವುದಾಗಿ ತಿಳಿಸಿದಾಗ ಮಾನಸಿಕ ಅಸ್ವಸ್ಥ ಎಂದು ತಿಳಿದಿದೆ.

ಎರಡು ಪ್ರತ್ಯೇಕ ಅಪಘಾತ: ಇಬ್ಬರಿಗೆ ಗಾಯ
ಎರಡು ಅಪಘಾತಗಳು ನಡೆದ ಘಟನೆ ಹಳಿಯಾಳ ಪಟ್ಟಣದ ಹೋಂಡಾ ಶೋ ರೂಂ ಹಾಗೂ ಹಡಗಲಿ ಗ್ರಾಮದ ಬಳಿ ನಡೆದಿದೆ. ಹಳಿಯಾಳ ಹೋಂಡಾ ಶೋರೂಂ ಬಳಿ ತಗ್ಗು ಗುಂಡಿ ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಗಿ ಸವಾರನಿಗೆ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಇನ್ನೊಂದು ಅಪಘಾತದಲ್ಲಿ ಹಳಿಯಾಳ ಪಟ್ಟಣದಿಂದ ಮುರ್ಕವಾಡ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭ ಬೈಕ್ ಹಾಗೂ ಟಾಟಾ ಎಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗೊಂಡ ಘಟನೆ ಹಡಗಲಿ ಗ್ರಾಮದ ಬಳಿ ನಡೆದಿದೆ.


ಕೊಡಗು / KODAGU

ಕುಶಾಲನಗರದಲ್ಲಿ ತಡರಾತ್ರಿ ಗುಂಡಿನ ದಾಳಿ
ಕುಶಾಲನಗರಲ್ಲಿ ತಡರಾತ್ರಿ 12 ಗಂಟೆಗೆ ಗುಂಡಿನ ಶಬ್ದ ಮೊರೆದಿದೆ. ಅನುದೀಪ್ (ಡುಮ್ಮಿ) ಮತ್ತು ಶಶಿಕುಮಾರ್ ಗೌಡ (ಎಂಎಲ್ಎ ಶಶಿ) ನಡುವೆ ನಡೆದ ಮಾತಿನ ಚಕಮಕಿ ನಡೆದಿದ್ದು‌, ಅನುದೀಪ್ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಶಶಿ ಕಾಲಿಗೆ ಗುಂಡು ತಗುಲಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕುಶಾಲನಗರದ ಚೌಡೇಶ್ವರಿ ಬಡಾವಣೆ ಗುಮ್ಮನಕೊಲ್ಲಿಯಲ್ಲಿ ಈ ಘಟನೆ ನಡೆದಿದೆ‌. ಕುಶಾಲನಗರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇಕೇರಿ-ತಾಳತ್‌ ಮನೆ ರಸ್ತೆಯಲ್ಲಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ


ವಿರಾಜಪೇಟೆಯಿಂದ ಮಂಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮೇಕೇರಿಯ ತೆನ್ನಿರ ಅಶೋಕ ಎಂಬವರಿಗೆ ಸೇರಿದ ಕಾರು ಹಾಗೂ ತಾಳತ್‌ ಮನೆ ಕಡೆಯಿಂದ ಮೇಕೇರಿ ಕಡೆಗೆ ಬರುತ್ತಿದ್ದ ಬೆಂಗಳೂರು ಪ್ರವಾಸಿಗರಿದ್ದ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಿಂದ ಗಾಯಗೊಂಡ ತೆನ್ನಿರ ಅಶೋಕ ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಉಳಿದವರಿಗೆ ಯಾವುದೇ ರೀತಿಯ ಗಂಭೀರ ಸ್ವರೂಪದ ಗಾಯಗಳು ಉಂಟಾಗಿಲ್ಲ.

ಕೋಟೆಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ

Abbi Falls: ಅಬ್ಬಿ ಫಾಲ್ಸ್ ಬಳಿ ಸೆಲ್ಫಿ ಕ್ರೇಜ್‌ಗೆ ಯುವಕ ಬಲಿ; ಕೊಡಗಿನಲ್ಲಿ ಮತ್ತೆ ಪ್ರವಾಸಿಗರ ಮೇಲೆ ಹಲ್ಲೆ - Vistara News
ಕೊಡಗು ಜಿಲ್ಲೆಯ ಕೋಟೆಬೆಟ್ಟ ಪ್ರವಾಸಕ್ಕೆಂದು ಆಗಮಿಸಿದ ಪ್ರವಾಸಿಗರ ಮೇಲೆ ಬೈಕಿನಲ್ಲಿ ಬಂದ ಇಬ್ಬರು ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ಮಕ್ಕಳು, ಮಹಿಳೆಯರು ಸೇರಿದಂತೆ ಪುತ್ತೂರಿನಿಂದ ಕುಟುಂಬ ಸಮೇತ ಕೋಟೆ ಬೆಟ್ಟ ಪ್ರವಾಸಿ ತಾಣಕ್ಕೆ ಆಗಮಿಸಿದ ಕುಟಂಬದ ಮೇಲೆ ಬೈಕಿನಲ್ಲಿ ಬಂದ ಇಬ್ಬರು ಪುಂಡರು ಹಲ್ಲೆ ನಡೆಸಿ, ಚಿನ್ನದ ಸರ ಎಗರಿಸಿ ಬೈಕನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರು ಆರೋಪಿಗಳು ಮಾದಾಪುರ ಸಮೀಪದ ನಿವಾಸಿಗಳು ಎಂದು ಹೇಳಲಾಗಿದೆ.


ಹಾಸನ / HASANA

ಬೈಕ್‌ ಗಳ ನಡುವೆ ಮುಖಾಮುಖಿ ಢಿಕ್ಕಿ: ಓರ್ವ ಮೃತ್ಯು, ಮತ್ತೋರ್ವ ಗಂಭೀರ

ಹಾಸನ | ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ : ಓರ್ವ ಮೃತ್ಯು, ಮತ್ತೋರ್ವ ಗಂಭೀರ
ಎರಡು ಬೈಕ್‌ ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಬೈಕ್ ಸವಾರ ಮೃತಪಟ್ಟು ಮತ್ತೋರ್ವ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯ ಮರಿಯಾ ನಗರದ ಬಳಿ ನಡೆದಿದೆ. ಮರಿಯಾ ನಗರದ ಗಣೇಶ್ (40) ಮೃತ ವ್ಯಕ್ತಿಯಾಗಿದ್ದು, ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ಬೈಕ್ ಸವಾರ ಸುರೇಶ್ ಎಂಬವರನ್ನು ಚಿಕಿತ್ಸೆಗಾಗಿ ಹಿಮ್ಸ್ ಗೆ ರವಾನಿಸಲಾಗಿದೆ ಎಂದು ಗೊತ್ತಾಗಿದೆ. ಘಟನಾ ಸ್ಥಳಕ್ಕೆ ಕೊಣನೂರು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಅಸಹಜ ಲೈಂಗಿಕ ದೌರ್ಜನ್ಯ ಕೇಸ್​: ಸೂರಜ್‌ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ

ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌: ಸೂರಜ್‌ ಪರ ಇಂದು ಜಾಮೀನು ಅರ್ಜಿ ಸಲ್ಲಿಕೆ
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೆಡಿಎಸ್‌ ಪಕ್ಷದ ಎಂಎಲ್‌ಸಿ ಸೂರಜ್‌ ರೇವಣ್ಣರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ 42ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶರಿಂದ ಆದೇಶ ಹೊರಡಿಸಿದ್ದಾರೆ. ಶನಿವಾರ ಸಂತ್ರಸ್ತ ನೀಡಿದ್ದ ದೂರು ಆಧರಿಸಿ ನಿನ್ನೆ ಬೆಳಿಗ್ಗೆ ಹಾಸನದ ಸೆನ್​ ಠಾಣೆ ಪೊಲೀಸರು ಸೂರಜ್ರ ನ್ನು ಬಂಧಿಸಿದ್ದರು. ಬಳಿಕ ನ್ಯಾಯಾಧೀಶರ ನಿವಾಸದಲ್ಲಿ ಜಡ್ಜ್‌ ಮುಂದೆ ಸೂರಜ್​ನನ್ನು ಹಾಜರುಪಡಿಸಲಾಗಿತ್ತು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.