
ಮೊಬೈಲ್ ಗೆ ಬಂದ ಲಿಂಕ್ ಒತ್ತಿ 15 ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರದ ಕೆಜಿಎಫ್ ನ ಸುಭಾಷ್ ನಗರದ ಮುರುಗನ್, ತಮ್ಮ ಮೊಬೈಲ್ ಗೆ ಬಂದ ಲಿಂಕ್ ಒತ್ತಿ ಬರೋಬ್ಬರು 15, 27,400 ರೂಪಾಯಿ ಕಳೆದುಕೊಂಡಿದ್ದಾರೆ. ನಿಮಗೆ ತಿಂಗಳಿಗೆ 50 ಸಾವಿರ ರೂಪಾಯಿ ಹಣ ಬರುವಂತೆ ಮಾಡುತ್ತೇನೆ. ತಾನು ಕಳುಹಿಸಿದ ಈ ಫೋನ್ ಪೇ ಲಿಂಕ್ ಒತ್ತಿ ಎಂದು ಹೇಳಿ ಲಿಂಕ್ ಮೆಸೇಜ್ ಮಾಡಿದ್ದಾನೆ. ಮುರುಗನ್ ಲಿಂಕ್ ಒತ್ತಿದ್ದಾರೆ. ತಕ್ಷಣ ಅವರ ಖಾತೆಯಲ್ಲಿದ್ದ 15,27,400 ರೂಪಾಯಿ ಮಾಯವಾಗಿದೆ. ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಮುರುಗನ್ ಕೆಜಿಎಫ್ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

















Leave a Reply