ಶೀರ್ಲು ಗ್ರಾಮದ ಸ.ನಂ. 31 ರ ಬ್ಲಾಕ್ ನಂ 3 ಹಾಗು ಬ್ಲಾಕ್ ನಂ 4 ರಲ್ಲಿ ಒಟ್ಟು 2 ಎಕರೆ 22 ಗುಂಟೆ ಜಮೀನು ಸರ್ವೆ ಮಾಡಿ ನಕ್ಷೆ ತಯಾರಿ ಮಾಡಿ ಅರಣ್ಯ ಹಕ್ಕು ಪತ್ರ ನೀಡಿದ್ದು, ಹಕ್ಕು ಪತ್ರ ನೀಡುವ ಸಂದರ್ಭ ಹಕ್ಕು ಪತ್ರದಲ್ಲಿ ಮೊದಲು 2 ಎಕರೆ 22 ಗುಂಟೆ ಎಂದು ನಮೂದು ಮಾಡಿ ಆ ನಂತರ ತಿದ್ದಿ ಕೇವಲ 0.32 ಗುಂಟೆ ಎಂದು ನಮೂದಿಸಿ ಹಕ್ಕು ಪತ್ರ ಪತ್ರ ನೀಡಲಾಗಿದ್ದು, ಹಕ್ಕು ಪತ್ರ ನೀಡುವ ಸಂದರ್ಭದಲ್ಲಿ ತಿಳುವಳಿಕೆ ಕೊರತೆಯಿಂದ ಈ ಕುಟುಂಬದವರು ಸರಿ ಪಡಿಸಿಕೊಂಡಿರುವುದಿಲ್ಲ.
ಇದನ್ನೂ ಓದಿ: ಏರ್ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಈಗ ಈ ಕೃಷಿ ಜಮೀನು ಕುದುರೇಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುತ್ತಿದ್ದು, ಉದ್ಯಾನವನ ವ್ಯಾಪ್ತಿಯಿಂದ ಸ್ವಯಂ ಪುನರ್ವಸತಿ ಹೊಂದುವ ಉದ್ದೇಶ ಕುಟುಂಬವು ಅರ್ಜಿ ಸಲ್ಲಿಸಿದ್ದು, ಅರ್ಜಿ ಪರಿಶೀಲನೆ ಸಂದರ್ಭ ತಪ್ಪಾಗಿರುವುದು ಇವರ ಗಮನಕ್ಕೆ ಬಂದಿರುತ್ತದೆ.
ಈಗಾಗಲೇ ಈ ಗ್ರಾಮದ ಸಮೀಪದ ಎಲ್ಲಾ ಕುಟುಂಬದವರು ಪುನರ್ವಸತಿ ಹೊಂದಲು ತಯಾರಾಗಿದ್ದು, ಆದರೆ ಈ ಒಂದು ಕುಟುಂಬದ ಕಡತ ತಯಾರಿಯಾಗದೇ ಪುನರ್ವಸತಿ ಹೊಂದಲು ಸಾದ್ಯವಿರುವುದಿಲ್ಲ.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ
ಅಲ್ಲದೇ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಕೃಷಿ ಜಮೀನು ಸಹ ಅಡಿಕೆ ಹಳದಿಎಲೆ ರೋಗ ಎಲೆ ಚುಕ್ಕಿ ರೋಗದಿಂದ ಜಮೀನು ನಾಷ ಹೊಂದುತ್ತಿದ್ದು, ತುರ್ತಾಗಿ ಪುನರ್ವಸತಿ ಹೊಂದದೇ ಇದ್ದಲ್ಲಿ ನಮಗೆ ಅಪಾರ ನಷ್ಟ ಉಂಟಾಗುವುದರಿಂದ ದಾಖಲೆ ಪರಿಶೀಲನೆ ಮಾಡಿ ನಕ್ಷೆಯಲ್ಲಿ ನಮೂದಿರುವಂತೆ ಅರಣ್ಯ ಹಕ್ಕು ಪತ್ರದಲ್ಲಿ ವಿಸ್ತೀರ್ಣ 2 ಎಕರೆ 22 ಗುಂಟೆ ಎಂದು ತಿದ್ದುಪಡಿ ಮಾಡಿಸಿಕೊಡಬೇಕೆಂದು ಶಾಸಕರು, ಸಂಸದರು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.












