ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ಹೆಚ್ಚೇನು ದಾಳಿ ಮಾಡಿದ ಪರಿಣಾಮ ನೂರಾರು ಭಕ್ತರು ಗಾಯಗೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಆಸ್ತಿ ನೋಂದಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಆಸ್ತಿ ರಿಜಿಸ್ಟ್ರೇಷನ್ ಗೆ ಈ ದಾಖಲೆಗಳು ಕಡ್ಡಾಯ!

ಶುಕ್ರವಾರ ಗುಡ್ ಪ್ರೈಡೇ ಪರಿಣಾಮ ಶಿವಮೊಗ್ಗ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಶಿಲುಬೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾವಿರಾರು ಭಕ್ತರು ಚರ್ಚ್‌ನ ಆವರಣದಲ್ಲಿದ್ದರು. ಈ ವೇಳೆ ಏಕಾಏಕಿ ಹೆಚ್ಚೇನು ದಾಳಿ ನಡೆದಿದೆ. ನೂರಾರು ಜನರ ಮೇಲೆ ಹೆಚ್ಚೇನು ದಾಳಿ ಮಾಡಿದ್ದರಿಂದ ಭಯಭೀತರಾಗಿ ಚರ್ಚ್‌ನ ಒಳಗೆ ಹೋಗಿ ಬಾಗಿಲು ಹಾಕಿಕೊಂಡರು. ಅಷ್ಟರಲ್ಲಾಗಲೇ ನೂರಾರು ಜನರಿಗೆ ಹೆಚ್ಚೇನು ದಾಳಿ ಮಾಡಿವೆ.

ಹೆಚ್ಚೇನು ದಾಳಿಗೆ ಒಳಗಾದವರನ್ನು ಆಂಬ್ಯುಲೆನ್ಸ್ ಮೂಲಕ ಚರ್ಚ್‌ನ ಸಮೀಪವಿರುವ ಅಶೋಕ ಸಂಜೀವಿನಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಚರ್ಚ್‌ನ ಫಾದರ್‌ಗೂ ಹೆಚ್ಚೇನು ದಾಳಿ ನಡೆಸಿದ್ದು ತೀವ್ರವಾಗಿ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: 6 ರಾಶಿಗೆ ಪ್ರಗತಿಯ ಹಾದಿ ತೆರೆಯಲಿದೆ.. ಭರ್ಜರಿ ಲಕ್!
















