ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತರದೇ ಕಂದಾಯ ಮತ್ತು ವ್ಯಾಪಾರ ನವೀಕರಣ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಪಟ್ಟಣ ಪಂಚಾಯಿತಿ ಚುನಾಯಿತ ಸದಸ್ಯರು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಯುವನಿಧಿ ಫಲಾನುಭವಿಗಳ ಗಮನಕ್ಕೆ; ತಪ್ಪದೇ ಈ ಕೆಲಸ ಮಾಡುವಂತೆ ಸೂಚನೆ

2022-23ನೇ ಸಾಲಿನಲ್ಲಿ ಕಂದಾಯ ಹೆಚ್ಚಳ ಮಾಡಿದ್ದು, ಈ ವರ್ಷದಿಂದ ಕಟ್ಟಡ ಜಾಗಕ್ಕಲ್ಲದೇ ಮಾಲೀಕರು ಹೊಂದಿರುವ ಖಾಲಿ ಜಾಗಕ್ಕೂ ಕಂದಾಯ ಕಟ್ಟುವಂತೆ ಹಿಂದಿನ ವರ್ಷದ ಕಂದಾಯಕ್ಕೆ 50% ಕಂದಾಯವನ್ನು ಏರಿಕೆ ಮಾಡಿದ್ದಾರೆ.
2024-25ನೇ ಸಾಲಿನ ಬಜೆಟ್ ನ ಪೂರ್ವಭಾವಿ ಸಭೆ ನಡೆಸಿ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ಬಾರದೆ ಕೆಲವು ಅಧಿಕಾರಿಗಳು ಮಾತ್ರ ಸಭೆಯಲ್ಲಿ ಭಾಗವಹಿಸಿ ಕಂದಾಯ ಹಾಗೂ ವ್ಯಾಪಾರ ಶುಲ್ಕ ದುಪ್ಪಟ್ಟು ಹೆಚ್ಚಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇದನ್ನೂ ಓದಿ: ಈ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ; ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ವ್ಯಾಪಾರ ಪರವಾನಗಿ ದರ ಹೆಚ್ಚಿಸಬೇಕು ಎಂದು ಸರ್ಕಾರದ ಆದೇಶದ ಬಗ್ಗೆ ಅಧಿಕಾರಿಗಳು ಗಮನ ನೀಡಬೇಕು. ಪಪಂನಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಪಟ್ಟಣ ಪಂಚಾಯಿತಿಯಿಂದ ಅಂತಹ ಅಭಿವೃದ್ಧಿ ಕೆಲಸಗಳು ಏನಾಗುತ್ತಿದೆ ಎಂಬುದರ ಕುರಿತು ಗಮನಕ್ಕೆ ತರವಂತೆ ಪಟ್ಟಣ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಆಗ್ರಹಿಸಿದ್ದಾರೆ
ಪ್ರೇಕ್ಷಣೀಯ ಸ್ಥಳದಲ್ಲಿ ಯುವಕರ ಎಣ್ಣೆ ಪಾರ್ಟಿ: ಪ್ರವಾಸಿಗರಿಂದ ಆಕ್ರೋಶ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಸೂರಮನೆ ಫಾಲ್ಸ್ ಬಳಿ ಪ್ರವಾಸಕ್ಕೆ ಬಂದಿದ್ದ ಎಣ್ಣೆ ಪಾರ್ಟಿ ಗುಂಪೊಂದು ಫಾಲ್ಸ್ ಸಮೀಪದಲ್ಲೇ ಮಧ್ಯ ಸೇವನೆ ಮಾಡಿದ್ದು, ಅವರ ವರ್ತನೆ ಕಂಡು ಫ್ಯಾಮಿಲಿ ಸಮೇತ ಬಂದಿದ್ದ ಪ್ರವಾಸಿಗರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಏರಿಕೆಯ ಹಾದಿಯಲ್ಲಿ ಅಡಿಕೆ ರೇಟ್; ಇಲ್ಲಿದೆ ನೋಡಿ ಇವತ್ತಿನ ರೇಟ್
ಕಳಸ ತಾಲೂಕಿನ ಸೂರಮನೆ ಜಲಪಾತದ ಪಕ್ಕದಲ್ಲೇ ಪ್ರವಾಸಿಗರ ಗುಂಪೊಂದು ಮದ್ಯ ಸೇವನೆ ಮಾಡಿದ್ದು, ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಿದ್ದರೆ, ಅಂಥವರಿಗೆ ಇವರಿಂದ ಕಿರಿ ಕಿರಿಯಾದರೆ ಕೇಳುವವರಿಲ್ಲ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ವಿದ್ಯಾಧನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ 10,000 ದಿಂದ ಸ್ಕಾಲರ್ ಶಿಪ್
ರಜಾ ದಿನಗಳಲ್ಲಿ ಕಳಸ-ಹೊರನಾಡು ಭಾಗಕ್ಕೆ ಬರುವ ಬಹುತೇಕ ಪ್ರವಾಸಿಗರು ಸೂರಮನೆ ಫಾಲ್ಸ್ ಗೆ ಭೇಟಿ ನೀಡುತ್ತಾರೆ, ಪ್ರವಾಸಿಗರ ಹಿತದೃಷ್ಟಿಯಿಂದ ಜಲಪಾತದ ಬಳಿ ಪೊಲೀಸರನ್ನ ನೇಮಕ ಮಾಡುವಂತೆ ಪ್ರವಾಸಿಗರು ಒತ್ತಾಯಿಸಿದ್ದಾರೆ.












