ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದ ಸೋಪ್ ಜಾಹೀರಾತು ನೋಡಿ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಂತ-ಹಂತವಾಗಿ 2.97 ಲಕ್ಷ ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ಶಿವಮೊಗ್ಗದ ಜಿಲ್ಲೆಯ ಎಲೆಕ್ಟ್ರಿಷಿಯನ್ ಒಬ್ಬರು ಜಾಹೀರಾತು ನೋಡಿ ಆರ್ಡರ್ ಮಾಡಿದ್ದರು. ಆರ್ಡರ್ ಮನೆಗೆ ಬಾರದೆ ಇದ್ದಾಗ ಕೊರಿಯರ್ ನಂಬರ್ಗಾಗಿ ಗೂಗಲ್ನಲ್ಲಿ ಹುಡುಕಿದ್ದು, ನಂಬರ್ ಸಿಕ್ಕಿತ್ತು. ಆ ನಂಬರ್ಗೆ ಕರೆ ಮಾಡಿದಾಗ ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿಯೊಬ್ಬರು ಮೊಬೈಲ್ಗೆ ಲಿಂಕ್ ಕಳುಹಿಸುವುದಾಗಿ ತಿಳಿಸಿ, ಅದರಲ್ಲಿ ಲಿಂಕ್ ಒತ್ತಿ ನಂಬರ್ ಹಾಕಲು ಸೂಚಿಸಿದ್ದ. ಕೊರಿಯರ್ನನವರು ಹೇಳಿದಂತೆ ಮಾಡಿದ ಮಾರನೇ ದಿನ ಮಕ್ಕಳ ಶಾಲಾ ಫೀಸ್ ಕಟ್ಟಲು ಹೋದಾಗ ಖಾತೆಯಿಂದ ಒಟ್ಟು 2.97 ಲಕ್ಷ ರೂ. ಹಣ ಕಡಿತ ಆಗಿರುವುದು ಬೆಳಕಿಗೆ ಬಂದಿದೆ.

ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














