ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎರಡು ಸಿಂಧಿ ಹಸುಗಳು ಸೇರಿದಂತೆ ಎರಡು ಕರುಗಳನ್ನು ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ತಿಪ್ಪಗೊಂಡನಹಳ್ಳಿಯಲ್ಲಿ ನಡೆದಿದೆ.
ಇದನ್ನೂ ಓದಿ: ಆದಿತ್ಯ ಯೋಗದಿಂದ ನಾಳೆಯಿಂದ ಈ 5 ರಾಶಿಗೆ ಎಲ್ಲವೂ ಶುಭ

ತಿಪ್ಪಗೊಂಡನಹಳ್ಳಿ ಗ್ರಾಮದ ಸಂತೋಷ್ ಎಂಬುವವರು ಕೊಟ್ಟಿಗೆಯಲ್ಲಿ ಎರಡು ಹಸುಗಳನ್ನು ಕರುಗಳ ಸಮೇತ ಕಟ್ಟಿ ಹಾಕಿದ್ದರು. ಇಂದು ಬೆಳಗ್ಗೆ ನೋಡುವಾಗ ಹಸು ಹಾಗೂ ಕರುಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: SC-ST ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ಸ್ಕಾಲರ್ ಶಿಪ್
ಹಸು ಹಾಗೂ ಕರುಗಳನ್ನು ಹುಡುಕಿ ಕೊಡುವಂತೆ ಸಖರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.












