ರಾಮನಿಗೊಂದು ನ್ಯಾಯ ರಾಜಕಾರಣಿಗಳಿಗೊಂದು ನ್ಯಾಯವೇ: ಬ್ಯಾನರ್ ನಿಯಮಕ್ಕೆ ಹಿಂದೂ ಸಂಘಟನೆಗಳ ಅಸಮಾಧಾನ

ಎನ್.ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ)ಅಯೋಧ್ಯಾ ಶ್ರೀರಾಮ ಮಂದಿರ ಉದ್ಘಾಟನೆಗೆ ಅಳವಡಿಸಲಾದ ಬ್ಯಾನರ್ ನಿಂದಾಗಿ ಇದೀಗ ಹಿಂದೂ ಸಂಘಟನೆಗಳ ಅಸಮಾಧಾನ ವ್ಯಕ್ತವಾಗಿದೆ. ಈ ಕುರಿತು ಬಜರಂಗದಳ ನರಸಿಂಹರಾಜಪುರ ಪ್ರಖಂಡ ಬಜರಂಗದಳ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ

 

ಇದನ್ನೂ ಓದಿ; KOF ನಲ್ಲಿ ನೇಮಕಾತಿಗಾಗಿ; ಲೆಕ್ಕಪರಿಶೋಧಕರ ಭರ್ತಿಗೆ ಅರ್ಜಿ ಆಹ್ವಾನ

ಪೋಸ್ಟ್ ನಲ್ಲಿ ಏನಿದೆ?:
ಜನವರಿ 22 ರಂದು ನಡೆದ ರಾಮಮಂದಿರ ಉದ್ಘಾಟನೆಯ ಪ್ರಯುಕ್ತವಾಗಿ ನರಸಿಂಹರಾಜಪುರದ ಹಲವೆಡೆ ಬ್ಯಾನರ್ ಗಳನ್ನೂ ಅಳವಡಿಸಲಾಗಿತ್ತು. ಕಾರ್ಯಕ್ರಮ ಮುಗಿದ ಕೆಲವೇ ಗಂಟೆಗಳಲ್ಲಿ ಪೊಲೀಸ್ ಪ್ರಕಟಣೆ ಎಂದು ವಿವಿಧ ವಾಟ್ಸಾಪ್ ಗ್ರೂಪ್ ಗಳಲ್ಲಿ ಸಂದೇಶವೊಂದು ಹರಿದಾಡಿದೆ. ಆ ಸಂದೇಶದಲ್ಲಿ 24/01/2024 ರ ಸಂಜೆ 5 ಗಂಟೆ ಒಳಗೆ ಅಯೋದ್ಯೆ ರಾಮ ಮಂದಿರದ ಉದ್ಘಾಟನೆಗೆ ಅಳವಡಿಸಲಾದ ಬ್ಯಾನರ್ ಬಂಟಿಂಗ್ಸ್ ಹಾಗೂ ಪ್ಲಾಗ್ ಗಳನ್ನು ತೆರವು ಮಾಡಬೇಕು ಎಂದು ಠಾಣೆಯ ಸಬ್ ಇನ್ಸ್ಪೆಕ್ಟರ್ ಹೆಸರಲ್ಲಿ ಮೆಸೇಜ್ ಗಳು ಬರ ತೊಡಗಿದವು. ವಿಶೇಷ ಎಂದರೆ ನರಸಿಂಹರಾಜಪುರದ ಹಲವೆಡೆ ಬೇರೆ ಬೇರೆ ರೀತಿಯ ಬ್ಯಾನರ್ ಗಳು ಅದೆಷ್ಟೋ ತಿಂಗಳುಗಳಿಂದ ಇದ್ದರು ಕೇವಲ ರಾಮ ಮಂದಿರ ವಿಚಾರವಾಗಿ ಅಳವಡಿಸಿದ ಬ್ಯಾನರ್ ತೆರವುಗೊಳಿಸಲು ಹೇಳಿದ್ದು ವಿಶೇಷವಾಗಿತ್ತು. ಈ ಆದೇಶಕ್ಕೆ ನರಸಿಂಹರಾಜಾಪುರದ ಪಟ್ಟಣ ಪಂಚಾಯಿತಿಯು ಸಹ ಬಹಳಷ್ಟು ಮುತುವರ್ಜಿಯಿಂದ ಬ್ಯಾನರ್ ಗಳನ್ನು ತೆರವುಗೊಳಿಸಿತ್ತು.

ಇದನ್ನೂ ಓದಿ; ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವವರಿಗೆ ಗುಡ್‌ ನ್ಯೂಸ್‌; ಕೆಲವೇ ತಿಂಗಳಲ್ಲಿ ಕೇಬಲ್ ಸೇತುವೆ ಸಿದ್ದ

17 ಜನವರಿಯಂದು ಚಿಕ್ಕಮಗಳೂರಿನಲ್ಲಿ ನಡೆದ ಪೊಲೀಸ್ ಸಭೆಯಲ್ಲಿ ಕಾರ್ಯಕ್ರಮಗಳಿಗೆ ಬ್ಯಾನರ್ ಬಂಟಿಂಗ್ಸ್ ಅಳವಡಿಸಲು ಹಾಗೂ ಕಾರ್ಯಕ್ರಮ ಮುಗಿದ ಕೂಡಲೇ ಅವುಗಳನ್ನು ತೆರವುಗೊಳಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದಕ್ಕೆಲ್ಲಾ ಈ ನಿರ್ಧಾರ ಕಾರಣ ಎಂದು ತಿಳಿದು ವಿಶ್ವ ಹಿಂದೂ ಪರಿಷದ್ – ಬಜರಂಗದಳ ಸುಮ್ಮನಿತ್ತು. ಆದರೆ ಇದು ಕೇವಲ ಐತಿಹಾಸಿಕ ರಾಮ ಮಂದಿರ ಉದ್ಘಾಟನೆಗೆ ಮಾತ್ರ ಸೀಮಿತವಾಗಿದೆಯೇ?. ಈ ಪ್ರಶ್ನೆಗೆ ಕಾರಣವಾಗಿರುವುದು ವಾರದ ಹಿಂದಷ್ಟೇ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ರಾಜಕೀಯ ಪಕ್ಷದ ಮುಖಂಡ ಎಂ. ಶ್ರೀನಿವಾಸ್ ರವರ ಹುಟ್ಟು ಹಬ್ಬಕ್ಕೆ ನರಸಿಂಹರಾಜಪುರದ ಪಟ್ಟಣದಲ್ಲಿ ಬ್ಯಾನರ್ ಗಳನ್ನೂ ಅಳವಡಿಸಲಾಗಿದೆ. ವಾರ ಕಳೆಯುತ್ತಾ ಬಂದರು ಸಹ ಈ ಬ್ಯಾನರ್ ಗಳಿಗೆ ಮುಕ್ತಿ ಸಿಕ್ಕಿಲ್ಲ. ವಿಶೇಷ ಎಂದರೆ ಈ ಬ್ಯಾನರ್ ಗಳು ಪಟ್ಟಣ ಪಂಚಾಯಿತಿಯ ಪಕ್ಕ ಹಾಗೂ ಪೊಲೀಸ್ ಠಾಣೆಯ ಎದುರಿವೆ.

 

ಹಿಂದೂಗಳು ರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ಅಳವಡಿಸಿದ ಬ್ಯಾನರ್ ಗಳು ಕೇವಲ ಎರಡು ದಿನದ ಒಳಗೆ ತೆರವು ಆಗುವಂತೆ ನೋಡಿಕೊಂಡ ನರಸಿಂಹರಾಜಪುರದ ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ, ರಾಜಕೀಯ ಪಕ್ಷದ ಮುಖಂಡನ ಬ್ಯಾನರ್ ತೆರವುಗೊಳಿಸುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಪಟ್ಟಣ ಪಂಚಾಯಿತಿಗೆ ಸೂಚಿಸಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ. 500 ವರ್ಷಗಳ ಐತಿಹಾಸಿಕ ಹೋರಾಟಕ್ಕೆ ಸಂದ ಜಯವನ್ನು ಹಿಂದೂಗಳು ವ್ಯಕ್ತಪಡಿಸಲು ಬ್ಯಾನರ್ ಹಾಕಿದರೆ ಆದಷ್ಟು ಬೇಗವಾಗಿ ತೆರವಾಗಬೇಕು ಎಂದು ಆದೇಶ ಬರುತ್ತದೆ. ಆದರೆ ಒಬ್ಬ ರಾಜಕೀಯ ಮುಖಂಡನ್ನ ಬ್ಯಾನರ್ ವಾರದಿಂದ ಪಟ್ಟಣದಲ್ಲಿ ಇವರ ಕಣ್ಣೆದುರೇ ಇದ್ದು, ಹಲವು ಬಾರಿ ಕೇಳಿಕೊಂಡರು ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಈ ಬ್ಯಾನರ್ ತೆರವಾಗದೆ ಇದಲ್ಲಿ ಹಾಗೆ ಮುಂದಿನ ದಿನಗಳಲ್ಲಿ ಈ ರೀತಿಯ ದ್ವಂದ್ವ ನೀತಿ ಅನುಸರಿಸಿ ಹಿಂದೂಗಳಿಗೆ ತೊಂದರೆ ಕೊಟ್ಟರೆ ವಿಶ್ವ ಹಿಂದೂ ಪರಿಷತ್ – ಬಜರಂಗದಳ ತೀವ್ರ ತರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

 

ಕೊಪ್ಪ: ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದ ಶ್ರೀ ಮಠದ ಆವರಣದಲ್ಲಿ ಫೆಬ್ರವರಿ 25 ಭಾನುವಾರದಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ ಆಯೋಜಿಸಲಾಗಿದೆ ಎಂದು ಕೊಪ್ಪ ಸರ್ಕಾರಿ ಆಸ್ಪತ್ರೆಯ ದಂತ ಆರೋಗ್ಯ ಅಧಿಕಾರಿ ಡಾ. ಗಾನವಿ ತಿಳಿಸಿದ್ದಾರೆ.

ಇದನ್ನೂ ಓದಿ; ಪ್ರೊಬೆಷನರಿ ನೌಕರರನ್ನು ಏಕಾಏಕಿ ವಜಾ ಮಾಡುವಂತಿಲ್ಲ: ಹೈಕೋರ್ಟ್ ಆದೇಶ

ಸಂಪೂರ್ಣ ದಂತ ಪಂಕ್ತಿ ಕಳೆದುಕೊಂಡಿರುವ 45 ವರ್ಷ ಮೇಲ್ಪಟ್ಟ ಬಿಪಿಎಲ್ ಕಾಡುದಾರರ ಫಲಾನುಭವಿಗಳಿಗೆ ಉಚಿತ ದಂತ ಪಂಕ್ತಿ ಜೋಡಣೆಯನ್ನು ಮಾಡಲಾಗುವುದು. ಶಿಬಿರದಲ್ಲಿ 50 ಕ್ಕೂ ಹೆಚ್ಚು ನುರಿತ ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಗಳು ಭಾಗವಹಿಸಲಿದ್ದು, ಜಿಲ್ಲೆಯ ನಾಗರೀಕರು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು, ಒರಲ್ ಹೆಲ್ತ್ ಪಾಲಿಸಿ ಮತ್ತು ದಂತ ಆರೋಗ್ಯ ಚಿಕ್ಕಮಗಳೂರು ಇವರು ತಿಳಿಸಿದ್ದಾರೆ.

ಇದನ್ನೂ ಓದಿ; ಗಮನಿಸಿ; ಈ ಕಾರ್ಡ್ ನಲ್ಲಿ 5 ಲಕ್ಷ ಉಚಿತ ಚಿಕಿತ್ಸೆ; ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

ಫಲಾನುಭವಿಗಳು ಫೆಬ್ರವರಿ 17 ರ ಒಳಗಾಗಿ ತಮ್ಮ ತಾಲೂಕಿನ ಸರ್ಕಾರಿ ಆಸ್ಪತ್ರೆಯ ದಂತ ಆರೋಗ್ಯ ಅಧಿಕಾರಿಗಳನ್ನು ಭೇಟಿ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಮೊದಲು ಬಂದ ಐವತ್ತು ಜನರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.