ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಫೆಬ್ರವರಿ 22ರಂದು ಕಾಡಾನೆ ದಾಳಿಯಿಂದ ಕಾರ್ಮಿಕ ಮಹಿಳೆ ಬೋರಮ್ಮ ಸಾವನ್ನಪ್ಪಿದ ದುರ್ಘಟನೆ ಬಳಿಕ ಉಂಟಾದ ಪ್ರತಿಭಟನೆ ಪ್ರಕರಣದಲ್ಲಿ ಮತ್ತೆ 9 ಜನ ರೈತ ಹೋರಾಟಗಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಈ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ ₹1,00,000 ಸ್ಕಾಲರ್ಶಿಪ್; ಡಿಟೇಲ್ಸ್ಗಾಗಿ ಜಸ್ಟ್ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಕಾಡಾನೆ ತುಳಿತದಿಂದ ಮೃತಪಟ್ಟ ಬೋರಮ್ಮ ಅವರ ಶವವನ್ನು ಕಡಬಗೆರೆಯಲ್ಲಿ ತಡೆದು, ಪರಿಹಾರ ಹಾಗೂ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಬೆಳಗ್ಗಿನಿಂದ ಸಂಜೆವರೆಗೂ ನಡೆದ ಈ ಪ್ರತಿಭಟನೆ ವೇಳೆ ಹೆದ್ದಾರಿ ಬಂದ್, ಶವ ಸಾಗಣೆಗೆ ಅಡ್ಡಿ, ಪೊಲೀಸರ ಮೇಲೆ ಕಲ್ಲು ತೂರಾಟ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಾಳೆಹೊನ್ನೂರು ಠಾಣೆಯಲ್ಲಿ ಮೊದಲ ಹಂತದಲ್ಲಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ; ಏನೆಲ್ಲಾ ತಿದ್ದುಪಡಿ ಮಾಡಿಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ
ಇದರ ನಡುವೆಯೇ, ಅರಣ್ಯ ಸಚಿವರಾದ ಈಶ್ವರ ಖಂಡ್ರೆ ರೈತರು ಮತ್ತು ಬೆಳೆಗಾರರೊಂದಿಗೆ ಸಭೆ ನಡೆಸಿ, ರೈತರ ಮೇಲಿನ ಕೇಸ್ಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿದ್ದರು. ಆದರೆ, ಶನಿವಾರ ನಡೆದ ಕಾರ್ಯಕ್ರಮದ ನಂತರ ಮತ್ತೆ 9 ಜನರ ವಿರುದ್ಧ ಹೊಸದಾಗಿ ಎಫ್ಐಆರ್ ದಾಖಲಾಗಿರುವುದು ರೈತ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
“ರೈತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯುತ್ತೇವೆ ಎಂದು ಸಚಿವ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಆದರೆ ನಿನ್ನೆ ನಡೆದ ಕಾರ್ಯಕ್ರಮದ ನಂತರ ಮತ್ತೆ 9 ಜನರ ಮೇಲೆ FIR ದಾಖಲಿಸಿರುವುದು ನೋಡಿದ್ರೆ ಯಾರನ್ನು ನಂಬುವುದು ಸ್ವಾಮಿ???”- ಹೆಸರು ಹೇಳಲು ಇಚ್ಚಿಸದವರು
ಇದನ್ನೂ ಓದಿ: ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್; ಈ ದಿನ ಆಗಲಿದೆ 27ನೇ ಕಂತಿನ ಹಣ ಜಮಾ












