ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮನೆಯ ಬಾಗಿಲಿನ ಬೀಗವನ್ನು ಮುರಿದು ಚಿನ್ನಾಭರಣ ಕಳ್ಳತನ ಮಾಡಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ: ಆದಿತ್ಯ ಯೋಗದಿಂದ ನಾಳೆಯಿಂದ ಈ 5 ರಾಶಿಗೆ ಎಲ್ಲವೂ ಶುಭ

ತಾಲೂಕಿನ ಕೈಮರ ಬೆಟ್ಟದಮನೆ ಗ್ರಾಮದ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬಾಗಿಲಿನ ಬೀಗವನ್ನು ಮುರಿದು ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಸಿಪಿಐ ಮೂಡಿಗೆರೆ ವೃತ್ತ ನೇತೃತ್ವದ ಪೊಲೀಸ್ ತಂಡ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಕೈಮರ ಬೆಟ್ಟದಮನೆ ಗ್ರಾಮದಲ್ಲಿ ಮನೆಯಿಂದ ಕಳವು ಮಾಡಿದ್ದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು ಸೇರಿದಂತೆ ವಿಜಯನಗರ ಜಿಲ್ಲೆ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಒಟ್ಟು ರೂ. 5.52 ಲಕ್ಷ ಮೌಲ್ಯದ ಚಿನ್ನಾಭರಣಗಳು ಮತ್ತು ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: SC-ST ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ಸ್ಕಾಲರ್ ಶಿಪ್
ಈ ಕಾರ್ಯಾಚಾರಣೆಯಲ್ಲಿ ಸಿಪಿಐ ಮೂಡಿಗೆರೆ ವೃತ್ತ ರಾಜಶೇಖರ್ ಕೆ ವಿ, ಪಿಎಸ್ಐ ಗೋಣಿಬೀಡು ಪೊಲೀಸ್ ಠಾಣೆ ಹರ್ಷವರ್ಧನ್ ಹೆಚ್ ಕೆ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಸುನೀಲ್ ನಾಯ್ಕ, ಸಚಿನ್, ಮನು ಕೆ ಎಸ್, ಕಾಳೀರಯ್ಯ, ಪ್ರದೀಪ್ ಮತ್ತು ಪಾಲಾಕ್ಷ ಇದ್ದರು.












