ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಜೂನ್ 11ರಂದು ಬೆಳಿಗ್ಗೆ 9 ಗಂಟೆಗೆ ಪಟ್ಟಣದಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಮುಸ್ಲಿಂ ಸಂಯುಕ್ತ ಒಕ್ಕೂಟದ ಅಧ್ಯಕ್ಷ ಸೈಯದ್ ಏಜಾಸ್ ಅಹಮ್ಮದ್ ತಿಳಿಸಿದ್ದಾರೆ.

ಸಂವಿಧಾನಕ್ಕೆ ವಿರುದ್ಧವಾಗಿ ವಕ್ಫ್ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಮುಸ್ಲಿಂ ಸಂಯುಕ್ತ ಜಮಾಅತ್ ಒಕ್ಕೂಟ ವತಿಯಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದ ಪಕ್ಕದ ಮೊಹಿಯುದ್ದೀನ್ ಜುಮಾ ಮಸೀದಿಯಿಂದ ಪ್ರತಿಭಟನಾ ಮೌನ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಪಟ್ಟಣದ ಮುಖ್ಯರಸ್ತೆಯ ಮೂಲಕ ಸಾಗುವ ಮೆರವಣಿಗೆಯು ಪುರಭವನದವರೆಗೆ ನಡೆಯಲಿದ್ದು, ನಂತರ ಬಹಿರಂಗ ಸಭೆ ನಡೆಯಲಿದೆ ಎಂದರು.
ಇದನ್ನೂ ಓದಿ: ಭಾರತ್ ಪೆಟ್ರೋಲಿಯಂ ಲಿಮಿಟೆಡ್ ನಲ್ಲಿ ಜಾಬ್; SSLC, PUC ವಿದ್ಯಾರ್ಹತೆ
ಉದ್ಘಾಟನೆ ಕಾರ್ಯಕ್ರಮದಲ್ಲಿ ಮೊಹಿಯುದ್ದೀನ್ ಶಾಫಿ ಜುಮಾ ಮಸೀದಿಯ ಖತೀಬ ಹನೀಫ್ ಖಾಸಿಮಿಯ, ಜಾಮಿಯ ಮಸೀದಿಯ ಖತೀಬ, ಅಬ್ದುಲ್ ಕಲೀಲ್ ಸಾಹೇಬ್, ರಾಘವೇಂದ್ರ ನಗರದ ನೂರುಲ್ ಅಲಂ ಜುಮಾ ಮಸೀದಿಯ ಖತೀಬ ಸದ್ದಾಂ ಹುಸೇನ್ ಫೈಝಿ ಅಲ್ಬುರ್ಹಾನಿ ಪಾಲ್ಗೊಳ್ಳಲಿದ್ದು, ಕರ್ನಾಟಕ ಉಲೇಮ ಒಕ್ಕೂಟದ ಕಾರ್ಯದರ್ಶಿ ಅಬ್ದುಲ್ ಅಝೀಜ್ ಧಾರಿಮಿ, ವಕೀಲರಾದ ಸುಧೀರ್ ಕುಮಾರ್ ಮುರೊಳ್ಳಿ, ಜೀಷಾನ್ ಅಲಿ ಸುರತ್ಕಲ್, ಚಿಕ್ಕಮಗಳೂರು ಜಿಲ್ಲೆಯ ವಕ್ಫ್ ಬೋರ್ಡ್ ಅಧ್ಯಕ್ಷ ಮೊಹಮ್ಮದ್ ಶಾಹಿದ್ ರಿಜ್ಜಿ, ಜಾಮಿಯ ಮಸೀದಿ ಅಧ್ಯಕ್ಷ ಜಹೂರ್ ಹುಸೇನ್, ತಾಲ್ಲೂಕಿನ ಮಸೀದಿಗಳ ಅಧ್ಯಕ್ಷರು, ಸದಸ್ಯರು, ಮುಸ್ಲಿಂ ಸಂಯುಕ್ತ ಜಮಾಅತ್ ಒಕ್ಕೂಟದ ಪದಾಧಿಕಾರಿಗಳು ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಈ ಸಮುದಾಯದವರಿಗೆ ಭರ್ಜರಿ ಗುಡ್ ನ್ಯೂಸ್; ವಿವಿಧ ಯೋಜನೆಗೆ ಅರ್ಜಿ ಆಹ್ವಾನ
ಒಕ್ಕೂಟದ ಕಾರ್ಯದರ್ಶಿಗಳಾದ ವೈ,ಹೆಚ್ ಅಬ್ದುಲ್ ಹಮೀದ್, ಉಪಾಧ್ಯಕ್ಷರುಗಳಾದ ಶಫಿ ಅಹಮದ್, ಶಬ್ಬೀರ್ ಅಹಮದ್ ಸದಸ್ಯರುಗಳಾದ ನೌಶಾದ್, ಮೊಹಮ್ಮದ್ ಸಾಧಿಕ್, ಬದ್ರಿಯಾ ಮೊಹಮ್ಮದ್, ಮಹಮ್ಮದ್ ಇಸ್ಮಾಯಿಲ್, ಜೈನುದ್ದೀನ್, ಬರ್ಕತ್ ಅಲಿ, ಹಾಫೀಜ್, ಮನ್ಸೂರ್ ಆಲಿ ಇತರರು ಇದ್ದರು.












