ಹಾಡ ಹಗಲೇ ಮರಳು ಮಾಫಿಯಾ: ಶೃಂಗೇರಿ ಕ್ಷೇತ್ರದಲ್ಲಿ ಸತ್ತು ಮಲಗಿರುವ ಲಾ ಅಂಡ್ ಆರ್ಡರ್

ರಾತ್ರಿಯಾದರೆ ಸಾಕು ಮಲೆನಾಡಿನ ಹಳ್ಳಿಗಳಲ್ಲಿ ನಂಬರ್ ಪ್ಲೇಟ್ ಇಲ್ಲದ ವಾಹನಗಳದ್ದೇ ಸದ್ಧು, ಈ ಮೊದಲು ಇತಿಮಿತಿಯಲ್ಲಿದ್ದ ಅಕ್ರಮ ಮರಳು ಗಣಿಗಾರಿಕೆ ಚಟುವಟಿಕೆಗಳು ಈಗ ದಂಧೆಯಾಗಿ ಪರಿವರ್ತಿತವಾಗಿದೆ. ಅದಕ್ಕೆ ಕಾನೂನಿನ ರಕ್ಷಣಾ ಕವಚ ಬೇರೆ.


ಇದನ್ನೂ ಓದಿ; ರೇಷನ್‌ ಕಾರ್ಡ್‌ʼನಲ್ಲಿ ಹೆಸರು ತಿದ್ದುಪಡಿಗೆ ಅವಕಾಶ; ಹೊಸ ಸದಸ್ಯರ ಸೇರ್ಪಡೆಯನ್ನು ಜಸ್ಟ್ ಹೀಗೆ ಮಾಡಿ; ಈ ದಾಖಲೆ ಕಡ್ಡಾಯ


ರಾತ್ರಿ ಅಷ್ಟೇ ಅಲ್ಲದೆ ಹಾಡಹಗಲೇ ಶೃಂಗೇರಿ , ಕೊಪ್ಪ, ನರಸಿಂಹರಾಜಪುರ, ಬಾಳೆಹೊನ್ನೂರು, ಜಯಪುರ ಭಾಗಗಳಲ್ಲಿ ಮರಳು ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿದ್ದು ನೂರಾರು ಪಿಕಪ್ ಹಾಗೂ ಟ್ರಾಕ್ಟರ್ ವಾಹನಗಳಲ್ಲಿ ಅವ್ಯಾಹತವಾಗಿ ಮರಳು ಲೂಟಿ ನಡೆಯುತ್ತಿದೆ.ಈ ಬಗ್ಗೆ ಹಲವಾರು ಬಾರಿ ಸ್ಥಳೀಯರು ನ್ಯೂಸ್ ಮಲ್ನಾಡ್ ಗೆ ಕರೆ ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ

ತಿಂಗಳ ಮಾಮೂಲಿಗೆ ಹಾಗೂ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ಕಣ್ಣುಮುಚ್ಚಿಕೊಂಡು ಕುಳಿತಿದೆ. ಇನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಂತೂ ಸತ್ತೇ ಮಲಗಿದೆ.  ಈಗ ತಾನೇ ಕಾಲೇಜು ಬಿಟ್ಟ ಯುವಕರು ಇದೊಂದು ಹೊಸ ಸ್ಟಾರ್ಟ್ ಅಪ್ ಬ್ಯುಸಿನೆಸ್ ಎಂಬಂತೆ ಪ್ರಾರಂಭಿಸುತ್ತಿದ್ದಾರೆ.


ಇದನ್ನೂ ಓದಿ; ರಾಜ್ಯದ SC-ST ಪಂಗಡದವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ


ಶೃಂಗೇರಿ ಕ್ಷೇತ್ರದಲ್ಲಿ ಸತ್ತು ಮಲಗಿರುವ ಲಾ ಅಂಡ್ ಆರ್ಡರ್:
ಅಕ್ರಮ ಮರಳು, ಮಣ್ಣು ಸಾಗಾಟ, ಇಸ್ಪೀಟ್ ದಂಧೆ, ಅಕ್ರಮ ಮದ್ಯ ಮಾರಾಟ, ಕಾಲೇಜುಗಳ ಬಳಿ ಕಾಮುಕರ ಕೀಟಲೆ, ಗಾಂಜಾ ಮಾರಾಟ ಸೇರಿದಂತೆ ಅಕ್ರಮ ಚಟುವಟಿಕೆಗಳ ಕೂಪವಾಗಿ ಮಲೆನಾಡು ಪರಿವರ್ತನೆ ಆಗುತ್ತಿರುವುದು ಆತಂಕದ ವಾತಾವರಣವಾಗಿದೆ. ಆದರೆ ಈ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ದಿಟ್ಟ ಕ್ರಮಗಳನ್ನು ಕೈಗೊಳ್ಳದೆ ಇರುವುದು ಅತ್ಯಂತ ಶೋಚನೀಯವಾಗಿದೆ.

ಪೊಲೀಸರಿಗೂ ಧಮ್ಕಿ:

ಇನ್ನು ಕೆಲವೊಮ್ಮೆ ಹೊಂದಾಣಿಕೆ ಮಾಡಿಕೊಳ್ಳದ ಮರಳು ವಾಹನಗಳನ್ನು ಪೊಲೀಸರು ಅಡ್ಡ ಹಾಕಿದರೆ, ನನಗೆ ಆ ಲೀಡರ್ ಗೊತ್ತಿದೆ ಇವರು ಗೊತ್ತಿದೆ. ಎಂಎಲ್ಎ ಅವರಿಗೆ ಫೋನ್ ಮಾಡ್ತೀನಿ ಎಂದು ಪೊಲೀಸರಿಗೇ ಧಮ್ಕಿ ಹಾಕುತ್ತಿದ್ದಾರೆ ಹಾಗೂ ಜನಪ್ರತಿನಿಧಿಗಳ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಮಾಹಿತಿ ಸಹ ಇದೆ.

ಯಾವ ಪಾಟಿ ಪೈಪೋಟಿ ಎಂದರೆ ಮೊದಲೆಲ್ಲಾ ಒಂದು ಲೋಡ್ ಮರಳಿಗೆ 4 ಸಾವಿರ ಇದ್ದದ್ದು ಈಗ 2 ಸಾವಿರಕ್ಕೆ ಬಂದು ಇಳಿದಿದೆ. ಅದಕ್ಕೆ ಕಾರಣವಾಗಿರುವುದು ಹೊಸದಾಗಿ ವ್ಯವಹಾರಕ್ಕೆ ಇಳಿದಿರುವ ನೂರಾರು ಪಿಕಪ್ ವಾಹನಗಳ ನಡುವಿನ ಪೈಪೋಟಿ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮರಳು ಟೆಂಡರ್ ಮಾಡದೆ ಇರುವುದೇ ಇದಕ್ಕೆ ಮುಖ್ಯ ಕಾರಣವಾಗಿದ್ದು ಇಲಾಖೆಯ ಬೇಜವಾಬ್ದಾರಿತನದಿಂದ ಸರ್ಕಾರಕ್ಕೆ ನೂರಾರು ಕೋಟಿ ನಷ್ಟವಾಗುತ್ತಿದೆ. ಅದು ಅಕ್ರಮಕ್ಕೆ ಎಡೆಮಾಡಿಕೊಟ್ಟಿದೆ.

ಸ್ಥಳೀಯರು ಕಳಿಸಿದ, ನಂಬರ್ ಪ್ಲೇಟ್ ಇಲ್ಲದೆ ದಂಧೆಯಲ್ಲಿ ನಿರತವಾಗಿರುವ ವಾಹನವೊಂದರ ಫೋಟೋ
ಸ್ಥಳೀಯರು ಕಳಿಸಿದ, ನಂಬರ್ ಪ್ಲೇಟ್ ಇಲ್ಲದೆ ದಂಧೆಯಲ್ಲಿ ನಿರತವಾಗಿರುವ ವಾಹನವೊಂದರ ಫೋಟೋ

ಇದನ್ನೂ ಓದಿ; ಮಹಿಳೆಯರಿಗೆ ಬಂಪರ್‌ ಸುದ್ದಿ; ಸರ್ಕಾರದ ಈ ಯೋಜನೆಯಡಿ ಸಿಗಲಿದೆ ಸೋಲಾರ್ ಸ್ಟವ್!; ಈ ದಾಖಲೆ ಕಡ್ಡಾಯ


ಎದೆಗಾರಿಕೆ ಇಲ್ಲದ ತಹಸೀಲ್ದಾರ್ ಗಳು:

ಮೊದಲೆಲ್ಲಾ ಹಣದ ಆಸೆಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಇಂತಹ ಅಕ್ರಮ ಚಟುವಟಿಕೆಗಳಿಗೆ ಬೆಂಬಲಿಸಿ ಜಾಣ ಕುರುಡು ತೋರಿಸುತ್ತಿದ್ದಾಗ, ತಹಸೀಲ್ದಾರ್ ಆದವರು ಇಂತಹ ಚಟುವಟಿಕೆಗಳನ್ನು ನಿಯಂತ್ರಣ ಮಾಡುತ್ತಿದ್ದರು, ಆದರೆ ಈಗ ಅಂತಹ ಎದೆಗಾರಿಕೆ ತೋರಿಸುವ ತಹಸೀಲ್ದಾರ್ ರು ಯಾರೂ ಇಲ್ಲವಾಗಿದ್ದಾರೆ.

ಜಿಲ್ಲಾಧಿಕಾರಿಗಳ ದಿವ್ಯ ಮೌನ:

ಜಿಲ್ಲಾಧಿಕಾರಿಗಳು ಈ ಬಗ್ಗೆ ದಿವ್ಯ ಮೌನ ವಹಿಸಿದ್ದು ಇದಕ್ಕೆ ಕಡಿವಾಣ ಬೀಳದಿರಲು ಒಂದು ಮುಖ್ಯ ಕಾರಣವಾಗಿದೆ. ಇನ್ನಾದರೂ ಅವರು ಈ ಬಗ್ಗೆ ಎಚ್ಚರವಹಿಸುತ್ತಾರಾ ನೋಡಬೇಕಿದೆ

ಮುತ್ತಿನ ಕೊಪ್ಪದಲ್ಲಿ ಇಸ್ಪೀಟ್ ದಂಧೆ:

ಇನ್ನು ಮುತ್ತಿನ ಕೊಪ್ಪದಲ್ಲಿ ಇಸ್ಪೀಟ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು ಕೆಲವು ಖಾಸಗಿ ಸ್ಥಳಗಳನ್ನು ಗೋವಾದ ಕ್ಯಾಸಿನೊ ಎಂಬಂತೆ ಅಕ್ರಮ ಕೂಟವಾಗಿಸಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಇದ್ದರೂ ಪೊಲೀಸ್ ಇಲಾಖೆ ಕ್ರಮ ವಹಿಸಿಲ್ಲ.

ಕಾಲೇಜುಗಳ ಬಳಿ ಕಾಮುಕರ ಕಾಟ:

ತಾಲ್ಲೂಕು ಕೇಂದ್ರಗಳಲ್ಲಿನ ಪಿಯುಸಿ ಹಾಗೂ ಪದವಿ ಕಾಲೇಜುಗಳ ಬಳಿ ಮದ್ಯಾಹ್ನ ಹಾಗೂ ಸಂಜೆ ಸಂದರ್ಭದಲ್ಲಿ ಪುಂಡರ ಕಾಟ ಹೆಚ್ಚಾಗಿದ್ದು ಅತಿವೇಗದ ಚಾಲನೆ ಮಾಡುವುದರ ಜೊತೆಗೆ ಕಾಲೇಜು ಹೆಣ್ಮಕ್ಕಳು ಹೊರಗೆ ಬರುವುದನ್ನೇ ಕಾಯುತ್ತಿರುತ್ತಾರೆ, ಇದಕ್ಕೂ ಕಡಿವಾಣ ಬೀಳಬೇಕಿದೆ.

ಹಳ್ಳಿಹಳ್ಳಿಗಳಲ್ಲಿ ಅಕ್ರಮ ಮದ್ಯ:

ಇನ್ನು ಹಳ್ಳಿಹಳ್ಳಿಗಳಲ್ಲಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಇದರಿಂದಾಗಿ ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚಾಗಿದೆ, ಕುಟುಂಬಗಳು ಬೀದಿ ಪಾಲಾಗುತ್ತಿವೆ.


ಇದನ್ನೂ ಓದಿ; KSRTC ಬಸ್‌ ನಲ್ಲಿ ಪ್ರಯಾಣ ಮಾಡುವವರಿಗೆ ಭರ್ಜರಿ ಸಿಹಿಸುದ್ದಿ; ಏನದು? ಮಿಸ್‌ ಮಾಡ್ದೆ ಈ ಸುದ್ದಿ ಓದಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.