ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವಿಶ್ವಹಿಂದೂ ಪರಿಷತ್, ಬಜರಂಗಳದ ವತಿಯಿಂದ ಸೋಮವಾರ ನಗರದಲ್ಲಿ ದತ್ತ ಮಾಲಾಧಾರಿಗಳು ಶೋಭಾಯಾತ್ರೆ ಸಾಗಿದರು. ನಗರದ ರತ್ನಗಿರಿ ರಸ್ತೆಯ ಕಾಮಧೇನು ಗಣಪತಿ ದೇವಾಲಯದ ಆವರಣದಲ್ಲಿ ಚಾಲನೆ ನೀಡಿ ಕೆಇಬಿ ವೃತ್ತ, ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ ಹಾದು ಎಂ.ಜಿ ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತ ತಲುಪಿತು.

ಇದನ್ನೂ ಓದಿ; ರೈತರಿಗೆ ಗುಡ್ ನ್ಯೂಸ್; ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಶೋಭಾಯಾತ್ರೆಯಲ್ಲಿ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದು, ಮೆರವಣಿಗೆಯಲ್ಲಿ ಚೆಂಡೆವಾದ್ಯ, ಬೊಂಬೆ ಕುಣಿತ, ಭಜನೆ ಕಹಳೆ ವಾದ್ಯ, ಗೊರವನ ಕುಣಿತ, ಹನುಮ ವೇಷಧಾರಿ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಭಾಗವಹಿಸಿದ್ದವು. ಮಹಿಳೆಯರು, ಮಕ್ಕಳು ಸೇರಿದಂತೆ ಯುವಜನತೆ ಡಿಜೆ ಹಾಗೂ ಡ್ರಮ್ ಸೆಟ್ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಇದನ್ನೂ ಓದಿ; ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗವಕಾಶ; 250 ಹುದ್ದೆಗಳಿಗೆ ಅರ್ಜಿ ಆಹ್ವಾನ
ದತ್ತಜಯಂತಿ ಹಿನ್ನೆಲೆ ಪಡಿ ಸಂಗ್ರಹ:
ದತ್ತಜಯಂತಿ ಹಿನ್ನೆಲೆ ಪಡಿ ಸಂಗ್ರಹ ಮೂಲಕ ಸಿ.ಟಿ ರವಿ ಭಿಕ್ಷಾಟನೆ ನಡೆಸಿದರು. ನಗರದ ನಾರಾಯಣಪುರ ಬಡಾವಣೆಯಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿದರು. ದತ್ತಮಾಲೆ ಧರಿಸಿರುವ ಅವರು ಕೆಲವು ಮನೆಗಳಿಗೆ ತೆರಳಿ ಅಕ್ಕಿ, ಬೆಲ್ಲ, ವೀಳ್ಯದೆಲೆ, ಅಡಿಕೆ, ತೆಂಗಿನ ಕಾಯಿಯನ್ನು ಸಂಗ್ರಹಿಸಿದರು.

ಹಾಂದಿಯಲ್ಲಿ ದತ್ತ ಜಯಂತಿ ಹಿನ್ನೆಲೆ ಶೋಭಾ ಯಾತ್ರೆ:
ಆಲ್ದೂರು ಸಮೀಪದ ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹಾಂದಿಯಲ್ಲಿ ದತ್ತ ಜಯಂತಿ ಪ್ರಯುಕ್ತ ಶೋಭಾಯಾತ್ರೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಹರಿಹರೇಶ್ವರ ದೇವಸ್ಥಾನದ ಮುಂಭಾಗದಿಂದ ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಆಜಾದ್ ಸರ್ಕಲ್ ನ ಹರಿಹರೇಶ್ವರ ದೇವಾಲಯದ ಆವರಣದಲ್ಲಿ ಸಮಾರೋಪಗೊಂಡಿತು.

ಬಾಳೆಹೊನ್ನೂರಿನಲ್ಲೂ ದತ್ತ ಜಯಂತಿ ಹಿನ್ನೆಲೆ ಶೋಭಾ ಯಾತ್ರೆ:
ದತ್ತ ಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಪಟ್ಟಣದ ಜೇಸಿ ವೃತ್ತದಲ್ಲಿ ಆಯೋಜಿಸಿದ್ದ ಶೋಭಾಯಾತ್ರೆ ಮಾರ್ಕಾಂಡೇಶ್ವರ ದೇಗುಲದ ಬಳಿಯಿಂದ ದತ್ತಾತ್ರೇಯಸ್ವಾಮಿಯ ಅಲಂಕೃತ ವಿಗ್ರಹ ಹೊತ್ತ ವಾಹನದೊಂದಿಗೆ ಶೋಭಾಯಾತ್ರೆ ನಡೆಯಿತು.

ವಿಶ್ವ ಹಿಂದೂ ಪರಿಷತ್ ಬಾಳೆಹೊನ್ನೂರು ಘಟಕದ ಕಾರ್ಯದರ್ಶಿ ದಿವಿರ್ ಮಲ್ನಾಡ್ ಮಾತನಾಡಿ, ಬಜರಂಗದಳದ ಹೋರಾಟದ ಫಲವಾಗಿ ಇಂದು ದತ್ತಪೀಠದ ಹಿಂದೂಗಳ ಪರವಾಗುತ್ತಿದ್ದು, ಬಾಳೆಹೊನ್ನೂರಿನ ಬಿ.ಎಸ್.ವಿಠ್ಠಲರಾವ್ ಅವರ ಕಾನೂನು ಹೋರಾಟ ಮುಖ್ಯ ಪಾತ್ರ ವಹಿಸಿದೆ ಎಂದರು.












