ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ನಡೆಯಲಿರುವ ಮೊಸರುಕುಡಿಕೆ ಕಾರ್ಯಕ್ರಮದ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದಿರುವ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದೇ 22.09.2024 ಭಾನುವಾರ ದಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ಮೊಸರುಕುಡಿಕೆ ಕಾರ್ಯಕ್ರಮವನ್ನು ಕೊಪ್ಪದಲ್ಲಿ ಆಯೋಜಿಸಿದ್ದು, ಈ ಕುರಿತು ಪಟ್ಟಣದ ದೇವೇಗೌಡ ವೃತ್ತದಲ್ಲಿ ಹಾಕಿದ್ದ ಬ್ಯಾನರ್ ಅನ್ನು ಉದ್ದೇಶಪೂರ್ವಕವಾಗಿ ಹರಿಯಲಾಗಿದೆ ಎಂದು ಆರೋಪಿಸಲಾಗಿದೆ.
ಬ್ಯಾನರ್ ಹರಿದವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ; ರೈತರಿಗೆ ಮತ್ತೊಂದು ಗುಡ್ ನ್ಯೂಸ್; ಶೇ. 90ರಷ್ಟು ಸಹಾಯಧನದಲ್ಲಿ ಸಿಗಲಿದೆ ಈ ಸೌಲಭ್ಯ












