ಕಡೂರು: (ನ್ಯೂಸ್ ಮಲ್ನಾಡ್ ವರದಿ) ಬೈಕ್ನಲ್ಲಿ ಬಂದ ಇಬ್ಬರು ನಡೆದು ಹೋಗುತ್ತಿದ್ದ ಮಹಿಳೆಯ ಬಳಿ ನಾವು ಪೊಲೀಸರು ಎಂದು ಸುಳ್ಳು ಹೇಳಿ ಚಿನ್ನದ ಸರ ಅಪಹರಿಸಿದ ಘಟನೆ ಕಡೂರು ತಾಲೂಕಿನ ಹಿರೇನಲ್ಲೂರು ಗ್ರಾಮದ ಕೇದಿಗೆರೆ ಕ್ರಾಸ್ನಲ್ಲಿ ನಡೆದಿದೆ.
ಇದನ್ನೂ ಓದಿ: ಏರ್ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಬ್ಯಾಂಕ್ ಕೆಲಸಕ್ಕಾಗಿ ಹಿರೇನಲ್ಲೂರಿಗೆ ಬಂದಿದ್ದ ಮಹಿಳೆ, ಕೆಲಸ ಮುಗಿಸಿ ಸ್ವಗ್ರಾಮ ಕಾಮನಕೆರೆಗೆ ತೆರಳಲು ಬಸ್ ಹತ್ತುವ ಸಲುವಾಗಿ ಕೇದಿಗೆರೆ ಕ್ರಾಸ್ನಲ್ಲಿ ನಡೆದು ಹೋಗುವಾಗ ಅಪರಿಚಿತರು ಇಬ್ಬರು ಬೈಕ್ನಲ್ಲಿ ಬಂದು ನಿಲ್ಲಿಸಿ ಚಿನ್ನದ ಸರವನ್ನು ಕೊರಳಿನಲ್ಲಿ ಕಾಣುವಂತೆ ಹಾಕಿಕೊಳ್ಳಬಾರದು ಎಂದು ತಿಳಿಸಿದ್ದರು.
ಬ್ಯಾಗಿನಲ್ಲಿ ಇಟ್ಟುಕೊಳ್ಳುವಂತೆ ಹೇಳಿ ಸರವನ್ನು ಪಡೆದು ಪೇಪರ್ನಲ್ಲಿ ಸುತ್ತಿ ಕೊಡುವುದಾಗಿ ತಿಳಿಸಿ ಅವರೇ ಚೀಲದಲ್ಲಿ ಇಟ್ಟು ತೆರಳಿದ್ದರು. ಮಹಿಳೆ ಅನುಮಾನಗೊಂಡು ಕಟ್ಟಿದ ಚೀಲ ಬಿಚ್ಚಿ ಪೊಟ್ಟಣ ತೆಗೆದು ನೋಡಿದರೆ, ಅಲ್ಲಿ ಸರದ ಬದಲು ಕಲ್ಲು ಇತ್ತು. ಸುಮಾರು 38 ಗ್ರಾಂ ತೂಕದ ಎರಡೆಳೆ ಸರದ ಮೌಲ್ಯ ₹4.18 ಲಕ್ಷಗಳಾಗಿದ್ದು, ಬೀರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ












