ಮೂಡಿಗೆರೆ: ಕ್ರಿಸ್‌ಮಸ್ ಸಂಭ್ರಮ: ಚರ್ಚ್‌ಗಳಲ್ಲಿ ಯೇಸು ಸ್ಮರಣೆ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಬಣಕಲ್, ಕೊಟ್ಟಿಗೆಹಾರ, ಬಾಳೂರು, ಜಾವಳಿ, ಕೆಳಗೂರು, ಕೂವೆ, ಹಿರೇಬೈಲ್ ಸೇರಿದಂತೆ ವಿವಿಧೆಡೆ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

 

ಇದನ್ನೂ ಓದಿ; ರೈತರಿಗೆ ಗುಡ್ ನ್ಯೂಸ್; ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಚರ್ಚ್ ಗಳಲ್ಲಿ ಗೋದಲಿಗಳು, ಬಣ್ಣಬಣ್ಣದ ನಕ್ಷತ್ರಗಳು ಮಿನುಗಿದವು. ಭಾನುವಾರ ರಾತ್ರಿಯೇ ಚರ್ಚ್ ಗಳಲ್ಲಿ ಕ್ರಿಸ್ ಹಬ್ಬದ ಪೂಜೆಗಳು ನಡೆದವು. ಬಣಕಲ್ ಬಾಲಿಕಾ ಮರಿಯ ಚರ್ಚ್ ನಲ್ಲಿ ರಾಯಚೂರಿನ ಪೋತ್ನಾಳ್ ಧರ್ಮಕೇಂದ್ರದ ಗುರು ಫಾ.ವಿಲ್ಪ್ರೆಡ್ ನವೀನ್ ಡಿಸಿಲ್ವ ಹಬ್ಬದ ಸಂದೇಶ ನೀಡಿದರು.

ಬಣಕಲ್ ಬಾಲಿಕಾ ಮರಿಯ ಚರ್ಚ್ , ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು
ಬಣಕಲ್ ಬಾಲಿಕಾ ಮರಿಯ ಚರ್ಚ್

ಇದನ್ನೂ ಓದಿ; ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಉದ್ಯೋಗವಕಾಶ; 250 ಹುದ್ದೆಗಳಿಗೆ ಅರ್ಜಿ ಆಹ್ವಾನ

ದರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಮಾತನಾಡಿ, ಏಸು ಕ್ರಿಸ್ತರ ಜನನ ಮಾನವ ರಕ್ಷಣೆಗಾಗಿ ಭೂಲೋಕದಲ್ಲಿ ದೇವ ಮಾನವರಾಗಿ ಜನಿಸಿದರು. ಜಗತ್ತಿಗೆ ಶಾಂತಿ, ಪ್ರೀತಿ, ಏಕತೆಯ ಮಾರ್ಗವನ್ನು ಜನರಿಗೆ ಸಾರಿದರು.ಅವರ ಜೀವನ ಜಗತ್ತಿಗೆ ಮಾದರಿಯಾಗಿದೆ. ನಾವು ಪರಸ್ಪರ ಮನಸ್ತಾಪ ದೂರ ಮಾಡಿ ಐಕ್ಯತೆಯಿಂದ ಬದುಕಬೇಕು ಎಂದರು. ಈ ಸಂದರ್ಭದಲ್ಲಿ ಧರ್ಮಗುರುಗಳಾದ ಫಾ.ಥಾಮಸ್ ಕಲಘಟಗಿ, ಬ್ರದರ್ ಲಾರೆನ್ಸ್ ಕ್ಸೇವಿಯರ್ ಇದ್ದರು. ವಿವಿಧ ಸ್ಪರ್ದೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

 

ಕೊಟ್ಟಿಗೆಹಾರ ಯೇಸುವಿನ ಪವಿತ್ರ ಹೃದಯದ ದೇವಾಲಯದಲ್ಲಿ ದರ್ಮಗುರು ಫಾ.ವಿಲ್ಪ್ರೆಡ್ ಎನ್.ಡಿಸಿಲ್ವ ಹಬ್ಬದ ಪೂಜೆ ಅರ್ಪಿಸಿ ಹಬ್ಬದ ಸಂದೇಶ ನೀಡಿದರು. ಬಾಳೂರು ಹಾಗೂ ಜಾವಳಿ ಚರ್ಚಿನಲ್ಲಿ ಫಾ.ಥಾಮಸ್ ಕಲಘಟಗಿ ಬಲಿಪೂಜೆ ಅರ್ಪಿಸಿ ಕ್ರಿಸ್ಮಸ್ ಸಂದೇಶ ನೀಡಿದರು.

ಕೆಳಗೂರಿನಲ್ಲಿ ದರ್ಮಗುರು ಫಾ.ಜೇಸನ್ ಮಾತನಾಡಿ, ಕ್ರಿಸ್ ಮಸ್ ಹಬ್ಬ ಆಡಂಬರವಾಗಬಾರದು. ನೆರೆಹೊರೆಯವರಲ್ಲಿ ಪ್ರೀತಿ, ಶಾಂತಿಯಿಂದ ನಡೆದು ಕ್ರೈಸ್ತ ಜೀವನವನ್ನು ಸಂಭ್ರಮಿಸಬೇಕು. ಕ್ರಿಸ್ತರು ಶೋಷಿತರ ಏಳಿಗೆಗೆ ದುಡಿದು ಮಾದರಿ ಜೀವನ ನಡೆಸಿದರು. ಅವರ ಸನ್ಮಾರ್ಗದಂತೆ ನಾವು ಕೂಡ ಸಮಾಜದಲ್ಲಿ ಪರರಿಗೆ ಆದರ್ಶವಾಗಿ ಬದುಕಬೇಕು ಎಂದರು. ಪೂಜೆಯ ನೇತೃತ್ವವನ್ನು ಫಾ.ಮ್ಯಾಕ್ಸಿಂ ಡಾಯಸ್ ವಹಿಸಿದ್ದರು. ಈ ಸಂದರ್ಭದಲ್ಲಿ ಧರ್ಮಗುರು ಫಾ ಸಿರಿಲ್ ಡಿ’ಮೆಲ್ಲೊ ಇದ್ದರು.

ಕೆಳಗೂರು ಚರ್ಚೀನಲ್ಲಿ ಕ್ರಿಸ್ ಮಸ್ ಹಬ್ಬದ ಪೂಜೆ ನೆರವೇರಿಸಿದ ಧರ್ಮಗುರುಗಳು
ಕೆಳಗೂರು ಚರ್ಚೀನಲ್ಲಿ ಕ್ರಿಸ್ ಮಸ್ ಹಬ್ಬದ ಪೂಜೆ ನೆರವೇರಿಸಿದ ಧರ್ಮಗುರುಗಳು
ಕೆಳಗೂರು ಚರ್ಚಿನಲ್ಲಿ ಕ್ರೈಸ್ತ ಭಕ್ತಾಧಿಗಳು ಸಿದ್ಧಪಡಿಸಿರುವ ಕ್ರಿಸ್ತನ ಜನನದ ಗೋದಲಿ
ಕೆಳಗೂರು ಚರ್ಚಿನಲ್ಲಿ ಕ್ರೈಸ್ತ ಭಕ್ತಾಧಿಗಳು ಸಿದ್ಧಪಡಿಸಿರುವ ಕ್ರಿಸ್ತನ ಜನನದ ಗೋದಲಿ

ಕೂವೆ ಚರ್ಚಿನಲ್ಲಿ ಫಾ.ಲ್ಯಾನ್ಸಿ ಪಿಂಟೋ ಮಾತನಾಡಿ, ಎಲ್ಲಾ ಧರ್ಮದ ಜನರೊಂದಿಗೆ ಶಾಂತಿ ಸೌಹಾರ್ದತೆಯಿಂದ ಬದುಕುವುದೇ ಕ್ರಿಸ್ತರ ಮೂಲ ಸಂದೇಶವಾಗಿದೆ ಎಂದರು. ಬಲಿಪೂಜೆಯ ನಂತರ ವಿವಿಧ ಚರ್ಚುಗಳಲ್ಲಿ ನೆರೆದ ಭಕ್ತರಿಗೆ ಕೇಕ್

ಕೂವೆ ಚರ್ಚ್‌
ಕೂವೆ ಚರ್ಚ್‌
ಕೂವೆ ಚರ್ಚ್ ನಲ್ಲಿ ಫಾ.ಲ್ಯಾನ್ಸಿ ಪಿಂಟೊ ಕ್ರಿಸ್ ಮಸ್ ಹಬ್ಬದ ಪೂಜೆ ನೆರವೇರಿಸಿದರು
ಕೂವೆ ಚರ್ಚ್ ನಲ್ಲಿ ಫಾ.ಲ್ಯಾನ್ಸಿ ಪಿಂಟೊ ಕ್ರಿಸ್ ಮಸ್ ಹಬ್ಬದ ಪೂಜೆ ನೆರವೇರಿಸಿದರು

ಕ್ರಿಸ್‌ಮಸ್‌ ಅಂಗವಾಗಿ ಮೂಡಿಗೆರೆ ಪಟ್ಟಣದ ಸಂತ ಅಂತೋನಿ ಚರ್ಚ್ ಸೇರಿದಂತೆ, ಗೋಣೀಬೀಡು ಚರ್ಚ್‌ಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಭಾನುವಾರ ಸಂಜೆಯಿಂದಲೇ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿ ಏಸುಕ್ರಿಸ್ತರ ಜನನವನ್ನು ಸಂಭ್ರಮಿಸಲಾಯಿತು. ಬೆಳಿಗ್ಗೆ ಚರ್ಚ್‌ಗಳಿಗೆ ತೆರಳಿದ ಕ್ರೈಸ್ತ ಸಮುದಾಯದವರು ಪ್ರಾರ್ಥನೆ ಸಲ್ಲಿಸಿದರು. ಚರ್ಚ್ ಆವರಣಗಳಲ್ಲಿ ಆಕರ್ಷಕ ಗೋದಲಿ ನಿರ್ಮಿಸಲಾಗಿತ್ತು. ಮನೆ, ಅಂಗಡಿ, ಹೋಟೆಲ್‌ಗಳಲ್ಲಿ ಬಣ್ಣದ ವಿದ್ಯುತ್ ದೀಪಗಳನ್ನೊಳಗೊಂಡ ಆಕಾಶ ಬುಟ್ಟಿಗಳನ್ನು ಹಾಕಿದ್ದು, ಹಬ್ಬದ ಸಂಭ್ರಮವನ್ನು ಹೆಚ್ಚಿಸಿತ್ತು.  ಪಟ್ಟಣದ ಸಂತ ಅಂತೋನಿ ಚರ್ಚ್‌ನಲ್ಲಿ ನಡೆದ ಪ್ರಾರ್ಥನೆಯಲ್ಲಿ ಧಾರ್ಮಿಕ ಪ್ರವಚನ ನೀಡಿದ ಉಜಿರೆಯ ದಯಾಳ್ ಭಾಗ್ ಚರ್ಚ್ ಧರ್ಮಗುರು ಜೋಯೆಲ್ ಲೋಫೆಸ್, ಕ್ರಿಸ್‌ಮಸ್ ಬಾಹ್ಯ ಆಚರಣೆಗೆ ಸೀಮಿತವಾಗದೆ ಆಂತರಿಕ ಪರಿಶುದ್ಧತೆಗೂ ಆದ್ಯತೆ ನೀಡುವಂತಾಗಬೇಕು. ಮನಸುಗಳು ಪ್ರೀತಿ ಹಾಗೂ ಶಾಂತಿಯ ತೊಟ್ಟಿಲಾಗಬೇಕು ಎಂದರು,

ಮೂಡಿಗೆರೆ ಪಟ್ಟಣದ ಸಂತ ಅಂತೋನಿ ಚರ್ಚ್ ನಲ್ಲಿ ರಚಿಸಿದ್ದ ಗೋದಲಿ
ಮೂಡಿಗೆರೆ ಪಟ್ಟಣದ ಸಂತ ಅಂತೋನಿ ಚರ್ಚ್

ನಯನಾ ಮೋಟಮ್ಮ ಭೇಟಿ:
ಬಣಕಲ್ ಬಾಲಿಕಾ ಮರಿಯ ಚರ್ಚ್ ಗೆ ಶಾಸಕಿ ನಯನಾ ಮೋಟಮ್ಮ ಭೇಟಿ ನೀಡಿ ಶುಭಾಶಯ ಕೋರಿದರು. ಧರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಅವರು ನಯನಾ ಅವರನ್ನು ಸನ್ಮಾನಿಸಿದರು. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಮೆಲ್ವಿನ್ ಹರ್ಷ ಲಸ್ರಾದೊ ಭಾಗವಹಿಸಿದ್ದರು. (ವರದಿ- ತನು ಕೊಟ್ಟಿಗೆಹಾರ)

ನಯನಾ ಮೋಟಮ್ಮ ಭೇಟಿ
ನಯನಾ ಮೋಟಮ್ಮ ಭೇಟಿ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.