ಅಜ್ಜಂಪುರ: (ನ್ಯೂಸ್ ಮಲ್ನಾಡ್ ವರದಿ) ಪ್ರಿಯಕರನಿ ಗಾಗಿ ಅತ್ತೆಯ ಪ್ರಾಣ ತೆಗೆದಿದ್ದಲ್ಲದೆ, ಚಿನ್ನಾಭರಣವನ್ನೂ ಕದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ತಡಗ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ

ಅತ್ತೆಯನ್ನು ಸ್ವತಃ ಸೊಸೆಯೇ ಕೊಲೆ ಮಾಡಿರುವ ವಿಚಾರ, ಕಳ್ಳತನ ಪ್ರಕರಣದಲ್ಲಿ ಗೊತ್ತಾಗಿದೆ. ಆಗಸ್ಟ್ 11 ರಂದು ಈ ಘಟನೆ ನಡೆದಿದ್ದು, ಅತ್ತೆ ದೇವಿರಮ್ಮ ಅವರಿಗೆ ಅಶ್ವಿನಿ ಮುದ್ದೆಯಲ್ಲಿ ವಿಷದ ಜೊತೆಗೆ ನಿದ್ರೆ ಮಾತ್ರೆಗಳನ್ನು ಬೆರೆಸಿ ನೀಡಿದ್ದಳು. ಬಳಿಕ ದೇವಿರಮ್ಮ ಅವರಿಗೆ ದೇಹಸ್ಥಿತಿ ಹದಗೆಟ್ಟಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಅತ್ತೆ ದೇವಿರಮ್ಮ ಸಾವನ್ನಪ್ಪಿದ್ದಾರೆ. ಅಂತ್ಯಸಂಸ್ಕಾರ ಮುಗಿದ ದಿನವೇ ಮನೆಯಲ್ಲಿ ಕಳ್ಳತನವಾಗುತ್ತದೆ. ಈ ಕಳ್ಳತನ ಪ್ರಕಣದಿಂದ ಸೊಸೆಯೇ ಅತ್ತೆಯನ್ನ ವಿಷ ಹಾಕಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಈ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸಿಗಲಿದೆ 5000 ರೂ; ಅರ್ಜಿ ಸಲ್ಲಿಸುವುದು ಹೇಗೆ?
ಪೊಲೀಸರು ಅಶ್ವಿನಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆಕೆ ಸತ್ಯ ಒಪ್ಪಿಕೊಂಡಿದ್ದಾಳೆ. ಕಳ್ಳತನ ಮಾಡಿರುವ ಚಿನ್ನಾಭರಣ ಹಾಗೂ ಹಣವನ್ನು ತನ್ನ ಬಾಯ್ಫ್ರೆಂಡ್ ಆಂಜನೇಯನಿಗೆ ನೀಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಆಂಜನೇಯನನ್ನು ಸಹ ಬಂಧಿಸಿ, ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.












