ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮುಖ್ಯವಾಹಿನಿಗೆ ಮರಳಿದ ಆರೋಪಿತ ನಕ್ಸಲರ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ನ್ಯಾಯಾಲಯದಲ್ಲಿರುವ ಮಾಜಿ ನಕ್ಸಲರ ಪ್ರಕರಣಗಳು, ಮೂಲಸೌಕರ್ಯ ನೀಡಿಕೆ, ಜಮೀನು ಮಂಜೂರು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದು, ದಿನೇಶ್ ಪಟವರ್ಧನ್, ಗೌಸ್ ಮೋಹಿದೀನ್, ಸಿರಿಮನೆ ನಾಗರಾಜ್, ನಿಲಗುಳಿ ಪದ್ಮನಾಭ್, ನೂರ್ ಶ್ರೀಧರ್, ಶಿವು, ಪರಶುರಾಮ್ ಒಳಗೊಂಡ ನಿಯೋಗ ಮನವಿ ಸಲ್ಲಿಸಿತು.
2016 ರಲ್ಲಿ 4 ಜನ, 2017 ರಲ್ಲಿ 3 ಜನ ನಕ್ಸಲರು ಶರಣಾಗಿದ್ದು, ಎಂಟು ವರ್ಷವಾದರೂ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎನ್ನುವ ಅಂಶವನ್ನು ಗಮನಕ್ಕೆ ತರಲಾಯಿತು. ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಭರವಸೆಯ ಹಿನ್ನೆಲೆಯಲ್ಲಿ ಆರೋಪಿತ ನಕ್ಸಲರು ಶರಣಾಗಿದ್ದು, ಕನ್ಯಾಕುಮಾರಿಯ ಕೇಸ್ ಇನ್ನೂ ಇತ್ಯರ್ಥವಾಗದೆ ಜೈಲಿನಲ್ಲಿ ಕೊಳೆಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕನ್ಯಾಕುಮಾರಿ ಮಗು ಪೋಷಕರ ಪ್ರೀತಿ ಇಲ್ಲದೆ ಬೆಳೆಯುತ್ತಿದೆ, ಗೌರಿ ಲಂಕೇಶ್ ಹತ್ಯೆ ಬಳಿಕ ನಕ್ಸಲ್ ಶರಣಾಗತಿ ಪ್ರಕ್ರಿಯೆಗೆ ಸಂಬಂಧಪಟ್ಟ ರಾಜ್ಯ ಸಮಿತಿಯೂ ನಿಷ್ಕ್ರಿಯಗೊಂಡಿದೆ ಎಂದು ದೂರಿದರು.
ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬ ಆಶಯ ಇದ್ದರೂ ಯಾವುದೇ ಸೌಲಭ್ಯ ಸಿಕ್ಕಿಲ್ಲ ಮಾಸಾಶನ, ಭೂಮಿ, ಮನೆ ನೀಡಬೇಕು. ನಿಲಗುಳಿ ಪದ್ಮನಾಭ ಮತ್ತು ರಿಜ್ವಾನ ಬೇಗ್ ರವರಿಗೆ ತಲಾ ಎರಡು ಎಕರೆ ಜಮೀನು ಗುರುತಿಸಿ ಮಂಜೂರು ಮಾಡುವಂತೆ ಒತ್ತಾಯಿಸಿ ಪ್ರಸ್ತಾವನೆ ಕಳಿಸಿ ನಾಲ್ಕು ವರ್ಷವಾದರೂ ಭೂಮಿ ಮಂಜೂರಾಗಿಲ್ಲ ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಗೆ ಸಾಧ್ಯವಾದಷ್ಟು ಬೇಗ ಜಿಲ್ಲಾ ರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಜಿಲ್ಲಾ ಮಟ್ಟದ ಸಭೆ ಕರೆದು, ನೂತನವಾಗಿ ರಚನೆಯಾಗಿರುವ ರಾಜ್ಯ ಸಮಿತಿಗೆ ಆದ್ಯತೆ ಮೇಲೆ ಶಿಫಾರಸು ಮಾಡಬಹುದಾಗಿ ಭರವಸೆ ನೀಡಿದರು.
ಇದನ್ನೂ ಓದಿ; ರೈತರಿಗೆ ಮತ್ತೊಂದು ಗುಡ್ ನ್ಯೂಸ್; ಶೇ. 90ರಷ್ಟು ಸಹಾಯಧನದಲ್ಲಿ ಸಿಗಲಿದೆ ಈ ಸೌಲಭ್ಯ












