ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶವದ ಅಸ್ಥಿಪಂಜರ ಪತ್ತೆ: ತನಿಖೆ ವೇಳೆ ಬಯಲಾಯ್ತು ಆಂಟಿ ಗಂಡನ ಮರ್ಡರ್ ರಹಸ್ಯ

ಕಡೂರು: (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶವದ ಅಸ್ಥಿಪಂಜರ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.


ಇದನ್ನೂ ಓದಿ:  BPL ಕಾರ್ಡ್‌ ಹೊಂದಿರುವ ವಿದ್ಯಾರ್ಥಿಗಳಿಗೆ ಸಿಗಲಿದೆ ಸ್ಕಾಲರ್‌ ಶಿಪ್; PUC ಪಾಸ್‌ ಆಗಿರುವ ವಿದ್ಯಾರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ


ಏನಿದು ಪ್ರಕರಣ:
ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಕಂಸಾಗರ ಗೇಟ್ ಬಳಿ ಜೂನ್ 2 ರಂದು ಸುಟ್ಟ ಸ್ಥಿತಿಯಲ್ಲಿ ಶವದ ಅಸ್ಥಿಪಂಜರ ಪತ್ತೆಯಾಗಿತ್ತು. ಪೊಲೀಸರ ತನಿಖೆಯಿಂದ ಮರ್ಡರ್ ರಹಸ್ಯ ಬಯಲಾಗಿದೆ.

ಕಡೂರು ಪಟ್ಟಣದ ಕೋಟೆ ನಿವಾಸಿ ಸುಬ್ರಹ್ಮಣ್ಯ (60) ಎಂಬವರೇ ಹತ್ಯೆಯಾದ ವ್ಯಕ್ತಿ. ಇವರು ನಾಪತ್ತೆಯಾಗಿದ್ದಾರೆ ಎಂಬುದಾಗಿ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಕಡೂರು ಪಟ್ಟಣದ ಕೋಟೆ ಬಡಾವಣೆಯಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದ ಸುಬ್ರಹ್ಮಣ್ಯ ಅವರ 55 ವರ್ಷ ವಯಸ್ಸಿನ ಪತ್ನಿಯ ಜೊತೆ ಕೋಟೆ ಬಡಾವಣೆಯ ಪ್ರದೀಪ್ (33 ವರ್ಷ) ಎಂಬಾತನಿಗೆ ಅನೈತಿಕ ಸಂಬಂಧ ಇತ್ತು.


ಇದನ್ನೂ ಓದಿ: ಭಾರತ್ ಪೆಟ್ರೋಲಿಯಂ ಲಿಮಿಟೆಡ್‌ ನಲ್ಲಿ ಜಾಬ್‌; SSLC, PUC ವಿದ್ಯಾರ್ಹತೆ


ಈ ಪ್ರದೀಪ್ ಎಂಬಾತ ಸುಬ್ರಹ್ಮಣ್ಯ ಅವರ ಮನೆಯ ನಿರ್ಮಾಣದ ಕಾಂಟ್ರಾಕ್ಟ್ ತೆಗೆದುಕೊಂಡಿದ್ದ. ಇದೇ ನೆಪದಲ್ಲಿ, ಮನೆಯ ನಿರ್ಮಾಣದ ದಾಖಲೆಗಳನ್ನು ನೀಡುವಂತೆ ಸುಬ್ರಹ್ಮಣ್ಯ ಅವರನ್ನು ಕರೆಸಿ ಹಗ್ಗದಿಂದ ಬಿಗಿದು ಕೊಲೆ ಮಾಡಲಾಗಿದೆ. ಬಳಿಕ ಪ್ರದೀಪ್ ಸ್ನೇಹಿತರಾದ ಸಿದ್ದೇಶ್, ವಿಶ್ವಾಸ್ ಜೊತೆ ಸೇರಿ ಸುಬ್ರಹ್ಮಣ್ಯ ಅವರ ಶವವನ್ನು ಪೆಟ್ರೋಲ್ ನಿಂದ ಸುಟ್ಟುಹಾಕಿ ತೆರಳಿದ್ದರು. ಮೇ 31 ರಂದು ಗಂಡ ನಾಪತ್ತೆಯಾಗಿರುವ ಬಗ್ಗೆ ಸುಬ್ರಹ್ಮಣ್ಯ ಪತ್ನಿ ಮೀನಾಕ್ಷಮ್ಮ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಕೊಲೆ ರಹಸ್ಯ ಬಯಲಾಗಿದೆ.

ಸದ್ಯ ಪ್ರದೀಪ್, ಸಿದ್ದೇಶ್, ವಿಶ್ವಾಸ್ ನನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.


ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಈ ಸಮುದಾಯದವರಿಗೆ ಭರ್ಜರಿ ಗುಡ್‌ ನ್ಯೂಸ್; ವಿವಿಧ ಯೋಜನೆಗೆ ಅರ್ಜಿ ಆಹ್ವಾನ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.