ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಸಾಲದ ಬಾಧೆಯಿಂದ ಬೇಸತ್ತ ಕ್ರಷರ್ ಉದ್ಯಮಿಯೊಬ್ಬರು ನಗರದ ಹೋಟೆಲ್‌ವೊಂದರಲ್ಲಿ ನೇಣು ಹಾಕಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಪಾಳ ಬಡಾವಣೆಯ ನಿವಾಸಿ ನವೀನ್ ಕುಮಾರ್ ಬಳಗಾರ (42) ಮೃತಪಟ್ಟವರು.
ಉದ್ಯಮದಲ್ಲಿ ಉಂಟಾಗಿದ್ದ ನಷ್ಟ ಹಾಗೂ ವಿಪರೀತ ಸಾಲದ ಹೊರೆಯಿಂದ ಮನನೊಂದಿದ್ದ ಇವರು ಹೋಟೆಲ್‌ನಲ್ಲಿ ಕೊಠಡಿ ಬಾಡಿಗೆಗೆ ಪಡೆದು ನೇಣು ಹಾಕಿಕೊಂಡಿದ್ದಾರೆ.

ಸ್ಥಳಕ್ಕೆ ದೊಡ್ಡಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

















