ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬುಡಕಟ್ಟು ಪರಿಸರದಲ್ಲಿ ದಶಕಗಳಿಂದ ವಾಸಿಸುವ ಕುಟುಂಬಗಳಿಗೆ ಪುನರ್ವಸತಿ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಅವರು ಬೆಳಗಾವಿ ಅಧಿವೇಶನದಲ್ಲಿ ಒತ್ತಾಯಿಸಿದರು.
ಇದನ್ನೂ ಓದಿ: ಏರ್ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಕುದುರೆಮುಖ ರಾಷ್ಟ್ರೀಯ ಉದ್ಯಾನದ ಒಳಗಿರುವ ಮೂಲ ನಿವಾಸಿಗಳಿಗೆ 2008ರೊಳಗೆ ಪುನರ್ವಸತಿ ಕಲ್ಪಿಸಲು ಮತ್ತು ಪರಿಹಾರ ನೀಡಲು 2003ರಲ್ಲಿ ಸರ್ಕಾರ ಆದೇಶ ಮಾಡಿದೆ. ಕೆಲವರಿಗೆ ಇದುವರೆಗೂ ಪರಿಹಾರ ನೀಡಿಲ್ಲ. 2005ರ ಮೌಲ್ಯಮಾಪನ ಮಾಡಿದ ಪರಿಹಾರವನ್ನು ಈಗ ನೀಡಲು ಅರಣ್ಯ ಇಲಾಖೆ ಹೊರಟಿದೆ. ಇದರಿಂದ ಮೂಲ ನಿವಾಸಿಗಳಿಗೆ ಅನ್ಯಾಯವಾಗಿದೆ. ಹಣದ ಮೌಲ್ಯ ಹೆಚ್ಚಾಗಿದ್ದು, ಭೂಮಿಯ ಬೆಲೆ ಸಹ ಅಷ್ಟೇ ಹೆಚ್ಚಾಗಿದೆ. ಈಗ ನೀಡುತ್ತಿರುವ ಪುನರ್ವಸತಿ ಮೌಲ್ಯದಿಂದ ಅನೇಕ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ಇದೆ ಎಂದರು.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ನಿವಾಸಿಗಳ ಪುನರ್ವಸತಿ ಮತ್ತು ಪರಿಹಾರ ಸಂಬಂಧ 2005ರ ಮೌಲ್ಯಮಾಪನ ಆದೇಶವನ್ನು ರೈತರ ಹಿತದೃಷ್ಟಿಯಿಂದ ಪುನರ್ ಪರಿಶೀಲಿಸಲಾಗುವುದು ಎಂಬ ಭರವಸೆಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ನೀಡಿದ್ದು, ಇತ್ತೀಚಿಗೆ ಆನೆ ದಾಳಿಯಿಂದ ಇಬ್ಬರು ಮೃತಪಟ್ಟ ಕುಟುಂಬ ಮತ್ತು ಆ ಊರಿನ ಉಳಿದ ಕುಟುಂಬಗಳ ಪುನರ್ವಸತಿಗೆ ₹22 ಕೋಟಿ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ ಎಂದೂ ಶಾಸಕ ಟಿ.ಡಿ.ರಾಜೇಗೌಡ ಅವರು ವಿವರಿಸಿದರು.












