ಕಳಸ: (ನ್ಯೂಸ್ ಮಲ್ನಾಡ್ ವರದಿ) ಕೇಂದ್ರ ಸರ್ಕಾರವು 2019 ರಲ್ಲಿ ಹರ್ ಘರ್ ಜಲ್ ( ಪ್ರತಿ ಮನೆಗೆ ನೀರು) ಎಂಬ ಉದ್ದೇಶದಿಂದ ಜಾರಿಗೆ ತಂದ ಯೋಜನೆ ಕೆಲವೆಡೆ ಯಶಸ್ವಿಯಾಗಿದೆ. ಆದರೆ ಮಲೆನಾಡಿನ ಕೆಲವೆಡೆ ಈ ಯೋಜನೆ ಸಂಪೂರ್ಣ ವಿಫಲವಾಗಿದ್ದು ಕುಡಿಯುವ ನೀರಿಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಜೀವವಿಲ್ಲದ ದೇಹಗಳೊಂದಿಗೆ ಅಘೋರಿಗಳ ಜೀವನ…!; ಅಘೋರಿಗಳ ವಿಚಿತ್ರ ಜೀವನ ಶೈಲಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಮಕ್ಕಿ, ಸಿಡ್ಲಾರ್ ಮಕ್ಕಿ, ಹೆಮ್ಮಕ್ಕಿ ಭಾಗಗಳಲ್ಲಿ ಸುಮಾರು 1 ವರ್ಷದ ಹಿಂದೆಯೇ ಪೈಪ್ ಅಳವಡಿಸಲಾಗಿದ್ದು, ಆದರೆ ಅಲ್ಲಿನ ಗ್ರಾಮಸ್ಥರಿಗೆ ಜಲೋತ್ಸವದ ಮೂಲಕ ಇದುವರೆಗೂ ಒಂದು ಹನಿ ನೀರು ಕೂಡ ಬಳಕೆಗೆ ಸಿಕ್ಕಿಲ್ಲ.
ಟ್ಯಾಂಕ್ ವ್ಯವಸ್ಥೆ ಇಲ್ಲ:
ಜಲ ಜೀವನ್ ಮಿಷನ್ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಲಭಿಸಬೇಕು ಎಂಬ ಕಾರಣಕ್ಕಾಗಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಆದರೆ ಒಂದು ಕಾಮಗಾರಿಗೆ 2-3 ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿದ್ದು, ಕೆಲವೆಡೆ ನಲ್ಲಿ ಅಳವಡಿಕೆಗೆ ಒಬ್ಬ ಗುತ್ತಿಗೆದಾರನಿಗೆ ನೀಡಿದರೆ ಟ್ಯಾಂಕ್ ನಿರ್ಮಾಣ ಮತ್ತು ಮೋಟಾರ್ ಅಳವಡಿಕೆಗೆ ಬೇರೆ ಗುತ್ತಿಗೆದಾರನಿಗೆ ನೀಡಲಾಗಿದೆ. ಕಳಸ ತಾಲೂಕಿನ ಸಿಡ್ಲಾರ್ ಮಕ್ಕಿಯಲ್ಲೂ ಹೀಗೆ ಆಗಿದ್ದು, ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರಿಗೆ ಪೈಪ್ ಲೈನ್ ಅಳವಡಿಸಿದ ಗುತ್ತಿಗೆದಾರ ಟ್ಯಾಂಕ್ ನಿರ್ಮಾಣ ಮಾಡಿಲ್ಲ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಮಗೆ ಕೇವಲ ಪೈಪ್ ಅಳವಡಿಸಲು ಮಾತ್ರ ಗುತ್ತಿಗೆ ನೀಡಲಾಗಿದೆ ಎಂಬ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದ BPL ಕಾರ್ಡ್ ದಾರರಿಗೆ ಮುಖ್ಯಮಂತ್ರಿಯಿಂದ ಮುಖ್ಯ ಮಾಹಿತಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
ರಸ್ತೆಗಳಿಗೆ ಕಂಟಕವಾದ ಕಾಮಗಾರಿ:
ಗ್ರಾಮೀಣ ಭಾಗದ ರಸ್ತೆಗಳು ತೀರ ಚಿಕ್ಕದಾಗಿದ್ದು ಈ ರಸ್ತೆಗಳ ಚರಂಡಿಗಳಲ್ಲಿ ಕೆಲವು ಸಾರ್ವಜನಿಕರು ಕುಡಿಯುವ ನೀರಿನ ಉದ್ದೇಶಕ್ಕಾಗಿ ಪೈಪ್ ಅಳವಡಿಕೆ ಮಾಡಿದ್ದಾರೆ. ಆದರೆ ಜಲ ಜೀವನ್ ಯೋಜನೆಯಲ್ಲಿ ಪೈಪ್ ಸುಮಾರು 4-5 ಅಡಿ ಆಳವಾಗಿ ಅಳವಡಿಸಬೇಕಿದ್ದ ಹಿನ್ನೆಲೆಯಲ್ಲಿ ಚರಂಡಿಯಲ್ಲಿ ಪೈಪ್ ಅಳವಡಿಸದೆ ರಸ್ತೆಯ ಬದಿಯಲ್ಲಿ ಪೈಪ್ ಅಳವಡಿಕೆ ಮಾಡಲಾಗಿದೆ. ಈ ಕಾಮಗಾರಿ ಮಾಡುವ ಸಂದರ್ಭದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದನ್ನು ಕೇವಲ ತೇಪೆ ಹಚ್ಚುವ ಕೆಲಸ ಕೆಲ ಗುತ್ತಿಗೆದಾರರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಾಹನ ಸವಾರರರು ಆ ರಸ್ತೆಗಳಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ.
ಇದನ್ನೂ ಓದಿ: ಸ್ಕೂಲ್ ಬಸ್‌ಗೆ ಹಳದಿ ಕಲರ್ ಯಾಕೆ ಇರುತ್ತೆ ಗೊತ್ತಾ!; ಇದರ ಹಿಂದಿದೆ ರಹಸ್ಯ ಸಂದೇಶ!
ಅಧಿಕಾರಿಗಳ ಜಾಣ ಕುರುಡು:
ಜಲ ಜೀವನ್ ಮಿಷನ್ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ಹಾನಿಯಾಗುತ್ತಿದ್ದು, ಹಾಗೂ ಕಾಮಗಾರಿ ಕೂಡ ವಿಳಂಬವಾಗುತ್ತಿದ್ದು, ಜೊತೆಗೆ ಕಾಮಗಾರಿಗೆ ಬಳಸುತ್ತಿರುವ ಸಾಮಗ್ರಿಗಳು ಕೂಡ ಕಳಪೆ ಮಟ್ಟದ್ದಾಗಿದೆ ಎಂಬ ಆರೋಪಗಳು ಕೂಡ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಇದನ್ನೂ ಓದಿ: SC-ST ನೇಮಕಾತಿ ಕುರಿತು ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ; ಆದೇಶದಲ್ಲಿ ಏನಿದೆ ಗೊತ್ತಾ? ಇಲ್ಲಿದೆ ನೋಡಿ
“ನಮ್ಮ ಗ್ರಾಮದಲ್ಲಿ ಕಳೆದ 2023ರ ಜನವರಿಯಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಪೈಪ್ ಅಳವಡಿಸಲಾಗಿದ್ದು, ಆದರೆ ಇದುವರೆಗೂ ಆ ಪೈಪ್ ಮೂಲಕ ನಮಗೆ ಕುಡಿಯುವ ನೀರು ಪೂರೈಸಿಲ್ಲ ಹಾಗೂ ಕೆಲವು ಮನೆಗಳಿಗೆ ನಲ್ಲಿ ಕೂಡ ಅಳವಡಿಸಿಲ್ಲ. ಜೊತೆಗೆ ಕೆಲವು ಮನೆ ಬಳಿ ನಲ್ಲಿ ಅಳವಡಿಸದೆ ಎಲ್ಲೆಲ್ಲೋ ಅಳವಡಿಸಿದ್ದಾರೆ. ಈ ಬಗ್ಗೆ ಇಂಜಿನಿಯರ್ ಗಳು ಹಾಗೂ ಕಂಟ್ರಾಕ್ಟರ್ ಸರಿಯಾಗಿ ಯಾವುದೇ ಮಾಹಿತಿ ಕೂಡ ನೀಡುತ್ತಿಲ್ಲ”– ಸುಂದ್ರೇಶ್ ಕುಮಾರ್ ಹೆಮ್ಮಕ್ಕಿ
ವರದಿ: ಪ್ರೀತಮ್ ಹೆಬ್ಬಾರ್, ಕಳಸ
ಇದನ್ನೂ ಓದಿ:












