
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಸೂರಮನೆ ಫಾಲ್ಸ್ ಬಳಿ ಪ್ರವಾಸಕ್ಕೆ ಬಂದಿದ್ದ ಎಣ್ಣೆ ಪಾರ್ಟಿ ಗುಂಪೊಂದು ಫಾಲ್ಸ್ ಸಮೀಪದಲ್ಲೇ ಮಧ್ಯ ಸೇವನೆ ಮಾಡಿದ್ದು, ಅವರ ವರ್ತನೆ ಕಂಡು ಫ್ಯಾಮಿಲಿ ಸಮೇತ ಬಂದಿದ್ದ ಪ್ರವಾಸಿಗರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಏರಿಕೆಯ ಹಾದಿಯಲ್ಲಿ ಅಡಿಕೆ ರೇಟ್; ಇಲ್ಲಿದೆ ನೋಡಿ ಇವತ್ತಿನ ರೇಟ್

ಕಳಸ ತಾಲೂಕಿನ ಸೂರಮನೆ ಜಲಪಾತದ ಪಕ್ಕದಲ್ಲೇ ಪ್ರವಾಸಿಗರ ಗುಂಪೊಂದು ಮದ್ಯ ಸೇವನೆ ಮಾಡಿದ್ದು, ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಿದ್ದರೆ, ಅಂಥವರಿಗೆ ಇವರಿಂದ ಕಿರಿ ಕಿರಿಯಾದರೆ ಕೇಳುವವರಿಲ್ಲ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ವಿದ್ಯಾಧನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ 10,000 ದಿಂದ ಸ್ಕಾಲರ್ ಶಿಪ್
ರಜಾ ದಿನಗಳಲ್ಲಿ ಕಳಸ-ಹೊರನಾಡು ಭಾಗಕ್ಕೆ ಬರುವ ಬಹುತೇಕ ಪ್ರವಾಸಿಗರು ಸೂರಮನೆ ಫಾಲ್ಸ್ ಗೆ ಭೇಟಿ ನೀಡುತ್ತಾರೆ, ಪ್ರವಾಸಿಗರ ಹಿತದೃಷ್ಟಿಯಿಂದ ಜಲಪಾತದ ಬಳಿ ಪೊಲೀಸರನ್ನ ನೇಮಕ ಮಾಡುವಂತೆ ಪ್ರವಾಸಿಗರು ಒತ್ತಾಯಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಅಕ್ರಮ : ತನಿಖೆಗೆ ಆಗ್ರಹಿಸಿ ಎನ್ಎಸ್’ಯುಐ ಪ್ರತಿಭಟನೆ
ಹನುಮಂತಪ್ಪ ವೃತ್ತದಿಂದ ಎಂ.ಜಿ. ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದವರೆಗೆ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವಿವಾದಾತ್ಮಕ ಫಲಿತಾಂಶದ ಕಾರಣಗಳಿಂದ ದೇಶದ ಲಕ್ಷಾಂತರ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೆ ಅನ್ಯಾಯವಾಗಿದೆ. ಈ ಬಾರಿಯ ನೀಟ್ ಫಲಿತಾಂಶದಲ್ಲಿ ಒಟ್ಟು 67 ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಒಂದೇ ಪರೀಕ್ಷಾ ಕೇಂದ್ರದ ಸುಮಾರು 8 ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ ಪಡೆದಿದ್ದು, 6 ವಿದ್ಯಾರ್ಥಿಗಳು ಒಂದೇ ತರಬೇತಿ ಕೇಂದ್ರದವರಾಗಿದ್ದಾರೆ. ಆದಕಾರಣ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪರೀಕ್ಷಾ ಅಕ್ರಮ ಆಗಿರುವ ಸಾಧ್ಯತೆ ಹೆಚ್ಚಿದ್ದು ಕೇಂದ್ರ ಸರ್ಕಾರ ನೀಟ್ ಅಕ್ರಮದ ತನಿಖೆ ನಡೆಸಿ ನ್ಯಾಯ ದೊರಕಿ ಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎನ್‍ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷ ಸುಮಂತ್, ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ, ಎನ್‍ಎಸ್‍ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಜಾಕೀರ್ ಹುಸೇನ್, ರಾಜ್ಯ ಕಾರ್ಯದರ್ಶಿ ಆದಿಲ್, ಜಿಲ್ಲಾ ಉಪಾಧ್ಯಕ್ಷ ದೃವಕುಮಾರ್, ವೆಂಕಟೇಶ್, ಪ್ರೀತಂ ಗೌಡ, ಸುನೀಲ್, ವಿನಯ್ ಭಾಗವಹಿಸಿದ್ದರು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.













